ಲಕ್ಷ್ಮೇಶ್ವರ: ಕೇಂದ್ರ ಸರ್ಕಾರದ ಕಾರ್ಮಿಕ ಹಾಗೂ ರೈತ ವಿರೊಧ ನೀತಿ ಖಂಡಿಸಿ ಗದಗ ಜಿಲ್ಲೆ ಲಕ್ಷ್ಮೇಶ್ವರ ಪಟ್ಟಣದಲ್ಲಿ ವಿವಿಧ ಕಾರ್ಮಿಕ ಹಾಗೂ ರೈತಪರ ಮತ್ತು ಕನ್ನಡ ಪರ ಸಂಘಟನೆಗಳಿಂದ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು.

ಪಟ್ಟದ ತಹಶಿಲ್ದಾರರ ಕಚೇರಿ ಎದುರಿಗೆ ಅಂಗನವಾಡಿ, ಬಿಸಿಯೂಟ ತಯಾರಕರು, ಅಂಚೇ ಕಚೇರಿ ಹಾಗೂ  ಪಂಚಾಯತ್ ನೌಕರರು ಸರ್ಕಾರದ ಕಾರ್ಮಿಕ ವಿರೋಧಿ ನೀತಿ ಖಂಡಿಸಿ ಪ್ರತಿಭಟನೆ ನಡೆಸಿದರು.

ಗ್ರಾಮ ಪಂಚಾಯತಿ ನೌಕರರಿಗೆ ಮಾರ್ಚ 2018ರಿಂದ ವಾರ್ಷಿಕವಾಗಿ 4 ತಿಂಗಳ ವೇತನ ನೀಡುತ್ತಿಲ್ಲ. ವಾರ್ಷಿಕ ರೂ.382 ಕೋಟಿ ಬಾಕಿ ವೇತನ ಬಿಡುಗೆಗಾಗಿ ಒತ್ತಾಯಿಸಿ. ಕೇಂದ್ರ ಸರ್ಕಾರ ಪಂಚಾಯತ್ ರಾಜ್ ಸಂಸ್ಥೆಗಳಿಗೆ ಶೇ.95 ರಷ್ಟು ಅನುದಾನ ಕಡಿತ ಮಾಡಿದ್ದು ಖಂಡನೀಯ ಎಂದು ಸರ್ಕಾರದ ವಿರುದ್ಧ ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

ಡಿಇಒ ಗಳಿಗೆ ಬಡ್ತಿ ಮತ್ತು ಅನುಮೋದನೆಗಾಗಿ ಪಂಪ್ ಆಪರೇಟರ್ ಕೆಲಸದ ಪುನರ್ ವಿಮರ್ಶೆ ವರದಿ ರದ್ದಿಗಾಗಿದ್ದು, ಆದಾಯ ತೆರಿಗೆ ವ್ಯಾಪ್ತಿ ಹೊರಗಿರುವ ಕುಟುಂಬಗಳಿಗೆ ರೂ.7500 ನಗದು ನೀಡಬೇಕು ಎಂದು ಒತ್ತಾಯಿಸಿದರು. ಸಾವಿತ್ರಿ ಬಡ್ನಿ, ಚಂದ್ರಮತಿ ಶಿರಹಟ್ಟಿ, ದ್ಯಾಮಕ್ಕ ಹರಿಜನ, ವಿಜಯಲಕ್ಷ್ಮಿ ಬಡಿಗೇರ, ರಜಿಮಾ ನಧಾಪ, ಗಿರಿಜಾ ಗಾಡದ ಸೇರಿದಂತೆ ಅನೇಕರು ಇದ್ದರು.

Leave a Reply

Your email address will not be published. Required fields are marked *

You May Also Like

ದಿಂಗಾಲೇಶ್ವರ ಶ್ರೀ ಆಕ್ಷೇಪಾರ್ಹ ಹೇಳಿಕೆಗೆ ಸಚಿವ ಸಿ.ಸಿ.ಪಾಟೀಲ ತೀವ್ರ ಖಂಡನೆ

ಉತ್ತರಪ್ರಭಆಲಮಟ್ಟಿ: ಅಸಂಖ್ಯ ಭಕ್ತರ ಆರಾಧ್ಯ ದೈವ ಗದುಗಿನ ತೋಂಟದ ಲಿಂಗೈಕ್ಯ ಡಾ. ಸಿದ್ದಲಿಂಗ ಶ್ರೀಗಳ ಜನ್ಮದಿನವನ್ನು…

ಕೈಗೆ ಸಿಕ್ಕ ಅಧಿಕಾರಿಗೆ ಟ್ರ‍್ಯಾಕ್ಟರ್ ನಲ್ಲಿ ರಸ್ತೆ ದರ್ಶನ: ಕೆಲವು ತಿಂಗಳಕ್ ಕಿತ್ತು ಹೋಗೈತ್ಯಂತ ದೊಡ್ಡೂರು ರಸ್ತೆ!

ಹೇಳಿ, ಹೇಳಿ ಸಾಕಾಗಿ ಹೋಯ್ತು. ಕಾಮಗಾರಿ ಮುಗಿದ್ ಒಂದ್ ತಿಂಗಳದಾಗ ಮಾಡಿದ್ ರೋಡ್ ಹಳ್ಳಾ ಹಿಡಿದೈತಿ. ಬರ್ರಿ.. ನೀವಾರಾ ನೋಡ್ ಬರ್ರಿ.., ಕೆಲ್ಸಾ ಮಾಡಿದ್ ಗುತ್ತಿಗೆದಾರರಾದ್ರು ಯಾರು? ಹಿಂಗೆಲ್ಲ ಹೇಳಿ ಅಧಿಯಾರಿಯೊಬ್ಬರನ್ನು ತರಾಟೆಗೆ ತೆಗೆದುಕೊಂಡ ಘಟನೆ ಲಕ್ಷ್ಮೇಶ್ವರದಲ್ಲಿ ನಡೆಯಿತು.

ಗಾಯನ ನಿಲ್ಲಿಸಿದ ಎಸ್ ಪಿಗೆ ಗಣ್ಯರಿಂದ ಸಂತಾಪ!

ಬೆಂಗಳೂರು : ಉಸಿರು ಚೆಲ್ಲಿದ ಹಿರಿಯ ಗಾಯಕ ಎಸ್.ಪಿ. ಬಾಲಸುಬ್ರಮಣ್ಯಂ ಅವರ ನಿಧನಕ್ಕೆ ಸಿಎಂ ಬಿ.ಎಸ್.…