ಲಕ್ಷ್ಮೇಶ್ವರ: ಜೋಳದ ಬೆಳೆಗೆ ಬೆಂಕಿ ಬಿದ್ದು ಮೂರು ಎಕರೆ ಪ್ರದೇಶದಲ್ಲಿ ಬೆಳೆದ ಜೋಳದ ಬೆಳೆ ಹಾನಿಯಾಗೀಡಾಗಿದ ಘಟನೆ ತಾಲೂಕಿನ ಬಡ್ನಿ ಗ್ರಾಮದಲ್ಲಿ ನಡೆದಿದೆ.

ಒಂದು ವಾರದ ಹಿಂದೆಯೆ ಅಕಾಲಿಕ ಮಳೆಯಿಂದ ಜೋಳದ ಬೆಳೆ ಸಂಪೂರ್ಣ ಬಿದ್ದು ಹಾಳಾಗಿ ಹೋಗಿತ್ತು. ಆದರೆ ಅಳಿದುಳಿದ ಅಲ್ಪ ಬೆಳೆಯಾದರು ಕೈಸೇರುತ್ತದೆ ಎನ್ನುವ ನಿರೀಕ್ಷೆಯಲ್ಲಿದ್ದ ರೈತನಿಗೆ ಇದರಿಂದ ಭಾರಿ ನಿರಾಶೆಯಾಗಿದೆ.

ಯಾರೋ ದುಷ್ಕರ್ಮಿಗಳು ಬೆಂಕಿ ಹಚ್ಚಿದ್ದಾರೆನ್ನಲಾಗಿದೆ. ಬಡ್ನಿ ಗ್ರಾಮದ ರೈತ ಭರಮಪ್ಪ ಬೀರಪ್ಪ ಕಂಬಳೆ ಎಂಬ ರೈತನಿಗೆ ಸೇರಿದ 3 ಎಕರೆ ಬಿಳಿ ಜೋಳ ಸುಟ್ಟು ಕರಕಲಾಗಿದ್ದು, ಇನ್ನೇನು ಕಟಾವಿಗೆ ಬಂದ ಬೆಳೆ ಕೈಸೇರದಂತಾಗಿದೆ.

ಜಾನುವಾರುಗಳಿಗೆ ವರ್ಷದ ಊಟಕ್ಕೆ ಆಸರೆಯಾಗಿದ್ದ ಮೇವು ಸುಟ್ಟಿದ್ದು ದೆಡೆಯಾದರೆ, ಮನೆ ಮಂದಿಗೆಲ್ಲ ಅನ್ನಕ್ಕೆದಾರಿಯಾಗಿದ್ದ ಬೆಳೆ ಕೈಸೇರದಂತಾಗಿದ್ದು ರೈತನನ್ನು ತೀವ್ರ ಸಂಕಷ್ಟಕ್ಕೀಡು ಮಾಡಿದೆ. ಲಕ್ಷ್ಮೇಶ್ವರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.   

Leave a Reply

Your email address will not be published. Required fields are marked *

You May Also Like

ಆಲಮಟ್ಟಿ : ಶಿವನ ಸನ್ನಿಧಿಯಲ್ಲಿ ಜನಸಾಗರ ವೈಭವ..!
ದೇವಲಾಪುರ ಬಸವ ಉದ್ಯಾನದಲ್ಲಿ ಬ್ರಹತ್ ಈಶ್ವರನ ಮೂತಿ೯ ವೀಕ್ಷಿಸಿದ ಭಕ್ತರು

ವರದಿ : ಗುಲಾಬಚಂದ ಜಾಧವಆಲಮಟ್ಟಿ : ಹಿಂದು ಸಂಪ್ರದಾಯದ ಅತ್ಯಂತ ಪವಿತ್ರ ಹಬ್ಬ ಮಹಾ ಶಿವರಾತ್ರಿ…

ಅವಿಕಾ ಜೊತೆ ರೊಮ್ಯಾನ್ಸ್ ಮಾಡಲಿರುವ ಆದಿ

ಯುವ ನಟ ಆದಿ ಸಾಯಿಕುಮಾರ್ ಅವರು ಮುಂಬರುವ ದೊಡ್ಡ ಬಜೆಟ್ ಚಿತ್ರ ‘ಅಮರನ್’ ಚಿತ್ರಕ್ಕಾಗಿ ಸಜ್ಜಾಗಿದ್ದಾರೆ.

ಭಾರತೀಯ ಡಿಎಲ್ ಯಾವ-ಯಾವ ದೇಶದಲ್ಲಿ ಬಳಸಬಹುದು?

ಭಾರತದ ಡ್ರೈವಿಂಗ್ ಲೈಸನ್ಸ್(ಡಿಎಲ್) ಬಳಸಿ ವಿಶ್ವದ ಕೆಲ ಅದ್ಭುತ ದೇಶಗಳಲ್ಲಿಯೂ ಕೂಡ ಡ್ರೈವಿಂಗ್ ಮಾಡಬಹುದಂತೆ.