ಮುಳಗುಂದ: ಶ್ರೀ ಕ್ಷೆತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಆರ್ಥಿಕ ಸಹಾಯದಿಂದ ಸ್ಥಳಿಯ ಪಪಂ ಹಾಗೂ ಶ್ರೀ ಬಾಲಲೀಲಾ ಮಹಾಂತ ಶಿವಯೋಗಿ ಕೆರೆ ಅಭಿವೃದ್ದಿ ಸಮಿತಿ ಸಹಭಾಗಿತ್ವದಲ್ಲಿ ಪಟ್ಟಣಶೆಟ್ಟಿ ಕೆರೆ ಆವರಣದಲ್ಲಿ 246ನೇ ನಮ್ಮೂರ ಕೆರೆ ಹೂಳೆತ್ತುವ ಕಾರ್ಯಕ್ರಮವನ್ನ ಗ್ರಾಮಾಭಿವೃದ್ದಿ ಯೋಜನೆಯ ಹೈದರಬಾದ ಕರ್ನಾಟಕದ ಪ್ರಾದೇಶಿಕ ನಿರ್ದೇಶಕ ಪುರುಷೋತ್ತಮ್ ಅವರು ಚಾಲನೆ ನೀಡಿದರು.
ನಂತರ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿ, ಮನುಷ್ಯನಿಗೆ ನೀರು ಅತ್ಯವಶ್ಯಕವಾಗಿದೆ. ನೀರಿನ ಸಂರಕ್ಷಣೆ ಪ್ರತಿಯೊಬ್ಬರ ಕರ್ತವ್ಯ. ಪ್ಲೂರೈಡಯುಕ್ತ ನೀರು ಸೇವನೆ ಆರೋಗ್ಯಕ್ಕೆ ಒಳ್ಳೆಯದಲ್ಲ. ಉತ್ತರ ಕರ್ನಾಟಕದಲ್ಲಿ ಮಳೆ ಪ್ರಮಾಣ ತೀರಾ ಕಡಿಮೆ ಹೀಗಾಗಿ ಜಲ ಮೂಲಗಳನ್ನ ನಾವು ರಕ್ಷಣೆ ಮಾಡಿಕೊಳ್ಳಬೇಕು. ಈ ದೆಸೆಯಲ್ಲಿ ಧರ್ಮಸ್ಥಳದ ಪೂಜ್ಯ ವಿರೇಂದ್ರ ಹೆಗ್ಗಡೆ ಅವರು ಗ್ರಾಮಾಭಿವೃದ್ದಿ ಯೋಜನೆ ಮೂಲಕ ಸರ್ಕಾರದ ಸಹಭಾಗಿತ್ವದಲ್ಲಿ ಕೆರೆ ಸಂಜೀವಿನಿ ಮತ್ತು ಸ್ಥಳಿಯರ ಸಹಭಾಗಿತ್ವದಲ್ಲಿ ‘ನಮ್ಮೂರ ಕೆರೆ’ ಹೂಳೆತ್ತುವ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ. ರಾಜ್ಯದಲ್ಲಿ ಪ್ರಸಕ್ತ ವರ್ಷದಲ್ಲಿ 175 ಕೆರೆಗಳ ಅಭಿವೃದ್ದಿ ಯೋಜನೆ ಹಾಕಿಕೊಳ್ಳಲಾಗಿದೆ. ಅಭಿವೃದ್ದಿ ಹೊಂದಿದ ಕೆರೆಗಳ ದಡದಲ್ಲಿ ಗಿಡ ನೆಟ್ಟು ಪರಿಸರ ಬೆಳೆಸುವ ಗುರಿ ಇದೆ. ಸಾರ್ವಜನಿಕರು ಕೆರೆಗಳ ಶುದ್ದ ಹಾಗೂ ಸ್ವಚ್ಛತೆ ಕಾಪಾಡಿಕೊಳ್ಳಬೇಕು. ಎಂದರು.
ಕೆರೆ ಅಭಿವೃದ್ದಿ ಸಮಿತಿ ಉಪಾಧ್ಯಕ್ಷ ಸಂಜೀವ ನೀಲಗುಂದ ಮಾತನಾಡಿ, ಧರ್ಮಸ್ಥಳ ಯೋಜನೆಯಿಂದ ಮಹಿಳೆಯರ ಸ್ವಾವಲಂಬಿ ಬದುಕಿನ ಜತೆಗೆ ಜನೋಪಯೋಗಿ ಕಾರ್ಯಗಳಿಂದ ಗ್ರಾಮ ಅಭಿವೃದ್ದಿ ಹೊಂದುತ್ತಿದೆ. ಪಟ್ಟಣಶೆಟ್ಟಿ ಕೆರೆ ಹೂಳೆತ್ತುವ ಕಾಮಗಾರಿಗೆ ಸಧ್ಯ ಚಾಲನೆ ನೀಡಲಾಗಿದೆ. ಎಂದರು.
ಈ ಸಂದರ್ಭದಲ್ಲಿ ಗ್ರಾಮಾಭಿವೃದ್ದಿ ಯೋಜನೆಯ ಜಿಲ್ಲಾ ನಿರ್ದೇಶಕ ಶಿವಾನಂದ ಆಚಾರ್ಯ, ತಾಲೂಕ ನಿರ್ದೇಶಕ ಸುಕೇಶ, ಸಮಿತಿ ಸದಸ್ಯರಾರ ರಾಮಣ್ಣ ಕಮಾಜಿ, ಪ್ರಕಾಶ ಮದ್ದಿ, ಅಕ್ಕಮ್ಮ ನೀಲಗುಂದ, ರಾಜು ಹಾಗೂ ಸೇವಾ ನಿರತರು, ಪ್ರಗತಿ ಬಂಧು ಸಂಘಗಳ ಸದಸ್ಯರು ಇದ್ದರು.