ನಿಸ್ವಾರ್ಥ ಸಮಾಜ ಸೇವಕರ ಪೈಕಿ ಗಜೇಂದ್ರಗಡದ ಹೆಮ್ಮೆಯ ಸರಳ ಸಜ್ಜನಿಕೆಯ ಯುವಕ ಅಂದಪ್ಪ ಕಳಕಪ್ಪ ಸಂಕನೂರ ಕೂಡ ಒಬ್ಬರು ಎಂದರೆ ಅತಿಶಯೋಕ್ತಿಯಾಗಲಾರದು. ಶಿಕ್ಷಣ ಪ್ರೇಮಿ ಅಂದಪ್ಪ ಅವರು, ಶ್ರೇಷ್ಠ ವರ್ತಕ ದಿ. ಬಂಗಾರಬಸಪ್ಪ ಸಂಕನೂರ ಅವರ ಮೊಮ್ಮಗನಾಗಿದ್ದು, ಸಂಕನೂರ ಅಂದಪ್ಪ ಎಂದೇ ಚಿರಪರಿಚಿತರು. ಗಜೇಂದ್ರಗಡದಲ್ಲಿ ಪ್ರಥಮಬಾರಿಗೆ 70 ವರ್ಷಗಳ ಹಿಂದೆ ಇವರ ಅಜ್ಜನವರು ಬಂಗಾರದ ಅಂಗಡಿ ತೆರೆದಿದ್ದು, ಸಧ್ಯ ಅಂದಪ್ಪ ಅವರು ಬಂಗಾರಬಸಪ್ಪ ಜ್ಯೂವೇರ‍್ಸ್ ಮತ್ತು ಸಂಕನೂರ ಜ್ಯೂವೇರ‍್ಸ್ ಉದ್ಯಮ ನಡೆಯಿಸುತ್ತಿದ್ದಾರೆ.

ಗದಗ ಜಿಲ್ಲೆಯಲ್ಲದೆ ಸುತ್ತಮುತ್ತಲಿನ ಜಿಲ್ಲೆಗಳ ಗ್ರಾಹಕರು ಬಂದು ಇಲ್ಲಿ ಅತ್ಯಂತ ವಿಶ್ವಾಸರ್ಹತೆ ಸೇವೆ ಒದಗಿಸುತ್ತಿರುವುದರಿಂದ ಚಿನ್ನ ಖರೀದಿಸುತ್ತಾರೆ. ಪ್ರಾಮಾಣಿಕ ಸಮಾಜ ಸೇವೆಯೊಂದಿಗೆ, ಅನನ್ಯ ಸಾಧನೆಯೊಂದಿಗೆ ತಮ್ಮ ದುಡಿತದ ಶೇ.35ರಷ್ಟು ಹಣವನ್ನು ಶೈಕ್ಷಣಿಕ, ಸಾಹಿತ್ಯಿಕ, ಸಾಮಾಜಿಕ ಹಾಗೂ ಧಾರ್ಮಿಕ ಕ್ಷೇತ್ರಗಳಿಗೆ ವಿನಿಯೋಗಿಸಿ ಪ್ರಚಾರ ಬಯದೇ ಸಮಾಜಮುಖಿಯಾದವರು.  

ಅಂದಪ್ಪ ಅವರ ಜೀವನ ಒಂದು ತೆರೆದ ಪುಸ್ತಕ, ಎಲ್ಲರೂ ಓದಲೇಬೇಕಾದ ಉಪಯುಕ್ತ ಪುಸ್ತಕ. ಅವರು ಅಧಿಕಾರ, ಹಣ, ಪ್ರಭಾವ, ಒತ್ತಾಯ, ಇವು ಯಾವುದೂ ಇಲ್ಲದೆ ಮಹತ್ವದ ಸಾಧನೆ ಮಾಡಿದ್ದಾರೆ. ವಿಶ್ವಗುರು ಬಸವಣ್ಣನವರ ತತ್ವಸಾರದಂತೆ ಜೀವನ ಸಾಗಿಸುತ್ತಿದ್ದಾರೆ. ಅವರಿಗೆ ಎಲ್ಲರೂ ಪ್ರೀತಿ ಗೌರವನ್ನು ಸೂಚಿಸಿ, ಪೂರ್ಣ ಬೆಂಬಲ ನೀಡಿದ್ದಾರೆ. ಸರ್ಕಾರ ಅಥವಾ ಯಾವುದೇ ಸಂಸ್ಥೆಯಿಂದ ನೆರವು ಪಡೆದು ಸಮಾಜಕಾರ್ಯ ಮಾಡಿದವರಲ್ಲ. ಅವರು ನಡೆದು ಬಂದ ದಾರಿ, ಸಾಮಾಜಿಕ ಸೇವೆ ಸಾಧನೆ, ವಿಶಿಷ್ಟವಾದದ್ದು, ವಿಭಿನ್ನವಾದದ್ದು.

ಬಾಲ್ಯ ಮತ್ತು ಶಿಕ್ಷಣ:

ಗಜೇಂದ್ರಗಡದ ಸಮಾಜ ಸೇವಕರಾದ ಕಳಕಪ್ಪ ಮತ್ತು ಸುಮಂಗಲಾ  ಅವರ ಮೂರು ಮಕ್ಕಳ ಪೈಕಿ ಅಂದಪ್ಪ ಅವರು 18-12-1989 ರಂದು ಎರಡನೇ  ಮಗನಾಗಿ ಜನಿಸಿದರು. ಪ್ರಾಥಮಿಕ, ಪ್ರೌಢ ಹಾಗೂ ಪದವಿಪೂರ್ವ ಶಿಕ್ಷಣವನ್ನು ಪಟ್ಟಣದ ಎಸ್.ಎಂ.ಭೂಮರೆಡ್ಡಿ ಶಿಕ್ಷಣ ಸಂಸ್ಥೆಯಲ್ಲಿ ಪೂರೈಸಿದ್ದಾರೆ. ಬಡ ಕುಟುಂಬದಿಂದ ಬಂದ ಯುವ ಮುಖಂಡ ಅಂದಪ್ಪ ಸಮಾಜದಲ್ಲಿನ ಸಮಸ್ಯೆಗಳನ್ನು ಹತ್ತಿರದಿಂದ ಕಂಡವರು. ಈ ಹಿನ್ನಲೆಯಲ್ಲಿ ಸಾಮಾಜಿಕ, ಧಾರ್ಮಿಕ ಮತ್ತು ಶೈಕ್ಷಣಿಕ ಕ್ಷೇತ್ರಕ್ಕೂ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಆಡಂಬರವಿಲ್ಲದ ಜೀವನ ತನ್ನ ಸನ್ನಡತೆ ಸಚ್ಛಾರಿತ್ರ್ಯದಿಂದ ಭೇದ ಭಾವವಿಲ್ಲದೆ ಸರ್ವರಲ್ಲೂ ಬೆರೆತು ಸೇವೆ ಮಾಡುವ ಮನೋಭಾವ ಹೊಂದಿದ್ದಾರೆ. ಇವರ ಸರಳತೆ, ಸಜ್ಜನಿಕ ಮಾನವ ಪ್ರೇಮ ಅಮೋಘವಾದದ್ದು, ಇವರ ಗೌಪ್ಯ ಕೊಡುಗೆಗಳೇ ಅಪಾರ. ಗಜೇಂದ್ರಗಡ, ಬೈರಾಪೂರ, ಕಾಲಕಾಲೇಶ್ವರ, ಲಕ್ಕಲಕಟ್ಟಿ, ಮುಶಿಗೇರಿ, ಶಾಂತಗೇರಿ, ದಿಂಡೂರ, ರಾಜೂರ, ನೆಲ್ಲೂರ, ಕುಂಟೋಜಿ, ವೀರಾಪೂರ, ಚಿಲಝರಿ, ಗೋಗೇರಿ, ಜಿಗೇರಿ, ಕೊಡಗಾನೂರ ಗ್ರಾಮಗಳ ದೇವಸ್ಥಾನ ಜಿರ್ಣೋದ್ಧಾರ ಮತ್ತು ನಿರ್ಮಾಣಕ್ಕೆ ಆರ್ಥಿಕ ಧನಸಹಾಯ ಮಾಡಿದ್ದಾರೆ. ಪ್ರತಿ ಶ್ರಾವಣ ಸೋಮವಾರ ನಿರ್ಗತಿಕರಿಗೆ, ಗುಡಿಸಲು ನಿವಾಸಿಗಳಿಗೆ ಬಟ್ಟೆ ಬರೆ, ದವಸ-ಧಾನ್ಯ ನೀಡಿ ಅವರಲ್ಲಿ ಒಂದಾಗಿ ಬೆರೆಯುತ್ತಾರೆ.  

                ಗಜೇಂದ್ರಗಡ ಸೇರಿದಂತೆ ಸುತ್ತಮುತ್ತಲಿನ ಗ್ರಾಮದಲ್ಲಿ ಏರ್ಪಡುವ ವಿವಿಧ ಧಾರ್ಮಿಕ ಕಾರ್ಯಕ್ರಮಗಳಿಗೆ ಹಾಗೂ ಯುವಕರು ನಡೆಸುವ ವಿವಿಧ ಕ್ರೀಡಾ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಧನಸಹಾಯ ನೀಡಿ ಪ್ರೋತ್ಸಾಹಿಸುತ್ತಾ ಬಂದಿದ್ದಾರೆ. ಈ ಹಿನ್ನಲೆಯಲ್ಲಿ ಈ ಭಾಗದ ಗ್ರಾಮೀಣ ಯುವಕರಲ್ಲಿ ಇವರೆಂದರೆ ಅಚ್ಚುಮೆಚ್ಚು. ಪ್ರೀತಿಯಿಂದ ಅಂದಪ್ಪಣ್ಣ ಎಂದು ಕರೆಯುವುದುಂಟು. ಅಲ್ಲದೆ, ವಿವಿಧ ಸಂಘಟನೆಯ ನೇತೃತ್ವ ವಹಿಸಿ ಪ್ರತಿಭಾ ಪುರಸ್ಕಾರ, ರೈತ ದಿನಾಚರಣೆ,  ರಕ್ತದಾನ ಶಿಬಿರ, ಉಚಿತ ಆರೋಗ್ಯ ತಪಾಸಣೆ, ಉಚಿತ ನೇತ್ರ ತಪಾಸಣೆ, ಮಹಿಳೆಯರಿಗೆ ಕೌಶಲ್ಯ ತರಬೇತಿಯನ್ನು ನೀಡಿದ ಹೆಗ್ಗಳಿಕೆ ಇವರದ್ದು. ಹಲವು ಬಡ ವಿದ್ಯಾರ್ಥಿಗಳಿಗೆ ಶಿಕ್ಷಣಕ್ಕಾಗಿ ಆರ್ಥಿಕ ಧನ ನೀಡುವದರ ಜೋತೆಗೆ ಪ್ರತಿವರ್ಷ ಎರಡು ನೂರಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಉಚಿತ ಸಮವಸ್ತ್ರ, ನೋಟ್ ಬುಕ್, ಪಾರಿತೋಷಕ ಕಾಣಿಕೆ ನೀಡುತ್ತಾ ಬಂದಿದ್ದಾರೆ.

ಕರ್ನಾಟಕ ಜನಪರ ಸೇವಾಸಮಿತಿ ಸಂಸ್ಥಾಪಕ ಅಧ್ಯಕ್ಷ: ಇವರ ಸಹೃದಯಿ ಸ್ನೇಹಿತರು ಸೇರಿ ಜನ್ಮದಿನದಂದು ಕರ್ನಾಟಕ ಜನಪರ ಸೇವಾ ಸಮಿತಿ ಅನಾವರಣಗೊಳಿಸಿ ತನ್ಮೂಲಕ ಆ ವೇದಿಕೆಯಿಂದ ನಿಮ್ಮ ಸೇವಾಕೈಂಕರ್ಯಕ್ಕೆ ನಾವು ಕೈಜೋಡಿಸುತ್ತೇವೆ ಎಂದು ಸ್ನೇಹಿತರು ಒತ್ತಾಯಿಸಿದಾಗ ಸ್ನೇಹಿತರ ಒತ್ತಾಸೆಯಂತೆ 2012 ರಲ್ಲಿ ಕರ್ನಾಟಕ ಜನಪರ ಸೇವಾಸಮಿತಿ ಸಂಘಟನೆಯನ್ನು ಉದ್ಘಾಟಿಸಲಾಯಿತು. ಅಂದಿನಿಂದ ಇಂದಿನವರೆಗೂ ಅದರ ಸಂಸ್ಥಾಪಕ ಅಧ್ಯಕ್ಷರು ಅಂದಪ್ಪ ಸಂಕನೂರ ಆಗಿದ್ದು, ಅವರ ಜನ್ಮದಿನದಂದು ವಿಭಿನ್ನ ಕಾರ್ಯಕ್ರಮ ಹಮ್ಮಿಕೊಳ್ಳುತ್ತಾ ಬಂದಿದ್ದಾರೆ. 2013 ರಲ್ಲಿ ಗುಡಿಸಲು ನಿವಾಸಿಗಳಿಗೆ ದವಸಧಾನ್ಯ ಮತ್ತು ಬಟ್ಟೆ ಬರೆ ವಿತರಿಸಲಾಗಿದೆ. 2014ರಲ್ಲಿ ಬಾಪೂಜಿ ಮಂದಮತಿ ಶಾಲೆಯ ಮಕ್ಕಳಿಗೆ ಬಟ್ಟೆ ಬರೆ, ವಿವಿಧ ಸಲಕರಣೆ ನೀಡಿ, ಸಿಹಿ ಊಟ ಮತ್ತು ಆ ಸಂಸ್ಥೆಗೆ ಧನಸಹಾಯ ನೀಡಲಾಗಿದೆ. 2015 ಗಜೇಂದ್ರಡದಲ್ಲಿ ಸುಮಾರು 500 ಬಡ ಕುಟುಂಬ ಗುರುತಿಸಿ ಸೀರೆ, ಬಟ್ಟೆಯನ್ನು ವಿತರಿಸಲಾಯಿತು. 2016 ರಲ್ಲಿ ಗದಗ ಪುಟ್ಟರಾಜ ಆಶ್ರಮದಲ್ಲಿನ ಎಲ್ಲಾ ಮಕ್ಕಳಿಗೂ ಬಟ್ಟೆ ವಿತರಿಸಿ, ಸಿಹಿ ಊಟದೊಂದಿಗೆ ಧನ ಸಹಾಯ ನೀಡಿಲಾಗಿದೆ. 2017 ರಲ್ಲಿ ಸರ್ವಧರ್ಮ ಉಚಿತ ಸಾಮೂಹಿಕ ವಿವಾಹ ಏರ್ಪಡಿಸುವ ಮೂಲಕ ಪ್ರತಿವರ್ಷ ತಮ್ಮ ಜನುಮದಿನವನ್ನು ವಿಭಿನ್ನ ಸಮಾಜಸೇವೆಯ ಮೂಲಕ ಆಚರಿಸಿಕೊಳ್ಳುತ್ತಾ ಬಂದಿದ್ದಾರೆ. ಅಲ್ಲದೆ, ಮಹದಾಯಿ ಹೋರಾಟ ಪ್ರಾರಂಭಗೊಂಡಾಗ ಚಿತ್ರನಟ ಶ್ರೀನಗರ ಕಿಟ್ಟಿಯವರನ್ನು ಕರೆಯಿಸಿ, ಸ್ಟಾರ್ ಪ್ರಚಾರ ನೀಡಿದ ಶ್ರೇಯಸ್ಸು ಇವರಿಗೆ ಸಲ್ಲುತ್ತದೆ.

ಸೇವೆ ಸಂದ ಗೌರವ:

                ಇವರ ಸೇವೆಯನ್ನು ಪರಗಣಿಸಿ ಹಲವಾರು ಪತ್ರಿಕೆಗಳು ವಿಶೇಷ ಲೇಖನ ಪ್ರಕಟಿಸಿ ವ್ಯಕ್ತಿತ್ವ ಹಾಗೂ ಸಮಾಜ ಸೇವೆ ಕಾರ್ಯವೈಖರಿಯನ್ನು ಅನಾವರಣಗೊಂಡಿದೆ. ಸಮಾಜ ಸೇವಾ ಚಟುವಟಿಕೆಗಳಿಗಾಗಿ ಹಲವಾರು ಬಿರುದು, ಸನ್ಮಾನಗಳಿಗೂ ಇವರು ಪಾತ್ರರಾಗಿದ್ದಾರೆ. ರಾಜ್ಯದ 16ನೇ ರಾಜ್ಯಪಾಲರಾದ ಎಸ್.ಆರ್.ಭಾರದ್ವಾಜ್ ಅವರಿಂದ ಸಮಾಜಸೇವೆ ಪರಿಗಣಿಸಿ ಸನ್ಮಾನ ಸ್ವೀಕರಿಸಿದ್ದಲ್ಲದೆ,  ಕರುನಾಡು ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆಯಿಂದ ಕರುನಾಡು ಕಾಯಕ ಸಮ್ಮಾನ, ರಾಜ್ಯ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಮುಕ್ತಿ ವಾಹಿನಿ ಆತ್ಮ ಕಲ್ಯಾಣ ಅಭಿಯಾನ ವತಿಯಿಂದ ಶ್ರೇಷ್ಠ ಸಮಾಜ ಸೇವಕ ರಾಜ್ಯ ಪ್ರಶಸ್ತಿ,  ರಂಭಾಪುರಿ  ಜಗದ್ಗುರುಗಳ “ಶರನ್ನವರಾತ್ರಿ ದರ್ಬಾರ” ಧಾರ್ಮಿಕ ಕಾರ್ಯಕ್ರಮದಲ್ಲಿ ಸನ್ಮಾನಿಸಲಾಗಿದೆ. ಕರ್ನಾಟಕ ಜನಪರ ಸೇವಾ ಸಮಿತಿ,  ಕರ್ನಾಟಕ ರಕ್ಷಣಾ ವೇದಿಕೆ ಸೇರಿದಂತೆ ವಿವಿಧ ಕನ್ನಡಪರ ಸಂಘಟನೆಗಳು ಇವರ ಸಮಾಜ ಸೇವೆ ಪರಗಣಿಸಿ ಜಿಲ್ಲಾ ಪ್ರಶಸ್ತಿಯನ್ನು ನೀಡಿ ಗೌರವಿಸಿದ್ದಾರೆ.

                ಒಟ್ಟಾರೆ, ಗ್ರಾಮೀಣ ಜನರನ್ನು ಉದ್ಧಾರ ಮಾಡುವುದಾಗಿ ಸದಾ ಘೋಷಿಸಿಕೊಳ್ಳುವ ಮುಖಂಡರಿಗೆ ಸಮಾಜ ಸೇವಕ ಅಂದಪ್ಪ ಸಂಕನೂರ ಅವರ ಜೀವನ ಸಾಧನೆ ಒಂದು ಆದರ್ಶವಾಗಿ ನಿಲ್ಲಬಲ್ಲದು. ಪ್ರಾಮಾಣಿಕ, ಪಾರದರ್ಶಕ ಜೀವನ ಪರಿಶುದ್ದ ವ್ಯಕ್ತಿತ್ವ ಸುತ್ತಲಿನ ಜನರ ಬಾಳನ್ನು ಹಸನು ಮಾಡುವ ಗುರಿ ಇವರ ಜೀವನದ ಸಾರಂಶವೆನ್ನಬಹುದು.

Leave a Reply

Your email address will not be published. Required fields are marked *

You May Also Like

ಕರೊನಾ ಅಲೆಯ ಮಧ್ಯೆ ರಾಜಕೀಯ ಅಲೆಯ ಅಬ್ಬರ

ದೊಡ್ಡವರಿಂದ ಹಿಡಿದು ಚಿಕ್ಕ ಮಕ್ಕಳ ವರೆಗೂ ಎಚ್ಚರಿಕೆ ಗಂಟೆಯನ್ನು ಬಾರಿಸಿರುವ ಕರೊನಾ ಎರಡನೆಯ ಅಲೆಯು ಸ್ವಲ್ಪಮಟ್ಟಿಗೆ ನಿಯಂತ್ರಣಕ್ಕೆ ಬರುತ್ತಿದೆಯಾದರೂ ಫಂಗಸ್‌ನ (ಶಿಲೀಂಧ್ರ) ಕಾಟ ಮಾತ್ರ ಮುಂದುವರಿಯುತ್ತಲೇ ಇದೆ. ಸದ್ಯ ಲಭ್ಯವಿರುವ ಲಿಪೊಸೊಮಲ್ ಆಂಪೊಟೆರಿಸಿನ್ ಬಿ ಔಷಧವನ್ನು ಕಪ್ಪು ಶಿಲೀಂಧ್ರ ಸೋಂಕಿಗೆ ಒಳಗಾದವರಿಗೆ ನೀಡಲಾಗುತ್ತಿದೆ.

ಯಪ್ಪ..!, ಚಡ್ಡಿ ಜಗಳ ಈಗ ಕೋರ್ಟಿಗೆ ಬಂದೈತ್ಯಂತ..!

ಚಡ್ಯಾರಾ ಆಗಲಿ, ಪ್ಯಾಂಟರಾ ಆಗಲಿ, ಒಳ ಅಂಗ್ಯಾರ ಆಗಲಿ, ಮೇಲಂಗ್ಯಾರ ಆಗಲಿ, ಏನಾರ ಆಗಲಿ ನಾವು ಹ್ಯಾಂಗ್ ಅಳತಿ ಕೊಟ್ಟಿರತಿವಿ ಹಂಗ ಹೊಲದ್ ಕೊಡೊ ಕೆಲ್ಸಾ ಟೈಲರ್ದು. ಆದ್ರ ನಾನು ‘ಚಂದನ್ ಬಟ್ಟಿ ಕೊಟ್ಟೀನಿ. ಆದ್ರ ಟೇಲರ್ ಗಿಡ್ ಗಿಡ್ ಅಂಡರ್ ವೇರ್ ಹೊಲದಾನ. ಅರೆಸ್ಟು ಮಾಡಿ ಒಗಿರಿ ಅವನ್ನ ಅಂತ ಭೋಪಾಲಿನ್ಯಾಗ ಒಬ್ಬಾಂವ ಪೊಲೀಸರ ಠಾಣಾ ಕಟ್ಟಿ ಹತ್ಯಾನ.

ಮಾವಿನ ಮಹಿಮೆ ಗೊತ್ತಾ ನಿಮಗೆ? ಹಣ್ಣುಗಳ ರಾಜನನ್ನು ತಿನ್ನಿ ಆರೋಗ್ಯವಾಗಿರಿ!!

ಇದು ಬೇಸಿಗೆ ಸಮಯ. ಕೊರೊನಾ ಕೂಡ ಈ ಸಮಯದಲ್ಲಿಯೇ ದೇಶವನ್ನು ಕಾಡುತ್ತಿದೆ. ಹೊರಗೆ ಬಿಸಿಲು, ಸೆಖೆ, ಉರಿ. ಆದರೆ ಬೇಸಿಗೆ ಸಮಯದಲ್ಲಿ ಖುಷಿಯ ವಿಚಾರ ಹಣ್ಣುಗಳ ರಾಜ ಮಾವಿನ ಹಣ್ಣು ಬೆಳೆಯ ಸಮಯ. ಮಾವಿನ ಹಣ್ಣು ಮಾರುಕಟ್ಟೆ ಪ್ರವೇಶಿಸಿದೆ.

ಕೊರೊನಾ ನಿಯಂತ್ರಣಕ್ಕೆ ಆಯುರ್ವೇದದಲ್ಲಿರುವ ಪರಿಹಾರ, ಚಳಿಗಾಲದಲ್ಲಿ ಕೊರೊನಾ ಮುಂಜಾಗೃತೆ ಹೇಗಿರಬೇಕು?

ಕೊರೊನಾ ನಿಯಂತ್ರಣಕ್ಕೆ ಆಯುರ್ವೇದದಲ್ಲಿರುವ ಪರಿಹಾರ, ಚಳಿಗಾಲದಲ್ಲಿ ಕೊರೊನಾ ಮುಂಜಾಗೃತೆ ಹೇಗಿರಬೇಕು? ಡಾ.ಮಹೇಶ್ ಬುಜರಿ ಅವರ ಜೊತೆಗೆ ಡಾ. ಬಸವರಾಜ್ ಡಿ. ತಳವಾರ ಅವರು ಉತ್ತರಪ್ರಭಕ್ಕೆ ನಡೆಸಿದ ವಿಶೇಷ ಸಂದರ್ಶನ ಇಲ್ಲಿದೆ..