ಶಿರಹಟ್ಟಿ: ಕಾರ್ಯಕರ್ತರ ಉತ್ತಮ ಕಾರ್ಯದಿಂದ ಪಕ್ಷ ಉತ್ತುಂಗಕ್ಕೆರಿದ್ದು, ನೂತನ ಪದಾಧಿಕಾರಿಗಳು ಪಕ್ಷ, ಸರ್ಕಾರ ಹಾಗೂ ಜನರ ನಡುವೆ ಸಂಪರ್ಕ ಸೇತುವೆಯಾಗಿ ಕೆಲಸ ಮಾಡುವುದರ ಮೂಲಕ ಪಕ್ಷದ ಸಂಪೂರ್ಣ ಬಲವರ್ಧನೆಗೆ ಶ್ರಮಿಸಬೇಕು ಎಂದು ಶಾಸಕ ರಾಮಣ್ಣ ಲಮಾಣಿ ಹೇಳಿದರು.

ಪಟ್ಟಣದ ವಾಲ್ಮೀಕಿ ಭವನದಲ್ಲಿ ಗುರುವಾರ ನಡೆದ ನಗರ ಘಟಕದ ಮೋರ್ಚಾ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಪಕ್ಷದ ತತ್ವ, ಸಿದ್ಧಾಂತ, ನಿಷ್ಠೆ ಹಾಗೂ ಸಂಘಟನೆಯ ಅಡಿಯಲ್ಲಿ ಪದಾಧಿಕಾರಿಗಳು ಕಾರ್ಯನಿರ್ವಹಿಸಬೇಕು, ಕೇಂದ್ರ ಮತ್ತು ರಾಜ್ಯ ಸರ್ಕಾರದ ಜನಪ್ರಿಯ ಯೋಜನೆಗಳ ಮಾಹಿತಿಯನ್ನು ಜನರಿಗೆ ತಿಳಿಸಿ, ಸೌಲಭ್ಯಗಳನ್ನು ಕಲ್ಪಿಸಿಕೊಡಬೇಕು ಎಂದು ಹೇಳಿದರು.

ಒಂದು ಕಾಲದಲ್ಲಿ ಬಿಜೆಪಿ ಪಕ್ಷ ಸಾಕಷ್ಟು ಕಷ್ಟಗಳನ್ನು ಅನುಭವಿಸುತ್ತಿತ್ತು, ಆದರೆ ಇಂದು ಸಾಮಾನ್ಯ ಕಾರ್ಯಕರ್ತರ ಅವಿರತ ಶ್ರಮದಿಂದ ಬಿಜೆಪಿ ಪಕ್ಷ ಬಲಿಷ್ಠವಾಗಿದ್ದು, ದೇಶದ ರಕ್ಷಣೆ ಹಾಗೂ ಸಮಗ್ರ ಪ್ರಗತಿಗೆ ಪ್ರಧಾನಿ ನರೇಂದ್ರ ಮೋದಿಯಂತಹ ಸಮರ್ಥ ನಾಯಕ ಭಾರತಕ್ಕೆ ಸಿಕ್ಕಿದ್ದಾರೆ. ಹೀಗಾಗಿ ಪ್ರತಿಯೊಬ್ಬ ಕಾರ್ಯಕರ್ತರು ಪ್ರತಿ ಬೂತ್ ಮಟ್ಟದಲ್ಲೂ ಸಂಘಟನೆ ಹಾಗೂ ನಿರಂತರ ಕೆಲಸ ಮಾಡುವುದರ ಮೂಲಕ ಪಕ್ಷದ ಸಂಪೂರ್ಣ ಬಲವರ್ಧನೆಗೆ ಪ್ರಮಾಣಿಕ ಪ್ರಯತ್ನ ಮಾಡಬೇಕು ಎಂದು ಹೇಳಿದರು.

ತಾಲೂಕಾಧ್ಯಕ್ಷ ಫಕ್ಕೀರೇಶ ರಟ್ಟಿಹಳ್ಳಿ, ನಗರ ಘಟಕದ ಅಧ್ಯಕ್ಷ ರಾಮಣ್ಣ ಕಂಬಳಿ, ಸಿ.ಸಿ. ನೂರಶಟ್ಟರ, ದೀಪು ಕಪ್ಪತ್ತನವರ, ನಾಗರಾಜ ಕುಲಕರ್ಣಿ, ನಾಗರಾಜ ಲಕ್ಕುಂಡಿ, ಶ್ರೀನಿವಾಸ ಬಾರಬಾರ, ಎಚ್.ಎಂ. ದೇವಗಿರಿ, ಪ್ರಕಾಶ ನರಗುಂದೆ, ರವಿ ಹಳ್ಳಿ, ಈರಣ್ಣ ಕೋಟಿ ಸೇರಿದಂತೆ ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

You May Also Like

ಡಾ. ಚಂದ್ರು ಲಮಾಣಿ ಅಭಿಮಾನಿ ಬಳಗದಿಂದ ನಿತ್ಯ ಉಪಹಾರ ವ್ಯವಸ್ಥೆಗೆ ಚಾಲನೆ

ಲಕ್ಷ್ಮೇಶ್ವರ: ಪಟ್ಟಣದಲ್ಲಿ ಮಾಜಿ ಶಾಸಕ ಗಂಗಣ್ಣ ಮಹಾಂತಶೆಟ್ಟರ್ ಅವರು ಡಾ.ಚಂದ್ರು ಲಮಾಣಿ ಅಭಿಮಾನಿ ಬಳಗದಿಂದ ನಿತ್ಯ ಮದ್ಯಾಹ್ನದ ಲಘು ಉಪಹಾರ ವ್ಯವಸ್ಥೆಗೆ ಚಾಲನೆ ನೀಡಿದರು. ಈ ವೇಳೆ ಚಾಲನೆ ನೀಡಿ ಮಾತನಾಡಿದ ಮಾಜಿ ಶಾಸಕ ಗಂಗಣ್ಣ ಮಹಾಂತಶೆಟ್ಟರ, ಡಾ.ಚಂದ್ರು ಲಮಾಣಿ ಅಭಿಮಾನಿ ಬಳಗದ ಈ ಕಾರ್ಯ ಸಂಕಷ್ಟದಲ್ಲಿರುವ ನಿರ್ಗತಿಕರಿಗೆ ಸಹಾಯವಾಗಲಿದೆ ಎಂದರು.

ಆದುನಿಕತೆಯಲ್ಲಿ ಜಾನಪದ ಸಾಹಿತ್ಯ ಮರೆಯಾಗದಿರಲಿ: ದೊಡ್ಡಮನಿ

ಜಾನಪದ ಸಾಹಿತ್ಯ ಇಂದಿನ ಆಧುನಿಕ ಸ್ಪರ್ಶದಿಂದ ಕಣ್ಮರೆಯಾಗುತ್ತಿದ್ದು, ವೈಶಿಷ್ಟಪೂರ್ಣವಾದ ಈ ಸಾಹಿತ್ಯವನ್ನು ಉಳಿಸಿ ಬೆಳೆಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ಮಾಜಿ ಶಾಸಕ ರಾಮಕೃಷ್ಣ ದೊಡ್ಡಮನಿ ಹೇಳಿದರು.

ಶಿಗ್ಲಿ ಗ್ರಾಮ ಪಂಚಾಯತ ಉಪಚುನಾವಣೆ ಬಿಜೆಪಿ ಬೆಂಬಲಿತ ಅಭ್ಯರ್ಥಿ ಶೈಲಾ ಜಯಗಳಿಸಿದ್ದಾರೆ

ಲಕ್ಷ್ಮೇಶ್ವರ:ತಾಲೂಕಿನ ಶಿಗ್ಲಿ ಗ್ರಾಮಪಂಚಾಯತ 4 ನೇ ವಾರ್ಡ್ ಉಪಚುನಾವಣೆ ಯಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿ ಶೈಲಾ,…