ಹೈದ್ರಾಬಾದ್ : ಹೈದ್ರಾಬಾದ್ ನಲ್ಲಿ ಮತ್ತೆ ಮಳೆರಾಯ ತನ್ನ ರೌದ್ರನರ್ತನ ಪ್ರಾರಂಭಿಸಿದ್ದು, ಮತ್ತೆ ಇಬ್ಬರನ್ನು ಬಲಿ ಪಡೆದಿದ್ದಾನೆ. ಈ ಮೂಲಕ ಮಹಾಮಳೆಗೆ 50 ಜನ ಬಲಿಯಾದಂತಾಗಿದೆ.

ನಗರದ ಮಲಕ್ ಪೇಟ್ ನಲ್ಲಿ 50 ವರ್ಷದ ವ್ಯಕ್ತಿಯೊಬ್ಬರು ವಿದ್ಯುತ್ ಸ್ಪರ್ಶದಿಂದ ಸಾವನ್ನಪ್ಪಿದ್ದರೆ, ಆರ್.ಕೆ. ಪಿಇಟಿ ಪ್ರದೇಶದಲ್ಲಿ ಗೋಡೆ ಕುಸಿದ ಪರಿಣಾಮ 5 ವರ್ಷದ ಮಗು ಪ್ರಾಣ ಬಿಟ್ಟಿದೆ. ಇಲ್ಲಿಯವರೆಗೂ ಮಳೆಯ ಅವಂತಾರಕ್ಕೆ ಸುಮಾರು 50 ಜನ ಪ್ರಾಣ ಬಿಟ್ಟಂತಾಗಿದೆ. ಭಾರಿ ಮಳೆಯಿಂದಾಗಿ ರಸ್ತೆಗಳು ಸಂಪೂರ್ಣವಾಗಿ ಜಲಾವೃತಗೊಂಡಿವೆ. ತಗ್ಗು ಪ್ರದೇಶಗಳಲ್ಲಿ ನೀರು ಸಂಪೂರ್ಣವಾಗಿ ನಿಂತಿದೆ. ಹೀಗಾಗಿ ವಾಹನ ಸವಾರರು ಪರದಾಡುತ್ತಿದ್ದಾರೆ.


ಡಿಆರ್ ಎಫ್ ತಂಡಗಳು ನಿರಂತರವಾಗಿ ನೀರು ತೆರವುಗೊಳಿಸುವ ಕಾರ್ಯಾಚರಣೆ ನಡೆಸುತ್ತಿವೆ. ಬಾಲಾಪುರ್ ಕೆರೆಯ ಕಟ್ಟೆ ಒಡೆದಿದ್ದು, ಸುತ್ತಮುತ್ತಲಿನ ಪ್ರದೇಶಗಳಲ್ಲಿ ಪ್ರವಾಹ ಪರಿಸ್ಥಿತಿ ಬಂದೋದಗಿದೆ. ಸದ್ಯ ಮಳೆಯಿಂದಾಗಿ ಉಂಟಾದ ಹಾನಿಯ ಕುರಿತು ಸರ್ಕಾರ ಲೆಕ್ಕ ಹಾಕುತ್ತಿದ್ದು, ಇಲ್ಲಿಯವರೆಗೂ ರೂ. 50 ಸಾವಿರ ಕೋಟಿಯಷ್ಟು ನಷ್ಟ ಉಂಟಾಗಿದೆ ಎಂದು ಅಂದಾಜಿಸಲಾಗಿದೆ.

ಹಫೀಜ್ ಬಾಬಾ ನಗರ್, ಫೂಲ್ಬಾಗ್, ಉಮರ್ ಕಾಲೋನಿ, ಇಂದಿರಾ ನಗರ್, ಶಿವಾಜಿ ನಗರ್, ರಾಜೀವ್ ನಗರ್ ನಿವಾಸಿಗಳನ್ನು ಬೇರೆಡೆ ಸ್ಥಳಾಂತರಿಸಲು ಪೊಲೀಸರು ಮುಂದಾಗಿದ್ದಾರೆ.

Leave a Reply

Your email address will not be published. Required fields are marked *

You May Also Like

ಶಾಕಿಂಗ್ ನ್ಯೂಸ್: ಕರ್ನಾಟಕವೀಗ ಸೋಂಕು ಅತಿ ವೇಗದಲ್ಲಿ ಹರಡುತ್ತಿರುವ ರಾಜ್ಯ: ಕೇಸ್-ಲೋಡ್ ಸಂಖ್ಯೆಯಲ್ಲಿ 5ನೆ ಸ್ಥಾನ

ಸೋಂಕಿತರ ಸಂಖ್ಯೆಯ ಆಧಾರದ ಪಟ್ಟಿಯಲ್ಲಿ (ಕೇಸ್-ಲೋಡ್) ಮಹಾರಾಷ್ಟ್ರ ಮೊದಲ ಸ್ಥಾನದಲ್ಲಿದೆ. 6ನೆ ಸ್ಥಾನದಲ್ಲಿದ್ದ ಕರ್ನಾಟಕ ಶನಿವಾರ ಉತ್ತರಪ್ರದೇಶವನ್ನು ದಾಟಿ 5ನೆ ಸ್ಥಾನಕ್ಕೆ ಏರಿದೆ.

ದೆಹಲಿಯಲ್ಲಿ ಜುಲೈ ಅಂತ್ಯಕ್ಕೆ ಸೋಂಕಿತರ ಸಂಖ್ಯೆ ಎಷ್ಟಿರಲಿದೆ ಗೊತ್ತಾ?

ಕೊರೊನಾಗೆ ದೆಹಲಿ ತತ್ತರಿಸಿ ಹೋಗಿದೆ. ಇದು ಹೀಗೆ ಮುಂದುವರೆದರೆ ಜುಲೈ ಅಂತ್ಯದ ವೇಳೆಗೆ ದೆಹಲಿಯಲ್ಲಿ 5.5 ಲಕ್ಷ ಜನರಲ್ಲಿ ಸೋಂಕು ಕಾಣಿಸಿಕೊಳ್ಳಲಿದೆ ಎಂದು ಡಿಸಿಎಂ ಮನೀಶ್ ಸಿಸೋಡಿಯಾ ಆತಂಕ ವ್ಯಕ್ತಪಡಿಸಿದ್ದಾರೆ.

ಅಯ್ಯೋ..! ಸದ್ಯದಲ್ಲಿಯೇ ದೇಶದ ಅರ್ಧದಷ್ಟು ಜನರು ಮಹಾಮಾರಿಗೆ ಬಲಿಯಾಗಲಿದ್ದಾರಂತೆ!

ನವದೆಹಲಿ : 2021ರ ಫೆಬ್ರವರಿ ತಿಂಗಳ ಒಳಗಾಗಿ ದೇಶದ ಕನಿಷ್ಠ ಶೇ. 50ರಷ್ಟು ಭಾರತೀಯರಲ್ಲಿ ಸೋಂಕು ಕಂಡು ಬರಲಿದೆ ಎಂದು ಸರ್ಕಾರದ ಸಮಿತಿ ಅಭಿಪ್ರಾಯಪಟ್ಟಿದೆ.

ಹೆಲಿಕಾಪ್ಟರ್ ಪತನ: ಸೇನಾ ಮುಖ್ಯಸ್ಥ ಬಿಪಿನ್ ರಾವತ್ ನಿಧನ

ಉತ್ತರಪ್ರಭ ಸುದ್ದಿ ತಮಿಳುನಾಡು: ತಮಿಳುನಾಡಿನಲ್ಲಿ ಸಂಭವಿಸಿದ ಹೆಲಿಕಾಪ್ಟರ್ ಪತನದಲ್ಲಿ ಸೇನಾ ಮುಖ್ಯಸ್ಥ ಬಿಪಿನ್ ರಾವತ್ ನಿಧನರಾಗಿದ್ದಾರೆ.…