ವೈದ್ಯಕೀಯ ಸಲಕರಣೆ ಖರೀದಿಯಲ್ಲಿ ಅವ್ಯವಹಾರವಾಗಿಲ್ಲ ಎನ್ನುವುದಾದರೆ ಸೂಕ್ತ ದಾಖಲೆ ಬಿಡುಗಡೆ ಮಾಡಿ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಅವರು, ವೈದ್ಯಕೀಯ ಶಿಕ್ಷಣ ಸಚಿವ ಡಾ. ಸುಧಾಕರ್ ಎಲ್ಲ ವಸ್ತುಗಳ ಖರೀದಿಗೆ ದಾಖಲೆಗಳಿವೆ ಎಂದು ಹೇಳಿಕೆ ನೀಡಿದ್ದಾರೆ ಎಂದು ಹೇಳಿದ್ದಕ್ಕೆ ಅವರು ಪ್ರತಿಕ್ರಿಯೆ ನೀಡಿದ್ದಾರೆ. ನಿಮ್ಮ ಬಳಿ ದಾಖಲೆ ಇದ್ದರೆ ಬಿಡುಗಡೆ ಮಾಡಿ ಎಂದು ಸವಾಲು ಹಾಕಿದ್ದಾರೆ. ಸರ್ಕಾರದ ಬಳಿ ಎಲ್ಲ ದಾಖಲೆ ಇದ್ದರೆ ಅದನ್ನು ಮುಚ್ಚಿಡುತ್ತಿರುವುದು ಏಕೆ?. ತಾವು ಬರೆದ ಪತ್ರಕ್ಕೆ ತಕ್ಷಣ ಉತ್ತರ ನೀಡಿ ಎಂದಿದ್ದಾರೆ.

Leave a Reply

Your email address will not be published. Required fields are marked *

You May Also Like

ಆಹಾರದ ಅವಶ್ಯಕತೆ

ಪ್ರತಿ ಜೀವಿಯ ಜೀವನಾಧಾರವೇ ಅದರ ಹೊಟ್ಟೆಯ ಹಸಿವು, ಆಹಾರ ಇಲ್ಲದೇ ಹೋದರೆ ಪ್ರಾಣ ಪಕ್ಷಿಯೇ ಹಾರಿಹೋಗುವುದಂತು ಗ್ಯಾರಂಟಿ ಎನ್ನುವದಂತು ದಿಟ್ಟ ಎನ್ನುವ ವಿಚಾರಗಳನ್ನು ತಮ್ಮ ಮುಂದೆ ಹಂಚಿಕೊಳ್ಳುತ್ತ, ಇಂದಿನ ದಿನಮಾನಗಳಲ್ಲಿ ಮನುಷ್ಯರಿಗೆ ಆಹಾರ ಅವಶ್ಯಕತೆ ಮಹತ್ವದ ಬಗ್ಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ 1945 ರಲ್ಲಿ ವಿಶ್ವಸಂಸ್ಥೆಯ ಕೃಷಿ ವಿಭಾಗದ ಸ್ಥಾಪನೆಯ ಸವಿ ನೆನಪಿಗಾಗಿ ಅ.16 ರ ಈ ದಿನವನ್ನು ಹಸಿವಿನ ವಿರುದ್ಧ ಹೋರಾಟಕ್ಕಾಗಿ ಆರಂಭಿಸಲಾಯಿತು. 1981 ರ ನಂತರ ಈ ದಿನವನ್ನು ವ್ಯಾಪಕವಾಗಿ ವಿಶ್ವ ಆಹಾರ ದಿನವನ್ನಾಗಿ ವಿಶ್ವಾದ್ಯಾಂತ ಆಚರಣೆ ಮಾಡುವ ಮೂಲಕ ಜಾರಿಗೆ ತರಲಾಯಿತು. ಅಂದರೆ ಅ.16 ರಂದು ವಿಶ್ವಾದ್ಯಾಂತ ವಿಶ್ವ ಆಹಾರ ದಿನವನ್ನಾಗಿ ನಾವೆಲ್ಲರೂ ಸೇರಿ ಆಚರಣೆ ಮಾಡುತ್ತಿದ್ದೇವೆ. ಆದಕಾರಣ ಈ ದಿನದ ನಿಮಿತ್ತ ಭಕ್ಷ್ಯ ಭೋಜನವನ್ನು ಸವಿದು, ಆಹಾರ ಸಂಸ್ಕೃತಿಯನ್ನು ಸಂಭ್ರಮದಿಂದ ನೆನಪಿಸಿ, ತಿಂದು ತೇಗಲು ಈ ದಿನವನ್ನು ಆಚರಿಸಲು ಕರೆ ಕೊಡಲಾಗಿದೆ ಎಂದು ಭಾವಿಸಿದ್ದರೆ. ಅದು ನೂರಕ್ಕೆ ನೂರರಷ್ಟು ತಪ್ಪು. ಜಾಗತಿಕ ಮಟ್ಟದಲ್ಲಿ ಆಹಾರದ ಕೊರತೆ ಕುರಿತು ಜಾಗೃತಿ, ಅಭಿಯಾನ ಜೊತೆಗೆ ಹಸಿವಿನಿಂದ ಸಾಯುವವರ ನೋವಿನ ವಿಚಾರಗಳನ್ನು ಜನಸಾಮಾನ್ಯರಿಗೆ ತಿಳಿಸುವ, ತಲುಪಿಸುವ ಏಕೈಕ ಉದ್ದೇಶದ ಜೊತೆಗೆ ಆಹಾರ ಸಮಸ್ಯೆ ಕುರಿತು ವ್ಯಾಪಕವಾಗಿ ಅರಿವು ಮೂಡಿಸುವ ನಿಟ್ಟಿನಲ್ಲಿ ಮತ್ತು ಪೌಷ್ಟಿಕ ಆಹಾರ ಮಹತ್ವದ ಬಗ್ಗೆ ಜನತೆಗೆ ಜನಜಾಗೃತಿ ಅಭಿಯಾನ, ಗೋಷ್ಠಿ, ವಿಚಾರ ಸಂಕೀರ್ಣ ಹಾಗೂ ಇನ್ನಿತರ ಕಾರ್ಯಕ್ರಮಗಳ ಮೂಲಕ ತಿಳಿ ಹೇಳಲು ಆಹಾರ ದಿನವನ್ನು ಆಚರಣೆ ಮಾಡಲಾಗುತ್ತಿದೆ.

ಜಕ್ಕಲಿಯಲ್ಲಿ ಹೀಗೊಂದು ವಿಶಿಷ್ಟ ಹೋಳಿ ಹುಣ್ಣಿಮೆ ಆಚರಣೆ

ವಸಂತ ಋತುವಿನ ಫಾಲ್ಗುಣ ಮಾಸದ ಶುಕ್ಲ ಪಕ್ಷದ ಹುಣ್ಣುಮೆ ದಿನ ಹೋಳಿ ಹಬ್ಬವನ್ನು ಆಚರಿಸಲಾಗುತ್ತದೆ. ನಮ್ಮ ಹಿಂದೂ ಧರ್ಮದ ಪ್ರಕಾರ ಹೋಳಿ ಒಂದು ಮಹತ್ವಪೂರ್ಣ ಮಹಾಪರ್ವ ಎಂದು ಭಾವಿಸಲಾಗುತ್ತದೆ. ಸಾಂಪ್ರದಾಯಿಕವಾಗಿ ಈ ಹಬ್ಬವನ್ನು ಎರಡು ದಿನಗಳ ಕಾಲ ಆಚರಿಸಲಾಗುತ್ತದೆ. ಮಾ.29 ಸೋಮವಾರ ಹೋಳಿ ಹಬ್ಬವನ್ನು ಹಾಗೂ ಕಾಮ ದಹನವನ್ನು ಮಾ.28 ಆಚರಿಸಲಾಗುತ್ತದೆ.

ಅಂದರ ಬಾಹರ ಆಡುತ್ತಿದ್ದ 6 ಜನ ಬಂದನ

ಲಕ್ಷ್ಮೇಶ್ವರ. ಲಕ್ಷ್ಮೇಶ್ವರ ಪಟ್ಟಣದಲ್ಲಿ ಕೊಡಿಯಲ್ಲಮ್ಮ ದೇವಸ್ಥಾನದ ಮುಂಬಾಗ, ಸಾರ್ವಜನಿಕ ಬಯಲು ಪ್ರದೇಶದಲ್ಲಿ ಇಸ್ಪೀಟ್ (ಅಂದರ ಬಾಹರ)…

ಮಾಜಿ ಭೂಗತ ದೊರೆ ಮುತ್ತಪ್ಪ ರೈ ನಿಧನ

ಭೂಗತ ಲೋಕದ ಮಾಜಿ ಡಾನ್ ಮುತ್ತಪ್ಪ ರೈ(68) ಇಂದು (ಶುಕ್ರವಾರ) ಬೆಳಿಗ್ಗೆ ನಿಧನರಾಗಿದ್ದಾರೆ. ಇಂದು ಸಂಜೆ 4 ಗಂಟೆಗೆ ರಾಮನಗರ ತಾಲೂಕಿನ ಬಿಡದಿಯಲ್ಲಿರುವ ಫಾರ್ಮ ಹೌಸ್ ನಲ್ಲಿ ಮುತ್ತಪ್ಪ ರೈ ಅವರ ಅಂತ್ಯಕ್ರಿಯೇ ನಡೆಯಲಿದೆ.