(ಜನಪರ, ಜೀವಪರ ಕಾಳಜಿಯುಳ್ಳ ಹೋರಾಟಗಾರ ರವಿಕೃಷ್ಣ ರೆಡ್ಡಿ ಈಗಾಗಲೇ ಸಾಕಷ್ಟು ಸಮಾಜಮುಖಿ ಕಾರ್ಯಗಳಿಂದಲೇ ಜನರಪರವಾದ ನಿಲುವು ಹೊಂದಿದವರು. ಇದೀಗ ಕರ್ನಾಟಕ ರಾಷ್ಟç ಸಮಿತಿ ಪಕ್ಷವನ್ನು ಹುಟ್ಟು ಹಾಕುವ ಮೂಲಕ ನಾಡಿನ ಉದ್ದಗಲಕ್ಕೂ ರಾಜ್ಯಾದ್ಯಂತ ಓಡಾಡುತ್ತಿದ್ದಾರೆ. ಇವರೊಂದಿಗೆ ಉತ್ತರಪ್ರಭ ಗೌರವ ಸಂಪಾದಕರಾದ ಪ್ರೊ.ಸಿದ್ದು ಯಾಪಲಪರವಿ ಅವರು ನಡೆಸಿದ ಸಂದರ್ಶನ ಇಲ್ಲಿದೆ…)

ಸಂದರ್ಶಕ: ಅಮೇರಿಕಾದ ವಾತಾವರಣ ನಿಮ್ಮ ಮೇಲೆ ಯಾವ ಪ್ರಭಾವ ಬೀರಿದೆ?
ರವಿಕೃಷ್ಣರೆಡ್ಡಿ: ಸಾಮಾಜಿಕವಾಗಿ ಅಲ್ಲಿ ಇರುವಂತಹ ಜೀವನ ಮೌಲ್ಯಗಳು ಮತ್ತು ಅವರು ಇನ್ನೊಬ್ಬರಿಂದ ಅಪೇಕ್ಷಿಸಿಸುವ ರೀತಿ ನನ್ನ ಮೇಲೆ ಪ್ರಭಾವ ಬಿರಿದೆ. ಭಾರತೀಯರು ಅಮೇರಿಕಾ ಸಮಾಜದ ಬಗ್ಗೆ ಊಹಿಸಿರುವ, ತಿಳಿದುಕೊಂಡಿರುವ ಹಾಗೆ ಅಲ್ಲಿನ ಸಮಾಜ ಇಲ್ಲ. ದಾಂಪತ್ಯ ನಿಷ್ಠೆ, ಅವರು ಬದುಕುವ ರೀತಿ ಅವರನ್ನು ವಿಭಿನ್ನ ಸಮಾಜ ನಿರ್ಮಿಸಲು ಕಾರಣವಾಗಿದೆ. ಅಮೇರಿಕನ್ನರು ಹೊಂದಿರುವ ಕೌಟುಂಬಿಕ ಗುಣ, ಜೀವನ ಮೌಲ್ಯಗಳನ್ನು ಅವರ ರಾಜಕೀಯ ನಾಯಕರು ಹೊಂದಿರಬೇಕು ಎಂದು ಅಪೆಕ್ಷಿಸುತ್ತಾರೆ. ಹೀಗಾಗಿ ಅಲ್ಲಿನ ಜನಪ್ರತಿನಿಧಿಗಳಿಗೆ ಒಂದು ಗೌರವ ಇದೆ.

ಸಂದರ್ಶಕ: ಅಲ್ಲಿನ ರಾಜಕೀಯ ಪಕ್ಷಗಳು ಹೇಗೆ ಕಾರ್ಯ ನಿರ್ವಹಿಸುತ್ತವೆ?
ರವಿಕೃಷ್ಣರೆಡ್ಡಿ: ಜನ ಸಾಮಾನ್ಯರು ಕೊಡುವ ದೇಣಿಗೆ ಮೂಲಕ ಅಲ್ಲಿನ ರಾಜಕೀಯ ಪಕ್ಷಗಳು ಅಧಿಕಾರಕ್ಕೆ ಬರುತ್ತವೆ. ಹೀಗಾಗಿ ಅಲ್ಲಿ ಚುನಾವಣೆ ಹಾಗೂ ರಾಜಕೀಯ ಪಕ್ಷಗಳು ಜನರ ಸಹಬಾಗಿತ್ವದಲ್ಲಿ ಮುನ್ನಡೆಯುತ್ತವೆ. ಚುನಾವಣೆ ಪಾರದರ್ಶಕ ಮತ್ತು ಪ್ರಾಮಾಣಿಕವಾಗಿ ಇರಬೇಕು ಎಂದು ಅವರು ಬಯಸುತ್ತಾರೆ. ಅಮೇರಿಕ ಚುನಾವಣೆ ಮತ್ತು ರಾಜಕೀಯ ಪಕ್ಷಗಳ ಕಾರ್ಯವ್ಯವಸ್ಥೆಯ ವಿರುದ್ಧ ಭಾರತದ ರಾಜಕೀಯ ವ್ಯವಸ್ಥೆ ಇದೆ. ನಮ್ಮಲ್ಲಿ ರಾಜಕೀಯ ಪಕ್ಷಗಳೆ ನಾಗರಿಕರಿಗೆ ಹಣ ಹಂಚಬೇಕು.ಹೆAಡದ ಅಪೇಕ್ಷೆ ಬೇರೆ ಇರುತ್ತದೆ. ಈ ವ್ಯವಸ್ಥೆ ಅಳವಡಿಸಿಕೊಳ್ಳದಿದ್ದರೆ ಆ ಪಕ್ಷ, ನಾಯಕರನ್ನು ಕೀಳಾಗಿ ನೋಡುವ ಮನಸ್ಥಿತಿ ನಮ್ಮಲ್ಲಿ ರೂಪಗೊಂಡಿದೆ ಭರವಸೆ, ಆಕರ್ಷಕ ಸುಳ್ಳು ಹೇಳಬೇಕು ಅಂತಹ ವಾತಾವರಣ ಇಲ್ಲಿ ನಿರ್ಮಾಣವಾಗಿದೆ. ಇದು ಮೊದಲು ಬದಲಾಗಬೇಕು. ಅಂದಾಗ ಮಾತ್ರ ಭಾರತದ ಅಭಿವೃದ್ಧಿ ಸಾಧ್ಯ.

ಸಂದರ್ಶಕ : ಅಮೇರಿಕ, ಭಾರತದ ರಾಜಕಾರಣಿಗಳ ಬಗ್ಗೆ ಜನ ಅಭಿಪ್ರಾಯ?
ರವಿಕೃಷ್ಣರೆಡ್ಡಿ: ಒಂದು ಜಾತಿಯ ರಾಜಕಾರಣಿ ಬ್ರಷ್ಟಾಚಾರ ಮಾಡಿದಾಗ ಅವನನ್ನು ಸಮರ್ಥಿಸಿಕೊಳ್ಳಲು ಆ ಸಮುದಾಯ ಮುಂದಾಗುತ್ತದೆಯೆ ಹೊರತು ಅದು ತಪ್ಪು ಎಂದು ಹೇಳುವ ಕೆಲಸ ಯಾರಿಂದಲೂ ಸಾಧ್ಯವಗುತ್ತಿಲ್ಲ. ಬೇರೆ ಜಾತಿಯ ನಾಯಕರನ್ನು ವಿರೋಧಿಸುವ ಪರಿಸ್ಥಿತಿ ನಿರ್ಮಾಣವಾಗಿದೆ. ನಾಯಕರು ಹೇಗಿದ್ದರು ನಾವು ಅವರನ್ನು ಸ್ವೀಕರಿಸುವ ಮನಸ್ಥಿತಿಗೆ ಬಂದಿದ್ದೇವೆ. ಅರ್ಹತೆ ಇಲ್ಲದವರನ್ನು ಆಯ್ಕೆ ಮಾಡುತ್ತಿದ್ದೇವೆ. ಬ್ರಷ್ಟಾಚಾರವೂ ಒಂದು ಮೌಲ್ಯ ಎಂದು ಕೊಂಡಿದ್ದೇವೆ.

ಸಂದರ್ಶಕ: ನೀವು ಭಾರತಕ್ಕೆ ಬಂದಿದ್ದು ರಾಜಕೀಯಕ್ಕೆ ಪ್ರವೇಶಿಸಲಾ? ಈ ಬಗ್ಗೆ ನಿಮಗೆ ಆಸಕ್ತಿ ಹುಟ್ಟಲು ಕಾರಣವೇನು?
ರವಿಕೃಷ್ಣರೆಡ್ಡಿ: 2008 ರಲ್ಲಿ ಆದ ಕೆಲವೊಂದಿಷ್ಟು ರಾಜಕೀಯ ಬೆಳವಣಿಗೆಳು ಅತಿಯಾದ ನೋವು ಉಂಟು ಮಾಡಿದ್ದವು. ಜೊತೆಗೆ ಆ ಸಮಯದಲ್ಲಿ ಮುಖ್ಯಮಂತ್ರಿ ಕುರ್ಚಿಗೆ ಕೋಟಿ ಲೆಕ್ಕದಲ್ಲಿ ಬೆಡಿಕೆಯನ್ನು ಇಟ್ಟಿದ್ದ ವಿಡಿಯೋ ಅಂತರ್ಜಾಲದಲ್ಲಿ ಹರಿದಾಡುತಿತ್ತು. ಇಂತಹ ಸಂಗತಿಗಳು ನಮ್ಮಲ್ಲಿ ರಾಜಕೀಯ ನಾಯಕರ ಯೋಗ್ಯತೆಯನ್ನು ತಿಳಿಸುತ್ತವೆ. ಇಂತಹ ಘಟನೆಗಳು ಜಾಗತಿಕವಾಗಿ ಭಾರತದ ಬಗ್ಗೆ ಕೆಟ್ಟ ಅಭಿಪ್ರಾಯ ಮೂಡಲು ಅನುವು ಮಾಡಿಕೊಡುತ್ತವೆ. ಈ ವ್ಯವಸ್ಥೆ ಬದಲಾಗಬೇಕಾದರೆ ರಾಜಕೀಯಕ್ಕೆ ಹೋಗಬೇಕು ಎನ್ನುವ ಭಾವನೆ ನನ್ನಲ್ಲಿ ಮೂಡಿತ್ತು. ಆ ಕಾರಣಕ್ಕೆ ನಾನು ಭಾರತಕ್ಕೆ ಬಂದು ಜಯನಗರ ಚುನಾವಣೆಗೆ ನಿಂತಿದ್ದೆ.

ಸಂದರ್ಶಕ: ಸಂಪೂರ್ಣ ರಾಜಕಾರಣದಲ್ಲಿ ಭಾಗಿಯಾಗಿದ್ದು ಯಾವಾಗ?
ರವಿಕೃಷ್ಣರೆಡ್ಡಿ:
2010-11 ರಲ್ಲಿ ನಾನು ಭಾರತಕ್ಕೆ ವಾಪಾಸ್ಸಾಗಿ ನಂತರ ರಾಜಕೀಯದಲ್ಲಿ ಸಕ್ರಿಯವಾಗಿ ಭಾಗವಿಸಿದೆ. ಲಂಚ ಮುಕ್ತ ಕರ್ನಾಟಕ ಅಭಿಯಾನ ಆರಂಭಿಸಿದೆ. ಅವಮಾನ, ಸೋಲು, ಅಪನಂಭಿಕೆ, ಸಂಶಯ ಎದರಿಸಿ ಚುನಾವಣೆ ಎದುರಿಸುವವರು ನಮಗೆ ಬೇಕು. ಅಂದಾಗ ಮಾತ್ರ ರಾಜಕೀಯ ವ್ಯವಸ್ಥೆ ಬದಲಾಗುತ್ತದೆ. ಯಾರಾದ್ರೂ ಬರಬೇಕು ಅಲ್ವ, ಒಬ್ಬರಾದ್ರೂ ಮುಂದಾಗಬೇಕು ಅಲ್ಲವೇ? ಅದಕ್ಕೆ ನಾನೇ ಪಕ್ಷ ಕಟ್ಟಿ ರಾಜಕೀಯಕ್ಕೆ ಸಂಪೂರ್ಣವಾಗಿ ತೊಡಗಿಸಿಕೊಂಡೆ.

ಸಂದರ್ಶಕ: ಅಮೇರಿಕೆಯಲ್ಲಿ ಭಾರತದ ಬಗ್ಗೆ ಯಾವ ಅಭಿಪ್ರಾಯವಿದೆ?
ರವಿಕೃಷ್ಣರೆಡ್ಡಿ:
ಅಮೇರಿಕಾದ ಪ್ರಜೆಗಳು ತಮ್ಮ ದೇಶದ ಬಗ್ಗೆ ಬಿಟ್ಟು ಬೇರೆ ಯಾವ ದೇಶದ ಬಗ್ಗೆ ಹೆಚ್ಚು ಯೋಚಿಸುವುದೇ ಇಲ್ಲ. ಇತರೆ ರಾಷ್ಟçಕ್ಕೆ ಭಾರತವನ್ನು ಹೋಲಿಸಿದರೆ ಅವರ ಪಾಲಿಗೆ ಭಾರತ ಗಂಭೀರವಾಗಿ ತೆಗೆದುಕೊಳ್ಳುವ ರಾಷ್ಟ ಅಲ್ಲ ಎನ್ನುವ ಭಾವನೆ ಅವರಲ್ಲಿ ಇದೆ. ಆದರೆ ಈ ಹತ್ತು ಹದಿನೈದು ವರ್ಷಗಳಲ್ಲಿ ಭಾರತವನ್ನು ನೋಡುವ, ಪರಿಗಣಿಸುವ ರೀತಿ ಬದಲಾಗಿದೆ. ಬಲಿಷ್ಟವಾಗಿ ಬೆಳೆದಿರುವ ರಾಷ್ಟçವನ್ನು ತನ್ನ ನಿಯಂತ್ರಣದಲ್ಲಿ ಇರಿಸಿಕೊಳ್ಳಲು ಭಾರತ ಅಮೇರಿಕೆಗೆ ಅನಿವಾರ್ಯ. ಭಾರತ ಅಮೇರಿಕೆಗೆ ಒಂದು ಅಸ್ತçವಾಗಿ ಬಳಕೆಯಾಗುತ್ತಿದೆ.

ಸಂದರ್ಶಕ: ವಿಭಿನ್ನ ವ್ಯಕ್ತಿತ್ವ ಇದ್ದ ಟ್ರಂಪ್ ಗೆಲ್ಲಿಸಿ ಅಮೇರಿಕನ್ ನಾಗರಿಗರು ಸೋತ ಬಿಟ್ಟರೇ?
ರವಿಕೃಷ್ಣರೆಡ್ಡಿ:
ಸುಳ್ಳು ಮತ್ತು ನಿರ್ದಾಕ್ಷಣ್ಯವಾಗಿ ಒಂದು ಸಮುದಾಯಕ್ಕೆ, ವ್ಯಕ್ತಿಗೆ ಹಿಯಾಳಿಸುವ, ಅಸಹ್ಯವಾಗಿ ಮಾತನಾಡುವ ಅಧ್ಯಕ್ಷನನ್ನು ಅಮೇರಿಕ ತನ್ನ ಇತಿಹಾಸದಲ್ಲಿಯೆ ನೋಡಿರಲಿಲ್ಲ. ಟ್ರಂಪ್ ಅವರು ಅಧ್ಯಕ್ಷೀಯ ಚುನಾವಣೆಯಲ್ಲಿ ಅಲ್ಲಿನ ನಾಗರಿಕರನ್ನು ಭಾವನಾತ್ಮಾಕವಾಗಿ ಸೇಳೆಯುವಲ್ಲಿ ಯಶಸ್ವಿಯಾಗಿದ್ದರು. ಹಲವು ವರ್ಷಗಳ ಕಾಲ ಹೆಪ್ಪುಗಟ್ಟಿದ್ದ ಪ್ರತಿಷ್ಟೆಯ ಅಂಶಗಳಾದ ಬೀಳಿಯರಿಗೆ ಮಾತ್ರ ನಮ್ಮ ದೇಶ, ಅಮೇರಿಕ ಜನರ ಉದ್ಯೋಗಗಳನ್ನು ವಿದೇಶಿಗರು ಆಕ್ರಮಿಸಿಕೊಳ್ಳುತ್ತಾರೆ. ಸಾಪ್ಟವೇರ್ ಭಾಗದ ಉದ್ಯೋಗಳನ್ನು ಭಾರತೀಯರು ಸೇರಿದಂತೆ ವಿದೇಶಿಗರು ಕಸಿದುಕೊಳ್ಳುತ್ತಾರೆ ಎನ್ನುವ ಅಮೇರಿನ್ ನಾಗರಿಕರ ಆತಂಕವನ್ನು ಅವರು ಬಡೆದು ಎಬ್ಬಿಸಿದ್ದರು. ಈ ಅಂಶ ಅವರನ್ನು ಅಧ್ಯಕ್ಷೀಯ ಚುನಾವಣೆಯಲ್ಲಿ ಗೆಲ್ಲುವಂತೆ ಮಾಡಿತ್ತು. ಬರಾಕ್ ಓಬಾಮ ಬಗ್ಗೆ ಆಕರ್ಷಿತವಾಗಿ ಮತ ಹಾಕಿದಂತೆ, ಹಿಲರಿ ಕ್ಲಿಂಟನ್‌ಗೆ ಮತ ನೀಡಲಿಲ್ಲ. ಇದು ಅವರ ಗೆಲುವಿಗೆ ಕಾರಣವಾಗಿದ್ದು.

ಸಂದರ್ಶಕ: ಅಂತರಾಷ್ಟ್ರೀಯ ರಾಜಕಾರಣ ಹದೆಗಟ್ಟಿದೆಯೇ?
ರವಿಕೃಷ್ಣರೆಡ್ಡಿ: ಹೌದು ತಂತ್ರಜ್ಞಾನವನ್ನು ಎಲ್ಲ ದೇಶದ ರಾಜಕೀಯ ಪಕ್ಷಗಳು ದುರುಪಯೋಗ ಪಡಿಸಿಕೊಳ್ಳುತ್ತಿವೆ. ಭಾರತವೂ ಸೇರಿದಂತೆ ಸೋಶಿಯಲ್ ಮೀಡಿಯಾಗಳು ಕೆಲವರು ಅಧಿಕಾರಕ್ಕೆ ಬರಲು ಕಾರಣವಾಗಿವೆ. ಅಮೇರಿಕದಲ್ಲಿ ಇದು ಕೆಲಸ ಮಾಡಿದ್ದರ ಪರಿಣಾಮವಾಗಿ ಅವರು ಬಂದಿದ್ದಾರೆ. ಸೋಶಿಯಲ್ ಮೀಡಿಯಾಗಳು ನಮ್ಮನ್ನು ಹೇಗೆ ಬದಲಾಯಿಸಿವೆ ಅಂದರೆ ನಮಗೆ ವೋಟ್ ಮಾಡುವ ಎರಡು ಸೆಕೆಂಗಳಲ್ಲಿ ಒಬ್ಬ ರಾಜಕೀಯ ನಾಯಕನ ಬಗ್ಗೆ ಇರುವ ಅಭಿಪ್ರಾಯ ಬದಲಾವಣೆ ಮಾಡಿಸುವಷ್ಟು ನಮ್ಮನ್ನು ಆವರಿಸಿಕೊಂಡಿವೆ.

ಸಂದರ್ಶಕ: ಭಾರತಕ್ಕೆ ಆದರ್ಶ ಇರುವ ರಾಜಕೀಯ ಪಕ್ಷದ ಅಗತ್ಯತೆ ಇದೆಯೇ?
ರವಿಕೃಷ್ಣರೆಡ್ಡಿ:
ಪಾರದರ್ಶಕ, ಪ್ರಾಮಾಣಿಕ, ಆದರ್ಶವಾಗಿರುವ ರಾಜಕೀಯ ಪಕ್ಷದ ಅಗತ್ಯತೆ ಭಾರತಕ್ಕೆ ಇದೆ. ಅದರಲ್ಲಿಯೂ ಕರ್ನಾಟಕಕ್ಕೆ ಬಹಳ ಅಗತ್ಯ ಇದೆ. ಇಲ್ಲಿ ವಂಶಾಳಿತ. ಕುಟುಂಬ ಆಧರಿತ ರಾಜಕೀಯ ವ್ಯವಸ್ಥೆ ಇದೆ. ಅದು ಬದಲಾಗಬೇಕು. ಹೀಗೆ ಹೇಳುವವರೇ ಯೋಗ್ಯ ನಾಯಕರನ್ನು ಬೆಳೆಯಲು ಬಿಡುತ್ತಿಲ್ಲ. ಹೀಗಾಗಿ ರಾಜಕಿಯ ಆದರ್ಶ, ತತ್ವಗಳನ್ನ ಹೊಂದಿರುವ ಪಕ್ಷ ಇಲ್ಲಿ ಅಗತ್ಯವಿದೆ. ನಾವು ಭ್ರಷ್ಟಚಾರ ಒಂದು ಒಪ್ಪಿತ ಮೌಲ್ಯ ಎಂದುಕೊAಡಿದ್ದೆವೆ. ಒಂದು ಸಂಘಟನೆ ಪ್ರಾರಂಭಿಸಿದಾಗ ಒಂದು ಸಮುದಾಯವನ್ನು ಓಲೈಸಲು ಇಲ್ಲವೆ ಅದೇ ಸಂಘಟಣೆಯ ಪದಾಧಿಕಾರಿಗಳನ್ನು ಓಲೈಸಲು ನಾವು ಮುಂದಾಗಬೇಕಾಗುತ್ತದೆ. ಅದು ಬದಲಾಗಬೇಕು. ಅದಕ್ಕಾಗಿ ಸ್ವಯಂ ಪ್ರೇರಣೆಯಿಂದ ರಾಜಕೀಯಕ್ಕೆ ಪ್ರವೇಶವನ್ನು ನಾವು ಅಪೇಕ್ಷಿಸುತ್ತೇವೆ.

ಸಂದರ್ಶಕ: ಈಗಿನ ಪಕ್ಷಗಳು ಜವಾಬ್ದಾರಿ ನಿರ್ವಹಿಸುತ್ತಿಲ್ಲವೇ?
ರವಿಕೃಷ್ಣರೆಡ್ಡಿ:
ಹಾಗಿದ್ದರೆ ಬಡತನ ನಿರ್ಮೂಲನೆ ಆಗಿದಿಯೇ? ಜಾತ್ಯಾತೀತವಾಗಿ ಇರುವ ಬಡವರು ಬಡವರಾಗಿದ್ದಾರೆ. ಸಮಾಜದ ಎಲ್ಲ ಯೋಜನೆಗಳು ಅವರಿಗೆ ಅಗತ್ಯ ಇದೆ. ಸರಕಾರಿ ಆಸ್ಪತ್ರೆ ಅವರಿಗೆ ಅನಿವಾರ್ಯ. ಅವರ ಹಕ್ಕುಗಳಿಗೆ ದಕ್ಕೆಯದಾಗ ಸರಕಾರಿ ಅಧಿಕಾರಿಗೆ ಹೇಳಬೇಕು. ಇಂತಹ ಆತ್ಮಗೌರವ ಇಲ್ಲದ ವ್ಯವಸ್ಥೆಯನ್ನು ನಾವು ನಿರ್ಮಿಸಿದ್ದೇವೆ.

Leave a Reply

Your email address will not be published. Required fields are marked *

You May Also Like

ಸೇವಾಭಾಯಾ ಮಾಲಾಧಾರಿತ ಬಂಜಾರಾ ಪಡೆ ಭಾಯಾಗಡದತ್ತ ಪಯಣ

ಆಲಮಟ್ಟಿ : ಸಂತ ಸೇವಾಲಾಲ್ ಜನ್ಮಸ್ಥಳ ದಾವಣಗೆರೆ ಜಿಲ್ಲೆಯ ನ್ಯಾಮತಿ ತಾಲೂಕಿನ ಪುರಾತನ ಐತಿಹ್ಯವುಳ್ಳ ಧಾಮಿ೯ಕ…

ಮದ್ಯ ಮಾರಾಟದ ನಿರ್ಧಾರ ಸದ್ಯಕ್ಕೆ ಇಲ್ವಂತೆ

ಬೆಂಗಳೂರು : ಸದ್ಯ ಮದ್ಯ ಮಾರಾಟ ಮಾಡುವುದಿಲ್ಲ ಎಂಬ ಸುಳಿವನ್ನು ಸಚಿವ ಆರ್. ಅಶೋಕ್ ಹೇಳಿದ್ದಾರೆ.…

ರೈಲು ಹಳಿ ದುರಂತ: 16 ಸಾವು

ಮಹಾರಾಷ್ಟ್ರ:ನಿನ್ನೆಯಷ್ಟೆ ವಿಶಾಖಪಟ್ಟಣ ದುರಂತದ ಬೆನ್ನಲ್ಲೆ ಇಂದು ಔರಂಗಾಬಾದ್ ಪ್ರಕರಣ ಜನರನ್ನು ಬೆಚ್ಚಿ ಬೀಳಿಸಿದೆ. ಔರಂಗಾಬಾದ್ ರೈಲು…

ಕೊರೋನಾ ಸೋಂಕು ಹರಡುತ್ತಿರುವುದರ ಹಿಂದಿನ ಕ್ವಾರಂಟೈನ್ ಕಥೆ ಏನು ಗೊತ್ತಾ..!

ಈಗಾಗಲೇ ರಾಜ್ಯದಲ್ಲಿ ಕೊರೋನಾ ಸೋಂಕು ಹೆಚ್ಚತ್ತಲಿದ್ದು ಜನರಲ್ಲಿ ಸಹಜವಾಗಿಯೇ ಆತಂಕ ಮನೆಮಾಡಿದೆ. ಆದರೆ ಕೊರೋನಾ ಸೋಂಕು ಇನ್ನೇನು ನಿಯಂತ್ರಣಕ್ಕೆ ಬರುತ್ತದೆ ಎನ್ನುವಷ್ಟರಲ್ಲಿ ವಲಸಿಗರಿಗೆ ವಿನಾಯಿತಿ ನೀಡಲಾಯಿತು. ಇದು ಒಂದು ರೀತಿಯಿಂದ ಸೋಂಕು ಮತ್ತಷ್ಟು ಹರಡಲು ಕಾರಣವಾಯಿತು ಎನ್ನಬಹುದು.