ಮುಂಬೈ: 2020ರಲ್ಲಿ ಲಾಕ್‌ ಡೌನ್‌ ನಿಂದ ಬೇಸತ್ತ ಜನ ಈಗ ಮತ್ತದೇ ಲಾಕ್‌ ಡೌನ್‌ ಮೊರೆ ಹೋಗುವ ಅನಿವಾರ್ಯತೆ ಇದೆ. ಯಾಕೆಂದರೆ, ಬ್ರಿಟನ್‌ ನಲ್ಲಿ ಹೊಸ ರೂಪಾಂತರಿ ಕೊರೊನಾ ವೈರಸ್‌ ಹರಡುತ್ತಿದ್ದು, ಅಲ್ಲಿನ ಜನ ತ್ತರಿಸಿ ಹೋಗಿದ್ದಾರೆ. ಈಗಾಗಲೇ ಬ್ರಿಟನ್‌ ಅಲ್ಲದೇ, ಬೇರೆ ದೇಶಗಳಿಗೂ ಈ ವೈರಸ್‌ ಹಬ್ಬಿದ್ದು, ಭಾರತವೇನು ಹೊರತಾಗಿಲ್ಲ.

ಇದರೊಂದಿಗೆ ಭಾರತದಲ್ಲಿ ಕೊರೊನಾ ವೈರಸ್‌ನ ಎರಡನೇ ಅಲೆ ಶುರುವಾಗಿದ್ದು, ಈಗ ದೇಶದಲ್ಲಿ ಎರಡೆರಡು ವೈರಾಣುಗಳನ್ನು ಎದುರಿಸಬೇಕಾಗಿದೆ. ಈ ಹಿನ್ನೆಲೆಯಲ್ಲಿ ಮಹಾರಾಷ್ಟ್ರ 2021 ಹೊಸ ವರ್ಷವನ್ನು ಲಾಕ್‌ ಡೌನ್‌ ಮೂಲಕವೇ ಬರ ಮಾಡಿಕೊಳ್ಳಲು ಮುಂದಾಗಿದೆ. ಬ್ರಿಟನ್‌ ವೈರಸ್‌ ಹರಡುವುದನ್ನು ತಡೆಗಟ್ಟುವ ಸಲುವಾಗಿ ಮುನ್ನೆಚ್ಚರಿಕೆಯಿಂದ ಮಹಾರಾಷ್ಟ್ರ ಸರ್ಕಾರ ಲಾಕ್‌ ಡೌನ್‌ ಮಾಡಿದೆ.

ಇನ್ನು ಈ ಹಿಂದೆ ಇನ್ನೂ 6 ತಿಂಗಳ ಕಾಲ ಮಾಸ್ಕ್‌ ಕಡ್ಡಾಯ ಎಂದು ಘೊಷಿಸಲಾಗಿತ್ತು. ಆದರೆ, ಲಾಕ್‌ ಡೌನ್‌ ಮಾಡಲ್ಲ ಎಂದಿದ್ದ ಸರ್ಕಾರ ಈಗ ಅನಿವಾರ್ಯತೆ ದೃಷ್ಟಿಯಿಂದ ಲಾಕ್‌ ಡೌನ್‌ ಮಾಡಿದೆ. ಇನ್ನು ಕೆಲವೇ ದಿನಗಳಲ್ಲಿ ದೇಶದ ಇತರೆ ರಾಜ್ಯಗಳು ಸಹ ಲಾಕ್‌ ಡೌನ್‌ ಮೊರೆ ಹೋಗುವ ಸಾಧ್ಯೆತೆ ದಟ್ಟವಾಗಿದೆ. 2020 ಹಾಗೂ 2021ರ ಹೊಸ ವರ್ಗಳು ಇಡೀ ಜಗತ್ತಿಗೆ ಕರಾಳ ವರ್ಷಗಳಾಗಿ ಇತಿಹಾಸದ ಪುಟ ನಿರ್ಮಿಸಲಿವೆ.

ಇನ್ನು ಸಾರ್ವಜನಿಕರು ಬಹಳ ಎಚ್ಚರಿಕೆಯಿಂದ ಇರಬೇಕಾಗಿದೆ. ಹೊಸ ರೂಪಾಂತರಿ ವೈರಸ್‌ನ ಲಕ್ಷಣಗಳು ಸ್ಪಷ್ಟವಾಗಿರದ ಕಾರಣ, ಜನರು ಎಚ್ಚರ ವಹಿಸಬೇಕಾಗಿದೆ.

Leave a Reply

Your email address will not be published. Required fields are marked *

You May Also Like

ಪ್ರಿಯಾಂಕಾ ಗಾಂಧಿಗೆ ನೀಡಿದ ವಿಶೇಷ ಭದ್ರತೆ, ನಿವಾಸ ಹಿಂಪಡೆದ ಕೇಂದ್ರ ಸರ್ಕಾರ

ನವದೆಹಲಿ: ಎಐಸಿಸಿ ಅಧ್ಯಕ್ಷೆ ಸೋನಿಯಾಗಾಂಧಿ ಪುತ್ರಿ ಪ್ರಿಯಾಂಕಾ ಗಾಂಧಿ ಅವರಿಗೆ ನೀಡಿದ ವಿಶೇಷ ಭದ್ರತೆ ಹಾಗೂ…

ಚೀನಾ ಟೆನ್ಷನ್: ಸೇನಾಧಿಕಾರಿ, ಇಬ್ಬರು ಸೈನಿಕರು ಬಲಿ!

ದೆಹಲಿ: ಚೀನಾ ಮತ್ತು ಭಾರತೀಯ ಯೋಧರ ನಡುವಿನ ಮುಖಾಮುಖಿಯಲ್ಲಿ ಲಡಾಖ್ ನ ಗಾಲ್ವಾನ್ ನಲ್ಲಿ ಒಬ್ಬ…

ಕೇಸ್ ನಂ 1 ರಿಂದ ಕೊರೊನಾ ಸೋಂಕು 8 ಲಕ್ಷ ತಲುಪಿದ್ದು ಹೇಗೆ? : ಮೂರೇ ದಿನದಲ್ಲಿ 1 ಲಕ್ಷ ಹೊಸ ಪಾಸಿಟಿವ್

ನವದೆಹಲಿ: ಮೂರು ದಿನದ ಹಿಂದಷ್ಟೇ ದೇಶದಲ್ಲಿ 7 ಲಕ್ಷ ದಾಟಿದ್ದ ಕೋರೊನಾ ಸೋಂಕಿತರ ಸಂಖ್ಯೆ ಈಗ…

ಸ್ತ್ರೀ ಅವತಾರದಲ್ಲಿ ಮದುವೆ ಮನೆಗೆ ಭೇಟಿ ನೀಡಿದ ಪ್ರಿಯತಮ

ಭಾಡೋಧಿ ಜಿಲ್ಲೆಯ ವ್ಯಕ್ತಿಯೊಬ್ಬ ತನ್ನ ಹುಡುಗಿ ಬೇರೆಯವನೊಂದಿಗೆ ವಿವಾಹವಾಗುತ್ತಿದ್ದ ಸಂದರ್ಭದಲ್ಲಿ ಈತ ಸ್ತ್ರೀ ಅವತಾರದಲ್ಲಿ ತಯಾರಾಗಿ ಗರ್ಲ್ ಫ್ರೆಂಡ್​ ಮನೆಗೆ ಎಂಟ್ರಿ ಕೊಟ್ಟಿದ್ದಾನೆ.