ದೆಹಲಿ: ಸೆಲೆಬ್ರಟಿಗಳಿಗೆ ಅದೆಂತೆಂಥಾ ಹುಚ್ಚಿರುತ್ತೆ ಅಂತ ಊಹಿಸೋಕು ಆಗಲ್ಲ. ಪ್ರಚಾರಕ್ಕಾಗಿ ಎಂತೆಂಥ ಚಿತ್ರವಿಚಿತ್ರ ಅವತಾರ ತಾಳುತ್ತಾರೆ ಅಂತ ಕಲ್ಪನೆಗೂ ಅಸಾಧ್ಯ. ಇಂತಹ ಪ್ರಚಾರದ ಗೀಳಿಗೆ ಬಿದ್ದ ನಟಿಯೊಬ್ಬರು ಇದೀಗ ನೆಟ್ಟಿಗರಿಗೆ ಶಾಕ್ ಕೊಟ್ಟಿದ್ದಾರೆ.

ಸಾಮಾನ್ಯವಾಗಿ ಮದುಮಗಳು ಅಂದ ತಕ್ಷಣ ಆಕೆ ದಿರಿಸು ನಮ್ಮ ಕಣ್ಮುಂದೆ ಬರುತ್ತದೆ. ಆದರೆ ಈ ನಟಿ ಮದುಮಗಳಂತೆ ಸಿಂಗಾರಗೊಂಡ್ರು ತೊಟ್ಟಿದ್ದು ಮಾತ್ರ ಲೆಹೆಂಗಾ-ಶಾರ್ಟ್ಸ್. ಈ ಮೂಲಕ ನಟಿ ಜಸ್ಲೀನ್ ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರ ಟೀಕೆ-ಟಿಪ್ಪಣೆಗೆ ಗುರಿಯಾಗಿದ್ದಾರೆ. ಜಸ್ಲೀನ್ ವರ್ತನೆ ಭಾರತೀಯ ಸಂಸ್ಕೃತಿಗೆ ಧಕ್ಕೆಯುಂಟುಮಾಡುವಂತಿದೆ. ಈ ಕಾರಣದಿಂದ ಅವರು ಜನರ ಕ್ಷಮೆ ಯಾಚಿಸಬೇಕು ಎಂದು ಕೆಲವರು ಆಗ್ರಹಿಸಿದ್ದಾರೆ. ಇನ್ನು ಕೆಲವರು ಜಸ್ಲೀನ್ ಹೊಸ ಅವತಾರಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅಂದ ಹಾಗೇ ಜಸ್ಲೀನ್ ಅಂದ್ರೆ ಯಾರು ಅಂತ ಬಹಳಷ್ಟು ಗೊತ್ತಾಗದ ಬಹಳಷ್ಟು ಜನರಿಗೆ ಬಿಗ್ ಬಾಸ್ ಸೀಜನ್ 12ರ ಸ್ಪರ್ಧಿ ಅಂದ್ರೆ ಥಟ್ ಅಂತ ಗೊತ್ತಾಗುತ್ತೆ.

ನಟಿ, ಗಾಯಕಿ, ಬಿಗ್ ಬಾಸ್ ಸ್ಪರ್ಧಿ, ಜಸ್ಲೀನ್ ಮಾಥಾರೂ ವಧುವಿನಂತೆ ಸಿಂಗರಿಸಿಕೊಂಡು, ಅರ್ಧ ಲೆಹಂಗಾ ಕೆಳಗಡೆ ಶಾರ್ಟ್ಸ್ ಧರಿಸಿ ರಸ್ತೆಯಲ್ಲಿ ನಡೆದು ಬಂದು ಎಲ್ಲರ ಹುಬ್ಬೇರುವಂತೆ ಮಾಡಿದ್ದಾರೆ. ತಮ್ಮ  ಹೊಸ ಅವತಾರದ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ. ಲೆಹಂಗಾ – ಶಾರ್ಟ್ಸ್ ತೊಟ್ಟು ಕ್ಯಾಮರಾಗೆ ಫೋಸ್ ನೀಡಿದ್ದಾರೆ. ಮುಖ ನೋಡಿದರೆ ಥೇಟ್ ವಧು. ಆದರೆ ವಧು ಅಲ್ಲ. ವಧುವಿನಂತೆಯೇ ಅಲಂಕರಿಸಿಕೊಂಡು ಕೆಂಪು ಬಣ್ಣದ ಲೆಹಂಗಾ ಟಾಪ್, ದುಪ್ಪಟ್ಟಾ ಹಾಗೂ ಜೀನ್ಸ್ ಶಾರ್ಟ್ಸ್ ಧರಿಸಿ ತಾನು ಅತ್ತೆಯ ಮನೆಗೆ ಹೋಗುತ್ತಿದ್ದೇನೆ ಎಂದು ಬರೆದುಕೊಂಡಿದ್ದಾರೆ. ಏನೇ ಆಗಲಿ ಜಸ್ಲೀನ್ ಉಡುಗೆ ಮಾತ್ರ ಪಡ್ಡೆ ಹುಡುಗರ ನಿದ್ದೆಗೆಡಿಸಿದೆ.

Leave a Reply

Your email address will not be published. Required fields are marked *

You May Also Like

ಉಮೇಶ ಎಂಬ ಟೇಲರ ಹತ್ಯೆ ಖಂಡಿಸಿ ಗಲ್ಲು ಶಿಕ್ಷೆ ವಿಧಿಸಲು ರಾಜ್ಯ ಪಾಲರಿಗೆ ಮನವಿ

ಉತ್ತರಪ್ರಭ ಸದ್ದಿಮುಂಡರಗಿ: ತಾಲೂಕಿನ ದಂಡಾಧಿಕಾರಿಗಳು ವಿವಿಧ ಸಂಘಟನೆಗಳ ಮುಕಾಂತರ ಕನ್ಯಾಯ ಲಾಲ್ ಉಮೇಶ ಎಂಬ ಟೇಲರ್…

ಸ್ಮಶಾನವಿದೆ ಆದರೆ ಶವ ಸಂಸ್ಕಾರ..?: ಪಟ್ಟಣ ಪಂಚಾಯತಿ ಮುಂದೆ ಶವ ಇಟ್ಟು ಪ್ರತಿಭಟನೆ!

ಅಂತ್ಯಕ್ರಿಯೇಗೆ ಸರಿಯಾದ ವ್ಯವಸ್ಥೆ ಇಲ್ಲದ ಕಾರಣ ಹಾಗೂ ಕೆಸರು ಗದ್ದೆಯಂತಾದ ರಸ್ತೆಗಳಿಂದ ಶವಸಂಸ್ಕಾರಕ್ಕೆ ಜನರು ಪರದಾಡುವಂತಾಗಿದ್ದು, ಈ ಬಗ್ಗೆ ಸ್ಥಳೀಯ ಪಟ್ಟಣ ಪಂಚಾಯತಿ ಗಮನ ಹರಿಸದೇ ಇರುವ ಕ್ರಮ ಖಂಡಿಸಿ ಇಂದು ನರೇಗಲ್ ಪಟ್ಟಣ ಪಂಚಾಯತಿ ಎದುರು ಶವ ಇಟ್ಟು ಪ್ರತಿಭಟನೆ ನಡೆಸಿದ ಘಟನೆ ನರೇಗಲ್ಲನಲ್ಲಿ ನಡೆಯಿತು.

ಕೊರೋನಾ ಕಾವ್ಯ-9

ಇವತ್ತಿನ ಕೊರೋನಾ ಕಾವ್ಯ ಸರಣಿಗೆ ಕಾವ್ಯ ಕಳುಹಿಸಿದವರು ಡಾ.ಸಂಗಯ್ಯ ಶೇ ಶಿರೂರಮಠ ಅವರು. ಪುಣೆಯ ಡಿಫೆನ್ಸ್ ವಿಶ್ವವಿದ್ಯಾಲಯದಲ್ಲಿ ಗ್ರಂಥಾಲಯಾಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಭಯದ ಗೂಡಿನಲ್ಲಿ ಒಂದಾದ ಜೀವಗಳ ತಲ್ಲಣವನ್ನು ಕಾವ್ಯದ ಮೂಲಕ ಕಟ್ಟಿಕೊಟ್ಟಿದ್ದಾರೆ.

ಬೆಂಗಳೂರು : ಮಹಾಮಾರಿ ನಿಯಂತ್ರಿಸುವ ನಿಟ್ಟಿನಲ್ಲಿ

ವೈದ್ಯಕೀಯ ಸಲಕರಣೆ ಖರೀದಿಯಲ್ಲಿ ಅವ್ಯವಹಾರವಾಗಿಲ್ಲ ಎನ್ನುವುದಾದರೆ ಸೂಕ್ತ ದಾಖಲೆ ಬಿಡುಗಡೆ ಮಾಡಿ ಎಂದು ಮಾಜಿ ಸಿಎಂ…