ನವದೆಹಲಿ : ಭಾರತ ಹಾಗೂ ಅಮೆರಿಕದ ನಡುವೆ ಮಹತ್ತರವಾದ ರಕ್ಷಣಾ ಒಪ್ಪಂದಗಳಾಗಿವೆ.
ಎರಡೂ ರಾಷ್ಟ್ರಗಳ ನಡುವೆ ಮಿಲಿಟರಿ ತಂತ್ರಜ್ಞಾನ, ವರ್ಗೀಕೃತ ಉಪಗ್ರಹ ದತ್ತಾಂಶ ಹಾಗೂ ಸೂಕ್ಷ್ಮ ಮಾಹಿತಿಗಳ ವಿನಿಮಯದ ಕುರಿತು 2+2 ಮಾತುಕತೆ ನಡೆದಿವೆ.

ದ್ವಿಪಕ್ಷೀಯ ರಕ್ಷಣಾ ಮತ್ತು ಮಿಲಿಟರಿ ಸಂಬಂಧಗಳನ್ನು ವೃದ್ಧಿಸಿಕೊಳ್ಳಲು ಇಂದಿನ ಮಾತುಕತೆ ವೇಳೆ ಒಪ್ಪಂದಕ್ಕೆ ಬರಲಾಗಿದೆ. ಪೂರ್ವ ಲಡಾಕ್ ನಲ್ಲಿ ಚೀನಾ ಜೊತೆಗೆ ಸೇನೆ ನಿಯೋಜನೆ ಸಂಘರ್ಷದ ನಡುವೆ ಅಮೆರಿಕ ಜೊತೆಗೆ ಭಾರತದ ರಕ್ಷಣಾ ಮತ್ತು ಮಿಲಿಟರಿ ಮಾತುಕತೆ ಮಹತ್ವ ಪಡೆದಿದೆ. ಇದು ಚೀನಾಕ್ಕೆ ಪರೋಕ್ಷವಾಗಿ ಎಚ್ಚರಿಕೆಯ ಗಂಟೆಯಾಗಿದೆ.

ಈ ಮಾತುಕತೆಯಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್, ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್, ಅಮೆರಿಕಾದ ರಾಜ್ಯ ಕಾರ್ಯದರ್ಶಿ ಮೈಕ್ ಪೊಂಪಿಯೊ ಮತ್ತು ರಕ್ಷಣಾ ಕಾರ್ಯದರ್ಶಿ ಮಾರ್ಕ್ ಟಿ ಎಸ್ಪರ್ ಇದ್ದರು.

ಆ ನಂತರ ಮಾತನಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್, ಎರಡು ದೇಶಗಳ ನಡುವೆ ಮಿಲಿಟರಿಯ ಸಂಬಂಧ ಹಾಗೂ ಸಹಕಾರ ವೃದ್ಧಿಯಾಗುತ್ತಿದೆ. ಎರಡು ದಿನಗಳ ಸಭೆಯಲ್ಲಿ, ಮೂರನೇ ನೆರೆ ರಾಷ್ಟ್ರಗಳೊಂದಿಗೆ ಅಥವಾ ಬೇರೆ ದೇಶಗಳ ಮುಂದೆ ನಮ್ಮ ಜಂಟಿ ಸಹಕಾರ ಚಟುವಟಿಕೆಗಳು ಮತ್ತು ಇತರ ಸಾಮರ್ಥ್ಯಗಳ ಹೆಚ್ಚಿಸುವಿಕೆಗೆ ಇರುವ ಸಾಧ್ಯತೆಗಳ ಕುರಿತು ಚರ್ಚಿಸಿದೆವು ಎಂದು ಹೇಳಿದ್ದಾರೆ.

Leave a Reply

Your email address will not be published. Required fields are marked *

You May Also Like

ಕೊರೋನಾ ಸೋಂಕಿನಿಂದ ಗುಣ ಹೊಂದಿದ 12 ದಿನದ ಮಗುವಿನ ಹೆಸರೇನು ಗೊತ್ತಾ?

ಒಂಭತ್ತು ದಿನದ ಮಗುವಿನಲ್ಲಿ ಕೊರೋನಾ ಪಾಸಿಟಿವ್ ಕಂಡು ಬಂದಿತ್ತು. ಇದೀಗ 12 ದಿನದ ಈ ಮಗು ಕೊರೋನಾ ಸೋಂಕಿನಿಂದ ಗುಣ ಹೊಂದಿದ್ದು ಮಗುವಿಗೆ ಇಂದು ಹೆಸರಿಡಲಾಗಿದೆ.

ಮದುಮಗ ಹಾರ ಹಾಕಿದ್ ಕೂಡಲೇ ಖುಷಿಯಾದ ಮದುಮಗಳು ಮಾಡಿದ್ದೇನು?

ಉತ್ತರ ಪ್ರದೇಶ: ಪ್ರತಿಯೊಬ್ಬರಿಗೂ ಮದುವೆ ಬಗ್ಗೆ ಅವರದ್ದೆ ಕನಸಿರುತ್ತೆ. ಆಸೆ-ಆಕಾಂಕ್ಷೆಗಳಿರುತ್ತೆ. ಆದರೆ ಇಲ್ಲೊಬ್ಬ ಯುವತಿ ಮದುಮಗ ತನ್ನ ಕೊರಳಿಗೆ ಹಾರ ಹಾಕಿದ ತಕ್ಷಣ ತನ್ನ ಪ್ರತಿಕ್ರಿಯೇ ಹೇಗಿರಬೇಕೆಂದು ವಿಭಿನ್ನ ಕಲ್ಪನೆಯೊಂದನ್ನು ಕಟ್ಟಿಕೊಂಡಿದ್ದಳು. ಈ ಕಾರಣಕ್ಕಾಗಿ ಏನೋ ಮಾಡಲು ಹೋಗಿ ಯಡವಟ್ಟು ಮಾಡಿಕೊಂಡ ಘಟನೆ ಉತ್ತರಪ್ರದೇಶದಲ್ಲಿ ನಡೆದಿದೆ.

ಹುಡುಗಿ ಫೋನ್ ನಂಬರ್ ಕೊಡಲಿಲ್ಲ ಎಂಬ ಕಾರಣಕ್ಕೆ ಈ ಪಾಪಿ ಮಾಡಿದ್ದೇನು?

ಲಕ್ನೋ : ಬಾಲಕಿ ಫೋನ್ ನಂಬರ ಕೊಡಲಿಲ್ಲ ಎಂಬ ಕಾರಣಕ್ಕೆ ಅಪ್ರಾಪ್ತೆ ಹಾಗೂ ಪೋಷಕರ ಮೇಲೆ ಹಲ್ಲೆ ನಡೆಸಿದ ಘಟನೆ ನಡೆದಿದೆ.