ಹೊಸದಿಲ್ಲಿ: ಭಾರತದ ಶತ್ರು, ಹಿಜ್ಬುಲ್ ಮುಜಾಹಿದ್ದೀನ್ ಅತ್ಯುಗ್ರ ರಿಯಾಜ್ ನಾಯ್ಕೂನನ್ನು ಭದ್ರತಾ ಪಡೆ ಯೋಧರು ಮುಗಿಸಿದ್ದಾರೆ. ಪುಲ್ವಾಮಾ ಬಳಿ ನಡೆದ ಎನ್ಕೌಂಟರಿನಲ್ಲಿ ಭಾರತೀಯ ಯೋಧರ ದಾಳಿಗೆ ಉತ್ತರ ನೀಡಲಾಗದೇ ಉಗ್ರ ರಿಯಾಜ್ ನಾಯ್ಕೂ ಹತನಾಗಿದ್ದಾನೆ. ದೊರೆತ ಖಚಿತ ಸುಳಿವನ್ನಾಧರಿಸಿ ಯೋಧರು ಮುಂಜಾನೆಯಿಂದಲೇ ಉಗ್ರರು ಅಡಗಿದ್ದ ಪ್ರದೇಶವನ್ನು ಸುತ್ತುವರೆದು ಶರಣಾಗುವಂತೆ ಉಗ್ರರಿಗೆ ಸೂಚನೆ ನೀಡಿದ್ದರು. ಆದರೆ ಉಗ್ರಗಾಮಿಗಳು ಗುಂಡು ಹಾರಿಸಲು ಮುಂದಾದ ಕಾರಣ ಎನ್‍ಕೌಂಟರ್ ನಡೆದು ಅದರಲ್ಲಿ ರಿಯಾಜ್ ಸೇರಿದಂತೆ ಮೂವರು ಭಯೋತ್ಪಾದಕರು ಹತರಾದರು.

Leave a Reply

Your email address will not be published.

You May Also Like

ತಮಿಳುನಾಡಿನಲ್ಲಿ ಕೊರೋನಾ ತಾಂಡವ: ಒಂದೇ ದಿನಕ್ಕೆ 161 ಪಾಸಿಟಿವ್

ತಮಿಳುನಾಡಿನಲ್ಲಿ ಮಹಾಮಾರಿ ಕೊರೊನಾ ವೈರಸ್ ತಾಂಡವಾಡುತ್ತಿದೆ. ಇಂದು ಒಂದೇ ದಿನ ಚೆನ್ನೈನಲ್ಲಿ 138 ಜನ ಸೇರಿದಂತೆ ತಮಿಳುನಾಡಿನಾದ್ಯಂತ ಒಟ್ಟು 161 ಪ್ರಕರಣಗಳು ಪತ್ತೆಯಾಗಿವೆ. ಈ ನಿಟ್ಟಿನಲ್ಲಿ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 2,323ಕ್ಕೆ ಏರಿಕೆ ಕಂಡಿದೆ.

ಆಹಾರ ಕಿಟ್ ಗಾಗಿ: ಶಾಸಕರ ಮನೆಗೆ ಮುತ್ತಿಗೆ

ಸಾರ್ವಜನಿಕರು ನೂರಾರು ಸಂಖ್ಯೆಯಲ್ಲಿ ಶಾಸಕರ ಮನೆಗೆ ಮುತ್ತಿಗೆ ಹಾಕಿದರು. ರಾಜ್ಯದ ವಿವಿಧೆಡೆ ಬಡವರಿಗೆ ಆಹಾರ ಕಿಟ್ ವಿತರಿಸುತ್ತಿದ್ದಾರೆ. ನಮಗೂ ಆಹಾರದ ಕಿಟ್ಗಳನ್ನು ಕೊಡಿ ಎಂದು ಆಗ್ರಹಿಸಿದರು.

ಯಪ್ಪಾ..!, ಗಂಡ ತನ್ನ ಜೊತಿ ಜಗಳಾ ಆಡಂಗಿಲ್ಲಾ ಅಂತ ಡಿವೋರ್ಸ್ ಕೇಳ್ಯಾಳಂತ!

ಗಂಡ-ಹೆಂಡರ ಜಗಳ ಗಂಧ ತೀಡಿದಂಗ ಅಂತಾರ. ಅಷ್ಟ ಯಾಕ, ಗಂಡ-ಹೆಂಡರ ಜಗಳ ಉಂಡು ಮಲಗೋ ತನಕ ಅಂತಾನೂ ಅಂತಾರ. ಆದ್ರ ಗಂಡ ತನ್ನ ಜೊತಿಗೆ ಜಗಳಾನ ಆಡವಲ್ಲಾ, ತನಗ ಭಾಳ್ ಪ್ರೀತಿ ಮಾಡ್ತಾನಾ ಅಂತ ಹೆಣ್ಮಗಳ ಒಬ್ಬಾಕಿ ಕೋರ್ಟ್ ಕಟ್ಟಿ ಹತ್ತಿದ ಕತಿ ಇದು..

ಸಿದ್ದರಾಮಯ್ಯಗೆ ಧಮ್ ಇದ್ದರೆ ಚಿದಂಬರಂ ಮುಂದೆ ಮಾತನಾಡಲಿ – ಕಟೀಲ್ ಸವಾಲು!

ಮಡಿಕೇರಿ : ನನ್ನ ಧಮ್ ಬಗ್ಗೆ ಮಾತನಾಡುವ ಸಿದ್ದರಾಮಯ್ಯ ಅವರಿಗೆ ಧಮ್ ಇದ್ದರೆ ಚಿದಂಬರಂ ಮುಂದೆ ನಿಂತು ಮಾತನಾಡಲಿ ಎಂದು ಕಟೀಲ್ ಸವಾಲು ಹಾಕಿದ್ದಾರೆ.