ಡಾ.ಮಹೇಶ್ ಬುಜರಿ ಅವರ ಜೊತೆಗೆ ಡಾ. ಬಸವರಾಜ್ ಡಿ. ತಳವಾರ ಅವರು ಉತ್ತರಪ್ರಭಕ್ಕೆ ನಡೆಸಿದ ವಿಶೇಷ ಸಂದರ್ಶನ ಇಲ್ಲಿದೆ..

ಸಂದರ್ಶಕ: ಆಯುರ್ವೇದದ ಮೂಲಕ ಕೊರೊನಾ ಮುಂಜಾಗ್ರತೆ ಹೇಗೆ ಕೈಗೊಳ್ಳಬೇಕು?
ಡಾ.ಬುಜರಿ: ಕೊರೊನಾ ಅಂದ್ರೆ ಜನರು ಭಯ ಪಡುತ್ತಿದ್ದಾರೆ. ಅದರ ಬಗ್ಗೆ ಭಯ ಬೇಡ ಮುಂಜಾಗ್ರತೆ ಬೇಕು. ಈ ಬಗ್ಗೆ ವೈದ್ಯಕೀಯ ಕ್ಷೇತ್ರದಲ್ಲಿರುವ ನಾವುಗಳು ಜಾಗೃತಿ ಮೂಡಿಸುವ ಕಾರ್ಯ ಮಾಡಬೇಕು. ಅಂದಾಗ ಮಾತ್ರ ಜನರಲ್ಲಿರುವ ಭಯ ಹೋಗುತ್ತದೆ. ಮುಂಜಾಗೃತ ಕ್ರಮ ಕೈಗೊಂಡರೆ ಖಂಡಿತವಾಗಿಯೂ ಕೊರೊನಾ ನಿಯಂತ್ರಣ ಸಾಧ್ಯ.


ಸಂದರ್ಶಕ: ಆಯುರ್ವೆದಲ್ಲಿ ಕೊರೊನಾಕೆ ಪರಿಹಾರ ಏನು?
ಡಾ.ಬುಜರಿ: ಆಯುರ್ವೇದ ಅನ್ನುವುದೇ, ನಿಸರ್ಗದತ್ತವಾಗಿ ಸಿಗುವಂತ ಗಿಡಮೂಲಿಕೆಗಳನ್ನು ಬಳಸಿ ದೇಹದ ರೋಗವನ್ನು ಕಡಿಮೆಗೊಳಿಸುವುದು. ಅಥವಾ ಯಾವುದೇ ರೋಗ ಬಾರದ ಹಾಗೆ ಮುಂಜಾಗೃತ ಕ್ರಮವಾಗಿ ನಾವು ಸೇವಿಸುವುದು ಆಗಿದೆ. ಹೀಗಾಗಿ ನಾವು ಸೇವಿಸುವ ಆಹಾರ ಸೇವನೆಯಲ್ಲಿಯೇ ಜಾಗೃತಿ ವಹಿಸಬೇಕು. ಈ ಮೂಲಕ ಕೊರೊನಾ ಮುಂಜಾಗೃತೆಯನ್ನು ನಾವು ಕೈಗೊಳ್ಳಬೇಕು. ಈಗ ಪ್ರಸ್ತುತ ಕೊರೊನಾ ಮುಂಜಾಗೃತೆ ಕ್ರಮವಾಗಿ ಒಂದು ಗ್ಲಾಸಿನಲ್ಲಿ ಬಿಸಿನೀರು, ಒಂದು ಚಮಚೆ ಅರಿಶಿಣ, ಎರಡು ಚಿಟಿಕೆ ಉಪ್ಪು ಬಳಸಿ ದಿನನಿತ್ಯ ಸೇವಿಸಬೇಕು. ಇದು ದೇಹದ ಉಷ್ಟವನ್ನು ಹೆಚ್ಚಿಸುತ್ತದೆ. ಈ ಮೂಲಕವಾಗಿ ನಾವು ದೇಹದ ರೋಗನಿರೊಧಕ ಶಕ್ತಿಯನ್ನು ಹೆಚ್ಚಿಸಬಹುದು.

ಸಂದರ್ಶಕ: ಋತುಗಳಲ್ಲಾಗುವ ದೈಹಿಕ ಬದಲಾವಣೆಗೆ ಆಹಾರ ಕ್ರಮ ಮುಖ್ಯವೇ?
ಡಾ.ಬುಜರಿ: ಇದಕ್ಕೆ ಪ್ರಕೃತಿದತ್ತವಾಗಿ ಸಿಗುವಂತಹ, ಆಯಾ ಋತುಮಾನಗಳಿಗೆ ಅನುಗುಣವಾಗಿ ಬೆಳೆಯುವ ಹಣ್ಣು, ತರಕಾರಿಗಳನ್ನು ಮಿತವಾಗಿ ಸೇವಿಸಬೇಕು. ಅದು ನಮ್ಮನ್ನು ಆರೋಗ್ಯವಂತರನ್ನಾಗಿಸಲು ಸಹಕಾರಿಯಾಗುತ್ತದೆ. ಅಗತ್ಯಕ್ಕೆ ತಕ್ಕಷ್ಟು ದೈಹಿಕ ಶ್ರಮವೂ ಇಲ್ಲಿ ಮುಖ್ಯವಾಗುತ್ತದೆ.

ಸಂದರ್ಶಕ: ಸಾಮಾನ್ಯ ಜನರು ಆಯುರ್ವೇದಿಕ್ ಚಿಕಿತ್ಸೆ ಪಡೆಯಬಹುದೇ?
ಡಾ.ಬುಜರಿ: ಹೌದು ನಾವು, ನಮ್ಮ ಚಿಕಿತ್ಸಾ ವ್ಯವಸ್ಥೆ ಇರುವುದೇ ಜನರ ಸೇವೆಗಾಗಿ. ಹೀಗಾಗಿ ನಮ್ಮ ಕೈಗೆಟುಕುವ ಹಾಗೂ ಮನೆಯಲ್ಲಿಯೇ ಇರುವಂತಹ ವಸ್ತುಗಳನ್ನು ಬಳಸಿಕೊಂಡು ಔಷಧಿ ಗುಣಗಳ ಆಹಾರ ಕ್ರಮವನ್ನು ಮನೆಯಲ್ಲಿಯೇ ಆಯ್ಕೆ ಮಾಡಿಕೊಳ್ಳಬಹುದು. ಜೊತೆಗೆ ವನಸ್ಪತಿ ಕೇಂದ್ರಗಳಿಗಳಿಗೂ ಭೇಟಿ ನೀಡಬಹುದು. ಅಲ್ಲಿ ನಿಮ್ಮ ಎಲ್ಲ ರೋಗಗಳಿಗೂ ಪರಿಹಾರ ಸಿಗುತ್ತದೆ.

ಸಂದರ್ಶಕ: ಇಂದು ನಾವು ಜೀವಿಸುವ ಬದುಕಿನ ಶೈಲಿ ಹೊಸ ರೋಗಕ್ಕೆ ಕಾರಣವೇ?
ಡಾ.ಬುಜರಿ:
ನಾವು ಸೂರ್ಯೋದಯದ ನಂತರದಲ್ಲಿ ಎಳುತ್ತಿದ್ದೇವೆ. ನಾವು ಏಳ ಬೇಕಾಗಿರುವುದು ಬ್ರಾಹ್ಮಿ ಮೂಹೂರ್ತದಲ್ಲಿ ಅಂದರೆ ಸುರ್ಯೋದಯಕ್ಕೂ ಮುಂಚೆನೆ ನಾವು ಎಳಬೇಕು. ಆದರೆ ಇಂದು ನಾವು ಎಳುವ ಸಮಯಲ್ಲಿ ಬದಲಾವಣೆಯಾಗಿದೆ ಆಗಿದೆ. ಬೆಳಿಗ್ಗೆ ಬೇಗ ಏಳುವುದರಿಂದ ಅತೀ ಹೆಚ್ಚಾಗಿ ನಮಗೆ ಆಮ್ಲಜನಕ ಸಿಗುತ್ತದೆ. ಹೀಗಾಗಿ ನಾವು ನಮ್ಮ ಬದುಕಿನ ಶೈಲಿ ಬದಲಾಯಿಸಿಕೊಳ್ಳವುದು ಅನಿವಾರ್ಯ.

ಸಂದರ್ಶಕ: ದಿನಕ್ಕೆ ನಮ್ಮ ದೇಹಕ್ಕೆ ಎಷ್ಟು ನೀರು ಅಗತ್ಯವಿದೆ?
ಡಾ.ಬುಜರಿ: ನಮ್ಮ ದೇಹಕ್ಕೆ ಕನಿಷ್ಟ 750 ಎಂಎಲ್ ನೀರು ಬೇಕು. ಕನಿಷ್ಟ ನಾವು ಇಷ್ಟು ನೀರನ್ನು ಸೇವಿಸಬೇಕು. ಹೀಗಾಗಿ ಅತೀ ಹೆಚ್ಚು ನೀರನ್ನು ಕುಡಿದಷ್ಟು ನಾವು ಆರೋಗ್ಯವಾಗಿ ಇರುತ್ತೇವೆ. ಹೆಚ್ಚಿನ ನೀರು ದೇಹದಲ್ಲಿರುವ ವಿಷಯುಕ್ತ ಅಂಶಗಳನ್ನು ಹೊರ ಹಾಕುತ್ತದೆ. ಹೀಗಾಗಿ ನಾವು ಆಹಾರ ಕ್ರಮದಲ್ಲಿ ರೂಢಿಸಿಕೊಳ್ಳಬೇಕು.

Leave a Reply

Your email address will not be published. Required fields are marked *

You May Also Like

ಲಾಕ್ ಡೌನ್ ಮದ್ಯೆಯೂ ಅಕ್ರಮ ಮದ್ಯ ಮಾರಾಟ ಮಹಿಳೆಯರ ಆಕ್ರೋಶ

ದಗ: ಲಾಕ್ ಡೌನ್ ನಡುವೆ ಅಕ್ರಮ ಮದ್ಯ ಮಾರಾಟ ವಿರೋಧಿಸಿ ಮಹಿಳೆಯ ಪ್ರತಿಭಟನೆ ನಡೆಸಿರುವಂತಹ ಘಟನೆ ಗದಗ ಜಿಲ್ಲೆ ಮುಂಡರಗಿ ತಾಲೂಕಿನ ಕಂದಪೂರ ಗ್ರಾಮದಲ್ಲಿ ನಡೆದಿದೆ. ಕಂದಪೂರ ಗ್ರಾಮದಲ್ಲಿ ಹಲವು ಮನೆಗಳಲ್ಲಿ ಅಕ್ರಮ ಮದ್ಯ ಮಾರಾಟ ನಡೆಯುತ್ತಿರುವ ಕಂಡು ಮಹಿಳೆಯರು ಗ್ರಾಮ ಪಂಚಾಯತ ಎದುರು ಪ್ರತಿಭಟನೆ ನಡೆಸಿದ್ದಾರೆ. ಇನ್ನು ಅಕ್ರಮ ಮದ್ಯ ಮಾರಾಟಕ್ಕೆ ಬ್ರೇಕ್ ಹಾಕ ಬೇಕಿದ್ದ ಅಬಕಾರಿ ಇಲಾಖೆ ವಿರುದ್ಧ ಮಹಿಳೆಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಬಕಾರಿ ಹಾಗೂ ಪೋಲಿಸ್ ಇಲಾಖೆ ಅಧಿಕಾರಿಗಳ ನಿರ್ಲಕ್ಷ್ಯ ತೋರಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

ಪ್ಲಾಸ್ಮಾ ಚಿಕಿತ್ಸೆಯಿಂದ ಗಂಭೀರ ಪರಿಸ್ಥಿತಿಯ ಸೋಂಕಿತರ ರಕ್ಷಣೆ ಕಷ್ಟ: ಕೇಜ್ರಿವಾಲ್

ದೆಹಲಿ: ಗಂಭೀರ ಪರಿಸ್ಥಿತಿಯಲ್ಲಿರುವ ಕೊರೊನಾ ಸೋಂಕಿತರ ಜೀವವನ್ನು ಪ್ಲಾಸ್ಮಾ ಚಿಕಿತ್ಸೆಯಿಂದ ಉಳಿಸುವುದು ತೀರಾ ಕಷ್ಟ ಎಂದು…

ಪಚನ ಶಕ್ತಿ ವೃದ್ಧಿಗೆ ಮೊಳಕೆ ಒಡೆದ ಹೆಸರು ಕಾಳು

ಸದ್ಯ ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ. ಮಹಾಮಾರಿ ತಡೆಗಟ್ಟಲು ಆತ್ಮವಿಶ್ವಾಸದ ಜೊತೆಗೆ ರೋಗನಿರೋಧಕ ಶಕ್ತಿ ಹೆಚ್ಚಾಗಿ ಬೇಕಾಗುತ್ತದೆ. ಇದಕ್ಕಾಗಿ ಸಾರ್ವಜನಿಕರು ಜಾಗೃತಿ ವಹಿಸುವ ಅಗತ್ಯತೆ ತುಂಬಾ ಇದೆ. ಮಕ್ಕಳು, ವೃದ್ಧರು ಸೇರಿದಂತೆ ಎಲ್ಲ ವಯಸ್ಸಿನವರು ಇಮ್ಯೂನಿಟಿ ಪವರ್ ಹೆಚ್ಚಿಸುವ ಆಹಾರದತ್ತ ಹೆಚ್ಚಿನ ಗಮನ ಹರಿಸುವ ಅಗತ್ಯತೆ ಈ ಸಂದರ್ಭದಲ್ಲಿ ತುಂಬಾ ಇದೆ. ಇದಕ್ಕೆ ರಾಮಬಾಣ ಎಂಬಂತೆ ವರ್ತಿಸುವ ಹೆಸರುಕಾಳನ್ನು ಜನರು ಹೆಚ್ಚಾಗಿ ಬಳಸುವ ಅವಶ್ಯಕತೆ ಇದೆ.

ಜಗತ್ತಿನಲ್ಲಿ ಕೊರೋನಾಗೆ ಬಲಿಯಾದವರ ಸಂಖ್ಯೆ 2.33 ಲಕ್ಷ

ಲಂಡನ್ : ಜಗತ್ತಿನಲ್ಲಿ ಕೊರೊನಾ ಆರ್ಭಟ ಹೆಚ್ಚಾಗುತ್ತಿದೆ. ಈ ಮಹಾಮಾರಿಗೆ 2.33 ಲಕ್ಷ ಜನ ಬಲಿಯಾಗಿದ್ದಾರೆ.…