ದೆಹಲಿ: ಮತ್ತೆ ಬ್ರಿಟನ್‌ ವಿಮಾನಗಳಿಗೆ ಜನವರಿ 7ರ ವರೆಗೆ ಭಾರತ ನಿರ್ಬಂಧ ಹೇರಿದೆ. ಬ್ರಿಟನ್‌ ನಲ್ಲಿ ಹೊಸ ರೂಪಾಂತರಿ ವೈರಸ್‌ ಪತ್ತೆ ಹಿನ್ನೆಲೆ, ಮುನ್ನೆಚ್ಚರಿಕಾ ಕ್ರಮವಾಗಿ ಈ ನಿರ್ಧಾರ ಕೈಗೊಳ್ಳಲಾಗಿದೆ.

ಈಗಾಗಲೇ ಭಾರತದಲ್ಲೂ 20 ಜನರಲ್ಲಿ ಹೊಸ ರೂಪಾಂತರಿ ಕೊರೊನಾ ಸೋಂಕು ಕಾಣಿಸಿಕೊಂಡಿದೆ. ಇದರಿಂದ ಆತಂಕಗೊಂಡಿದ್ದು, ಬ್ರಿಟನ್‌ ವಿಮಾನಗಳಿಗೆ ಬ್ರೇಕ್‌ ಹಾಕಿದೆ. ಭಾರತ ಒಂದೇ ಅಲ್ಲದೇ, ಎಲ್ಲಾ ದೇಶಗಳು ಬ್ರಿಟನ್‌ ವಿಮಾನಗಳಿಗೆ ತಡೆ ಒಡ್ಡಿದೆ. ಈ ಹಿಂದೆ ಡಿ.23ರಿಂದ ಡಿ.31ರ ವರೆಗೂ ವಿಮಾನ ಸಂಚಾರವನ್ನು ತಡೆ ಹಿಡಿಯಲಾಗಿತ್ತು. ಇದೀಗ ಮತ್ತೆ 7 ದಿನಗಳ ಕಾಲ ನಿರ್ಬಂಧಿಸಲಾಗಿದೆ.

ಭಾರತದಲ್ಲಿ ಬ್ರಿಟನ್‌ ರೂಪಾಂತರಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ನಿನ್ನೆ 6 ಮಂದಿಯಲ್ಲಿ ಕಾಣಿಸಿಕೊಂಡಿದ್ದ ಸೋಂಕು, ಇಂದು ಹೊಸದಾಗಿ 14 ಮಂದಿಯಲ್ಲಿ ಪತ್ತೆಯಾಗಿದೆ. ಈ ಮೂಲಕ ಸೋಂಕಿತರ ಸಂಖ್ಯೆ 20ಕ್ಕೆ ಏರಿಕೆ ಕಂಡಿದೆ. ಇವರೆಲ್ಲರನ್ನೂ  ಆಯಾ ರಾಜ್ಯದಲ್ಲಿ ಐಸೋಲೇಷನ್ ನಲ್ಲಿ ಇಡಲಾಗಿದೆ. ಇನ್ನು ಬ್ರಿಟನ್‌ ನಿಂದ ಬಂದವರು ಮತ್ತು ಅವರ ಸಂಪರ್ಕದಲ್ಲಿರುವವರನ್ನು ಕೇಂದ್ರ ಸರ್ಕಾರ ಪತ್ತೆ ಹಚ್ಚಲಾಗುತ್ತಿದೆ.

Leave a Reply

Your email address will not be published. Required fields are marked *

You May Also Like

ಅಂತರ್ ರಾಜ್ಯ ಸಂಚಾರಕ್ಕೆ ಮುಕ್ತ ಅವಕಾಶ – ಸರ್ಕಾರ!

ನವದೆಹಲಿ: ಕೇಂದ್ರ ಸರ್ಕಾರದ ನೂತನ ಲಾಕ್ಡೌನ್ ಮಾರ್ಗಸೂಚಿ ಪ್ರಕಟಿಸಿದ್ದು, ಅಂತರ್ ರಾಜ್ಯ ಸಂಚಾರಕ್ಕೆ ಮುಕ್ತ ಅವಕಾಶ…

ಸಾಮಾಜಿಕ ಜಾಲತಾಣ ದುರ್ಬಳಕೆ ಮಾಡಿಕೊಂಡರೆ ಹುಷಾರ್!

ನವದೆಹಲಿ : ಸಾಮಾಜಿಕ ಜಾಲತಾಣ ದುರ್ಬಳಕೆಯಾದರೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಖಾತೆ ಸಚಿವ ರವಿಶಂಕರ್ ಪ್ರಸಾದ್ ಎಚ್ಚರಿಕೆ ನೀಡಿದ್ದಾರೆ.

ರಾಜ್ಯದಲ್ಲಿಂದು 416 ಕೊರೊನಾ ಪಾಸಿಟಿವ್: ಯಾವ ಜಿಲ್ಲೆಯಲ್ಲಿ ಎಷ್ಟು..?

ಬೆಂಗಳೂರು: ರಾಜ್ಯದಲ್ಲಿಂದು 416 ಕೊರೊನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ಈ ಮೂಲಕ ಸೋಂಕಿತರ ಸಂಖ್ಯೆ 8697…

ಆಗಸ್ಟ್ 15ಕ್ಕೆ ದೇಶಕ್ಕೆ ಕೊರೋನಾ ಮೆಡಿಸಿನ್ ಸಿಗುತ್ತಾ?

ಕೊರೋನಾ ಲಸಿಕೆ ಉತ್ಪಾದನೆ ಹೇಗೆ? ದೆಹಲಿ: ಜುಲೈ 3 ಶುಕ್ರವಾರದಂದು ಭಾರತೀಯ ವೈದ್ಯಕೀಯ ಸಂಶೋಧನಾ ಪರಿಷತ್…