ಬೆಂಗಳೂರು: ಈಗಾಗಲೇ ರಾಜ್ಯದಲ್ಲಿ ಕೊರೋನಾ ಸೋಂಕು ಹೆಚ್ಚತ್ತಲಿದ್ದು ಜನರಲ್ಲಿ ಸಹಜವಾಗಿಯೇ ಆತಂಕ ಮನೆಮಾಡಿದೆ. ಆದರೆ ಕೊರೋನಾ ಸೋಂಕು ಇನ್ನೇನು ನಿಯಂತ್ರಣಕ್ಕೆ ಬರುತ್ತದೆ ಎನ್ನುವಷ್ಟರಲ್ಲಿ ವಲಸಿಗರಿಗೆ ವಿನಾಯಿತಿ ನೀಡಲಾಯಿತು. ಇದು ಒಂದು ರೀತಿಯಿಂದ ಸೋಂಕು ಮತ್ತಷ್ಟು ಹರಡಲು ಕಾರಣವಾಯಿತು ಎನ್ನಬಹುದು.

ಹಾಗಂದ ಮಾತ್ರಕ್ಕೆ ವಲಸಿಗರು ಅವರ ಮನೆ ಸೇರಬಾರದಿತ್ತು ಎನ್ನುವ ಉದ್ದೇಶವೂ ನಮ್ಮದಲ್ಲ. ಆದರೆ ಸರ್ಕಾರದ ಕೆಲವು ನಡೆಯಿಂದಾಗಿ ಕ್ವಾರಂಟೈನ್ ಕೇಂದ್ರಗಳೇ ಸೋಂಕು ಉಲ್ಭಣಕ್ಕೆ ಕಾರಣವಾಗುತ್ತಿವೆಯಾ? ಎನ್ನುವ ಪ್ರಶ್ನೆ ಇದೀಗ ಬಹುತೇಕರಿಗೆ ಕಾಡುತ್ತಿದೆ. ಕೆಲವು ಪ್ರಕರಣಗಳ ಜಾಡು ಹಿಡಿದರೆ ಸರ್ಕಾರದ ಯಡವಟ್ಟಿನಿಂದ ಸೋಂಕು ಉಲ್ಭಣವಾಗುತ್ತಿರುವ ಬಗ್ಗೆ ಗಮನಕ್ಕೆ ಬರುತ್ತದೆ.

ಕ್ವಾರಂಟೈನ್ ಒಂದನೇ ಕಥೆ..!

ಸಕ್ಕರೆ ನಾಡು ಖ್ಯಾತಿ ಮಂಡ್ಯ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಾಗಿ ಕಂಡು ಬಂದಿದೆ. ಆದರೆ ಇದಕ್ಕೆ ಮೂಲ ಕಾರಣವೇನಿರಬಹುದು ಎಂದು ನೋಡಿದಾಗ ಮಂಡ್ಯ ಜಿಲ್ಲೆಯ ಕೆ.ಆರ್‌ ಪೇಟೆ, ನಾಗಮಂಗಲ, ಹಾಗೂ ಹಾಸನದ ಚನ್ನರಾಯಪಟ್ಟಣ ಭಾಗದ ಬಹುತೇಕ ಜನರು ಮುಂಬೈನಲ್ಲಿ ನೆಲೆ ಕಂಡು ಕೊಂಡಿದ್ದರು. ಆದರೆ ವಲಸಿಗರನ್ನು ಕರೆತರುವ ನಿಟ್ಟಿನಲ್ಲಿ ನೀಡಿದ ಸಡಿಲಿಕೆಯಿಂದ ಅವರೆಲ್ಲ ತವರಿಗೆ ಮರಳಿದ್ದಾರೆ. ಇನ್ನು ಕೆಲವರು ಬರುತ್ತಲೇ ಇದ್ದಾರೆ. ಮಹಾರಷ್ಟ್ರದಿಂದ ಮಂಡ್ಯ ಜಿಲ್ಲೆಗೆ ಬಂದಿರುವ 22 ಜನರಲ್ಲಿ ಕರೋನಾ ಸೋಂಕು ಪತ್ತೆಯಾಗಿದೆ. ಈ ಘಟನೆ ಮಂಡ್ಯ ಜಿಲ್ಲೆಯ ಜನರನ್ನು ಬೆಚ್ಚಿ ಬೀಳಿಸುತ್ತಿದೆ. ಇನ್ನೂ ಕಲಬುರಗಿಯಲ್ಲೂ 10 ಪ್ರಕರಣಗಳು ಪತ್ತೆಯಾಗಿವೆ.

ಭಾನುವಾರದಷ್ಟೊತ್ತಿಗೆ ಸರ್ಕಾರ ಬಿಡುಗಡೆ ಮಾಡಿರುವ ಹೆಲ್ಥ್ ಬಿಲಿಟಿನ್ ನಲ್ಲಿ 54 ಜನರ ಕರೋನಾ ಸೋಂಕಿತರ ಪಟ್ಟಿಯಲ್ಲಿ 39 ಜನರಿಗೆ ಮಹಾರಾಷ್ಟ್ರದಿಂದ ಬಂದವರು ಎಂದು ಉಲ್ಲೇಖ ಮಾಡಲಾಗಿದೆ. ಇದು ಕ್ವಾರಂಟೈನ್ ಒಂದನೆಯ ಕಥೆ.

ಕ್ವಾರಂಟೈನ್ ಎರಡನೇ ಕಥೆ

ಉಡುಪಿಯ ಜಿಲ್ಲೆಗೆ ಮುಂಬೈನಿಂದ ಬಂದಿದ್ದ ವ್ಯಕ್ತಿಗೆ ಮೇ 13ರಂದು ಹೃದಯಾಘಾತವಾಗಿತ್ತು. ಕುಂದಾಪುರ ಆಸ್ಪತ್ರೆಯಲ್ಲಿ ಈತನಿಗೆ ಶಸ್ತ್ರಚಿಕಿತ್ಸೆ ಮಾಡಿದರೂ ಬದುಕುಳಿಯಲಿಲ್ಲ. ಈತ ಮಹಾರಾಷ್ಟ್ರದಿಂದ ಆಗಮಿಸಿದ ವ್ಯಕ್ತಿ. ಹೀಗಾಗಿ ಈತನ ಸೋಂಕು ಪರೀಕ್ಷೆ ಉದ್ದೇಶದಿಂದ ಗಂಟಲು ದ್ರವ ಪರೀಕ್ಷೆಗೆ ಕಳುಹಿಸಲಾಗಿತ್ತು. ಆದರೆ ಪರೀಕ್ಷೆ ವರದಿ ಬಂದಾಗ ಆಘಾತ ಕಾದಿತ್ತು. ಈತನಿಗೆ ಕೊರೋನಾ ಸೋಂಕು ತಗುಲಿದ್ದು ದೃಢವಾಗಿತ್ತು. ಆದರೆ ಅಷ್ಟೊತ್ತಿಗಾಗಿ ಆ ವ್ಯಕ್ತಿ ಚಿಕಿತ್ಸೆಗಾಗಿ ಎರಡು ಆಸ್ಪತ್ರೆಗೆ ಹೋಗಿ ಬಂದಿದ್ದ ಮುಖ್ಯವಾಗಿ ಪಿಪಿಇ ಕಿಟ್‌ ಬಳಸದೆ ಮೃತ ವ್ಯಕ್ತಿಗೆ ಚಿಕಿತ್ಸೆ ನೀಡಿದ ಕುಂದಾಪುರ ಸಾರ್ವಜನಿಕ ಆಸ್ಪತ್ರೆ ಹಾಗೂ ಮಣಿಪಾಲದ ವೈದ್ಯರು ಹಾಗೂ ಕೆಲವೊಂದು ಸಿಬ್ಬಂದಿಗಳನ್ನು ಕ್ವಾರಂಟೈನ್‌ ಮಾಡಲಾಗಿದೆ. ಪ್ರಾಥಮಿಕ ಸಂಪರ್ಕದ 57 ಜನ ಹಾಗೂ ದ್ವಿತೀಯ ಸಂಪರ್ಕದ 38 ಜನರನ್ನು ಗುರುತಿಸಲಾಗಿದೆ.

ಆಗಿದ್ದೇನು…?

ಬೇರೆ ಬೇರೆ ರಾಜ್ಯದಿಂದ ಬಂದವರನ್ನು ಕೂಡಲೇ ಸೋಂಕು ಪರೀಕ್ಷೆ ಮಾಡಬೇಕಿತ್ತು. ಹೀಗಾಗದಿರುವುದಕ್ಕೆ ಮಂಡ್ಯ ಮತ್ತು ಉಡುಪಿ ಜಿಲ್ಲೆಯಲ್ಲಿನ ಈ ಯಡವಟ್ಟಿಗೆ ಕಾರಣವಾಯಿತು ಎನ್ನಲಾಗಿದೆ. ಬಾಂಬೆಯಿಂದ ಬಂದ ಮಾರನೇ ದಿನವೇ ಸೋಂಕು ಪರೀಕ್ಷೆ ಮಾಡಿದ್ದರೆ ಹೃದಯಾಘಾತವಾಗಿ ತೀರಿದ ವ್ಯಕ್ತಿಯಲ್ಲಿನ ಸೋಂಕಿನ ಬಗ್ಗೆ ಗೊತ್ತಾಗುತ್ತಿತ್ತು. ಆದರೆ ಇದಾಗದಿದ್ದಕ್ಕೆ ವೈದ್ಯರು ಹಾಗೂ ಸಿಬ್ಬಂಧಿಗಳು ಕ್ವಾರಂಟೇನ್ ಗೆ ಹೋಗುವಂತಾಯಿತು.

ಆಗುತ್ತಿರುವುದೇನು..?

ಮಹಾರಾಷ್ಟ್ರದಿಂದ ಬಂದವರನ್ನು ನೇರವಾಗಿ ಕ್ವಾರಂಟೈನ್‌ ಕೇಂದ್ರಕ್ಕೆ ರವಾನೆ ಮಾಡಲಾಗುತ್ತಿದೆ. ಅವರನ್ನು ಶಾಲಾ ಕೊಠಡಿಗಳಲ್ಲಿ ಇರಿಸಲಾಗುತ್ತಿದೆ. ಆದರೆ ಪ್ರತ್ಯೇಕವಾಗಿ ಇರಿಸುವ ಬದಲು ಗುಂಪು ಗುಂಪಾಗಿ ಜನರು ಇರುವಂತೆ ವ್ಯವಸ್ಥೆ ಮಾಡಿದೆ. ಇದು ಸೋಂಕು ಸುಲಭವಾಗಿ ಹರಡಲು ನೀರು ಗೊಬ್ಬರ ಸಿಕ್ಕಂತಾಯಿತು. ಗುಂಪುಗುಂಪಾಗಿ ಜನರನ್ನು ಇರಿಸಿದ ನಂತರ ಚಿಕಿತ್ಸೆ ಕೊಡುವುದಕ್ಕೆ ಕೋವಿಡ್‌ 19 ಆಸ್ಪತ್ರೆಗೆ ದಾಖಲಿಸಲಾಗುತ್ತಿದೆ.

ಆಗಬೇಕಾಗಿದ್ದೇನು..?

ಬಾಂಬೆ ಅಥವಾ ಯಾವುದೇ ರಾಜ್ಯದಿಂದ ಬಂದವರನ್ನು ತಕ್ಷಣ ತಪಾಸಣೆ ನಡೆಸಬೇಕು. ಸೋಂಕಿತರನ್ನು ಪ್ರತ್ಯೇಕಿಸಿ ಅವರಿಗೆ ಕ್ವಾರಂಟೈನ್‌ ಮಾಡಬೇಕು. ಕ್ವಾರಂಟೈನ್‌ ಅವಧಿಯಲ್ಲೂ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ಒಂದು ಕೊಠಡಿಯಲ್ಲಿ 25 ಜನರನ್ನು ಒಟ್ಟಿಗೆ ಮಲಗಲು ವ್ಯವಸ್ಥೆ ಮಾಡಿದಾಗ, ಅದರಿಂದ ಸೋಂಕು ಇಲ್ಲದಿರುವವರಿಗೂ ಸೋಂಕು ಹರಡುತ್ತದೆ. ಹೀಗಾಗಿ ಈ ಬಗ್ಗೆ ಸರ್ಕಾರ ಎಚ್ಚೆತ್ತುಕೊಳ್ಳಬೇಕಿದೆ.

ವಿದೇಶದಿಂದ ಬಂದು ಹೋಟೆಲ್ ಕ್ವಾರಂಟೈನ್ ನಲ್ಲಿರುವವರಿಂದ ಸೋಂಕು ಹರಡುತ್ತಿರುವ ಪ್ರಮಾಣ ನೋಡಿದರೆ ಬಹಳಷ್ಟು ಕಡಿಮೆ. ಆದರೆ ಸರ್ಕಾರದ ಉಚಿತ ಕ್ವಾರಂಟೈನ್ ಕೇಂದ್ರಗಳಲ್ಲಿ ಈ ಅವ್ಯವಸ್ಥೆ ಸೋಂಕು ಹೆಚ್ಚಳಕ್ಕೆ ಕಾರಣವಾಗುತ್ತದೆ ಎನ್ನುವ ಆತಂಕ ಸೃಷ್ಟಿಸಿದೆ.

1 comment
  1. ಸಕಾ೯ರ ಕರೊನಾ ವೈರಸ್ ಬಗ್ಗೆ ಹರಡದಂತೆ ತಡೆಯಲು ಮುಂಜಾಗ್ರತಾ ಕ್ರಮ ಅನುಸರಿಸುತ್ತಿರುವಾಗಲೂ ಈ ರೀತಿ ಮಾಡುವ ಬದಲು ಅದು ಅವರವರ ಕುಟುಂಬದ ಜವಾಬ್ದಾರಿ ಅವರಿಗೆ ಜೊತೆಗೆ ದವಾಖಾನೆ ಖಚ೯ನ್ನೂ ಅವರಿಂದಲೇ ಭರಿಸುವಂತೆ ಮಾಡಿದಾಗ ಗೊತ್ತಾಗುತ್ತದೆ.

Leave a Reply

Your email address will not be published. Required fields are marked *

You May Also Like

ಅಸಂಘಟಿತ ಕಾರ್ಮಿಕರಿಗೆ ತಿಂಗಳಿಗೆ ರೂ 10,000 ಪರಿಹಾರಕ್ಕೆ ಒತ್ತಾಯ

ಬೆಂಗಳೂರು: ರಾಜ್ಯದಲ್ಲಿ ಲಾಕ್ ಡೌನ್ ಹಿನ್ನೆಲೆ ಅಸಂಘಟಿತ ಕಾರ್ಮಿಕರು ತೀವ್ರ ಸಂಕಷ್ಟಕ್ಕೀಡಾಗಿದ್ದಾರೆ. ಹೀಗಾಗಿ ಅವರಿಗೆ ತಿಂಗಳಿಗೆ…

ಸಿಎಂ ಯಡಿಯೂರಪ್ಪ ಪ್ರಧಾನಿ ಮೋದಿ ಅವರಿಗೆ ನೀಡಿದ ಸಲಹೆ ಏನು?

ಗ್ರೀನ್ ಝೋನ್‌ಗಳಲ್ಲಿಯೂ ಕೊರೊನಾ ಪ್ರಕರಣಗಳು ಕಂಡು ಬರುತ್ತಿದ್ದು, ಮೂರನೇ ಹಂತದ ಲಾಕ್‌ಡೌನ್‌ನಲ್ಲಿ ವಿಧಿಸಲಾಗಿರುವ ನಿಯಮಗಳೇ ಮೇ 17ರ ನಂತರವೂ ಮುಂದುವರಿಯಲಿ ಎಂದು ಸಿಎಂ ಯಡಿಯೂರಪ್ಪ ಅವರು ಪ್ರಧಾನಿ ಮೋದಿ ಅವರಿಗೆ ಮನವಿ ಮಾಡಿದ್ದಾರೆ.

ಕೋವಿಡ್ ಸೋಂಕು ನಿಯಂತ್ರಣ:ಹೆಚ್ಚುವರಿ ನಿಯಂತ್ರಣ ಕ್ರಮಗಳ ಪಾಲನೆಗೆ ಜಿಲ್ಲಾಧಿಕಾರಿಗಳ ಆದೇಶ

ಗದಗ : ಕೋವಿಡ್ ಸೋಂಕು ನಿಯಂತ್ರಣಕ್ಕಾಗಿ ರಾಜ್ಯ ಸರ್ಕಾರ ಜಾರಿಗೊಳಿಸಿರುವ ಹೆಚ್ಚುವರಿ ನಿಯಂತ್ರಣ ಕ್ರಮಗಳನ್ನು ಜಿಲ್ಲಾದ್ಯಂತ…