ಗಜೇಂದ್ರಗಡ: ದಿನದಿಂದ ದಿನಕ್ಕೆ ಅಡುಗೆ ಅನಿಲ ಬೆಲೆ ಏಕಾಏಕಿ ಏರಿಕೆ ಮಾಡುವ ಮೂಲಕ ಕೇಂದ್ರ ಸರ್ಕಾರ ಗ್ರಾಹಕರನ್ನು ತತ್ತರಿಸುವಂತೆ ಮಾಡುತ್ತಿದೆ. ಕೇಂದ್ರದ ಆಡಳಿತ ಬಡವರ ಮೇಲಿನ ಗಧಾಪ್ರಹಾರದ ಆಡಳಿತವಾಗಿದೆ ಎಂದು ಸಿಪಿಐಎಂ ಮುಖಂಡ ಎಂ.ಎಸ್.ಹಡಪದ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಗುರುವಾರ ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಎರಡನೇ ಅವಧಿಗೆ ಅಧಿಕಾರಕ್ಕೆ ಬಂದ ನಂತರ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರುಗತಿಯಲ್ಲಿ ಸಾಗಿದ್ದು, ಇದೀಗ ಎಲ್‌ಪಿಜಿ ದರ ಮತ್ತೊಮ್ಮೆ 50 ರೂಪಾಯಿ ಏರಿಕೆ ಕಂಡಿದೆ. ಈ ಹೊಸ ದರ ನಿನ್ನೆ ರಾತ್ರಿಯಿಂದಲೇ ಜಾರಿಗೆ ಬಂದಿದ್ದು, ಇದರಿಂದ ಸಾಮಾನ್ಯ ವರ್ಗದವರ ಮೇಲೆ, ತೀವೃತರವಾದ ಪರಿಣಾಮ ಬೀರುತ್ತಿದೆ. ಒಂದೆಡೆ ಹೊಗೆ ಮುಕ್ತ ಸಮಾಜ ಮಾಡುವ ಹೆಸರಿನಲ್ಲಿ ಉಚಿತ ಗ್ಯಾಸ ನೀಡಿ, ಇನ್ನೊಂದೆಡೆ ಅಡುಗೆ ಅನಿಲ ಬೆಲೆ ದುಪ್ಪಟ್ಟು ಮಾಡುವ ಮೂಲಕ ಬಡ ಹಾಗೂ ಮಧ್ಯಮ ವರ್ಗದವರನ್ನು ಕೊಳ್ಳೆ ಹೊಡೆಯುತ್ತಿರುವುದು ನಾಚಿಕೆಗೇಡಿನ ಸಂಗತಿಯಾಗಿದೆ ಎಂದು ಕಿಡಿಕಾರಿದರು.

ಇತ್ತೀಚೆಗೆ ಕೇಂದ್ರ ಸರ್ಕಾರ ಬಡವರ ಹೊಟ್ಟೆ ಮೇಲೆ ಬರೆ ಎಳೆಯವಂತಹ ಕಾಯ್ದೆಗಳನ್ನು ಜಾರಿಗೆ ತರುತ್ತಿರುವುದು ಒಂದೆಡೆಯಾದರೆ, ರಾತ್ರೋರಾತ್ರಿ ಎಲ್‌ಪಿಜಿ ಸಬ್ಸಿಡಿ ದರ ಕಡಿತದೊಂದಿಗೆ ಹೆಚ್ಚುವರಿಯಾಗಿ 50 ರೂಪಾಯಿ ಏರಿಕೆ ಮಾಡಿದ್ದು, ಬಿಜೆಪಿ ಸರ್ಕಾರದ ಈ ದಿಡೀರ ನಿರ್ಧಾರ ದೇಶದ ಜನರ ಮೇಲೆ ಮಾರಕವಾಗಿದೆ ಎಂದು ಆರೋಪಿಸಿದರು.

ರೂ. 621 ನೆಲೆ ಇದ್ದ ಗ್ಯಾಸ್, ಇದೀಗ ಏಕಾಏಕಿ ರು 681ಕ್ಕೆ ಏರಿಕೆಯಾಗಿದೆ. ಅಡುಗೆ ಅನಿಲಕ್ಕೆ ನೀಡುತ್ತಿದ್ದ ಸಬ್ಸೀಡಿ ಸಹ ಕೇಂದ್ರ ಸರ್ಕಾರ ಸದ್ದಿಲ್ಲದೇ, ರದ್ದುಗೊಳಿಸಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಬಣ್ಣದ ಮಾತುಗಳಿಗೆ ಮರುಳಾದ ದೇಶದ ಜನರಿಗೆ ಕೇಂದ್ರ ನೀಡುತ್ತಿರುವ ಬಂಪರ್ ಕೊಡುಗೆಗಳಾಗಿವೆ. ಕೂಡಲೇ ಇಂತಹ ಬೆಲೆ ಏರಿಕೆಯ ನಿರ್ಧಾರಗಳನ್ನು ಕೈ ಬಿಡಬೇಕೆಂದು ಆಗ್ರಹಿಸಿದ್ದಾರೆ.

Leave a Reply

Your email address will not be published. Required fields are marked *

You May Also Like

ಇಂಧನ ದರ ಏರಿಕೆ ವಿರೋಧಿಸಿ ಸೈಕಲ್ ಏರಿ ಕಾಂಗ್ರೆಸ್ ನಾಯಕರ ಪ್ರತಿಭಟನೆ

ಬೆಂಗಳೂರು: ಕಳೆದ 15 ದಿನಗಳಿಂದ ನಿರಂತರವಾಗಿ ದೇಶಾದ್ಯಂತ ಇಂಧನ ಬೆಲೆ ಏರಿಕೆಯಾಗಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ…

ಯುವ ಕಾಂಗ್ರೆಸ್ ಅಧ್ಯಕ್ಷ ಸರ್ಫರಾಜ್ ಅವರಿಗೆ ಅಭಿನಂದನೆ

ಬ್ಲಾಕ್ ಯೂತ್ ಕಾಂಗ್ರೆಸ್ ಅಧ್ಯಕ್ಷರಾಗಿ ಆಯ್ಕೆಯಾದ ಸರ್ಫರಾಜ್ ಸೂರಣಗಿಯವರನ್ನು ಜಿಲ್ಲಾ ಕಾಂಗ್ರೆಸ್ ಸಮಿತಿಯ ಮಾಜಿ ಅಧ್ಯಕ್ಷ ಹಾಗೂ ಮಾಜಿ ಶಾಸಕ ಜಿ.ಎಸ್.ಗಡ್ಡದೇವರಮಠ ಅಭಿನಂದಿಸಿದರು.

ಶುದ್ದ ಕುಡಿಯುವ ನೀರಿನ ಘಟಕ ಕಳಪೆ ಕಾಮಗಾರಿ: ಕರವೇ ಪ್ರತಿಭಟನೆ

ವರದಿ: ವಿಠಲ‌ ಕೆಳೂತ್ ಮಸ್ಕಿ:ಪಟ್ಟಣದ 20ನೇ ವಾರ್ಡಿನ ಶುದ್ದ ಕುಡಿಯುವ ನೀರಿನ ಘಟಕ ಕಳಪೆ ಕಾಮಗಾರಿಯಿಂದ…

ಪೊಲೀಸರಿಗೆ ವಾಚಮನ್ ಎಂದು ಆವಾಜ್ ಹಾಕಿದ ಯುವಕ

ಲಾಕ್ ಡೌನ್ ಇದ್ದಾಗಲೂ ಅನವಶ್ಯಕವಾಗಿ ಬೈಕ್ ನಲ್ಲಿ ಓಡಾಡುತ್ತಿದ್ದ ಯುವಕನಿಗೆ ಓಡಾಡದಂತೆ ಸೂಚನೆ ನೀಡಿದ ಪೊಲೀಸರಿಗೆ ಯುವಕ ನೀವು ವಾಚಮನ್ ಇದ್ದ ಹಾಗೆ ಎಂದು ಆವಾಜ್ ಹಾಕಿದ್ದಾನೆ.