ಬೆಂಗಳೂರು: ಅಪಘಾತದಲ್ಲಿ ತಮಗೆ ಗಾಯವಾಗಿದೆ ಎಂದು ಆಸ್ಪತ್ರೆಗೆ ಆಗಮಿಸಿದ ಇಬ್ಬರು ನಮಗೆ ಮಹಿಳಾ ನರ್ಸ್ ಚಿಕಿತ್ಸೆ ನಿಡಬೇಕು ಎಂದು ಆಸ್ಪತ್ರೆಯ ಸಿಬ್ಬಂದಿಗಳ ಮೇಲೆ ಹಲ್ಲೆ ನಡೆಸಿದ್ದಾರೆ.

ಬೆಂಗಳೂರಿನ ಕಗ್ಗದಾಸಪುರದ ನಾಗಪ್ಪ ರೆಡ್ಡಿ ಲೇಔಟ್ ನಲ್ಲಿರುವ ಶ್ರೀ ಲಕ್ಷ್ಮಿ ಆಸ್ಪತ್ರೆಯಲ್ಲಿ ಈಚೆಗೆ ಘಟನೆ ನಡೆದಿದೆ ಎಂದು ಆಸ್ಪತ್ರೆಯ ಆಪರೇಷನ್ ಥಿಯೇಟರ್‌ನ ಉಸ್ತುವಾರಿ ವಹಿಸಿರುವ ಪ್ರಸಾದ್ ಅವರು ಈ ಬಗ್ಗೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ ಎಂದು ತಿಳಿದುಬಂದಿದೆ.

ಸAಜೆ ಹೊತ್ತಿಗೆ ಕಿರಣ್ ಕುಮಾರ್ ಮತ್ತು ಹೇಮಂತ್ ಎಂಬ ಇಬ್ಬರು ಯುವಕರು ಚಿಕಿತ್ಸೆಗೆಂದು ಆಸ್ಪತ್ರೆಗೆ ಆಗಮಿಸಿದಾಗ ಪುರುಷ ನರ್ಸ್ಗಳಿಂದ ಚಿಕಿತ್ಸೆ ಪಡೆಯಲು ನಿರಾಕರಿಸಿ, ಮಹಿಳೆ ನರ್ಸ್ ಚಿಕಿತ್ಸೆ ನೀಡಬೇಕು ಎಂದು ಉದ್ಧಟತನ ತೋರಿದ್ದಾರೆ ಎಂದು ತಿಳಿದು ಬಂದಿದೆ.

ಶುಶ್ರೂಷೆ ನೀಡಲು ಯತ್ನಿಸಿದ ಪುರುಷ ನರ್ಸ್ ಪ್ರಶಾಂತ್ ಮೇಲೆ ಹೇಮಂತ್ ಹಲ್ಲೆ ಮಾಡಿದ್ದಾರೆ. ಹೇಮಂತ್ ಕೂಡ ತನ್ನ ಸ್ನೇಹಿತರನ್ನು ದೂರವಾಣಿ ಮೂಲಕ ಸಂಪರ್ಕಿಸಿ ಆಸ್ಪತ್ರೆಗೆ ಬರಲು ಹೇಳಿದ್ದು, ಸಿಬ್ಬಂದಿ ತಮ್ಮ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಸುಳ್ಳು ಹೇಳಿದ್ದಾರೆ. ಕೆಲವೇ ನಿಮಿಷಗಳಲ್ಲಿ, ಇನ್ನಿಬ್ಬರು ಬಂದು ಸಿಬ್ಬಂದಿಯೊAದಿಗೆ ಜಗಳವಾಡಿದ್ದರು.

ಬಿಲ್ಲಿಂಗ್ ಕೌಂಟರ್‌ನ ಸಿಬ್ಬಂದಿ ಮಧ್ಯಪ್ರವೇಶಿಸಿದಾಗ, ದುಷ್ಕರ್ಮಿಗಳು ಅವರಿಗೆ ಭೀಕರ ಪರಿಣಾಮದ ಬಗ್ಗೆ ಬೆದರಿಕೆ ಹಾಕಿ ಆಸ್ಪತ್ರೆಯಿಂದ ಹೊರಹೋಗಿದ್ದಾರೆ. ಬೈಯಪ್ಪನಹಳ್ಳಿ ಪೋಲೀಸರು ಈ ಸಂಬAಧ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

Leave a Reply

Your email address will not be published. Required fields are marked *

You May Also Like

ಗಜೇಂದ್ರಗಡದಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ ಅಕ್ಕಿ ವಶಕ್ಕೆ

ಅಕ್ರಮವಾಗಿ ಸಾಗಿಸುತ್ತಿದ್ದ ಅನ್ನ ಭಾಗ್ಯ ಅಕ್ಕಿ ವಶಕ್ಕೆ ಪಡೆದ ಘಟನೆ ಗದಗ ಜಿಲ್ಲೆಯ ಗಜೇಂದ್ರಗಡ ಪಟ್ಟಣದಲ್ಲಿ ನಡೆದಿದೆ.

ಬಾಗಲಕೋಟೆ ಜಿಲ್ಲೆಯಲ್ಲಿಂದು 18 ಕೊರೊನಾ ಪಾಸಿಟಿವ್!

ಜಿಲ್ಲೆಯಲ್ಲಿಂದು ಮತ್ತೆ 18 ಕೊರೊನಾ ಪಾಸಿಟಿವ್ ಪ್ರಕರಣ ದೃಡಪಟ್ಟಿದ್ದು ಸೋಂಕಿತರ ಸಂಖ್ಯೆ 155ಕ್ಕೆ ಏರಿಕೆಯಾಗಿದೆ.

ದೇವಿ ಪುರಾಣಕ್ಕೆ ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಮನವಿ

ಕೋವಿಡ್-19 ಹಿನ್ನಲೆಯಲ್ಲಿ ದೇವಿಯ ಪುರಾಣ ಸರಳವಾಗಿ ಆರಚಣೆ ಮಾಡಲಾಗುತ್ತಿದೆ. ಪುರಾಣಕ್ಕೆ ಆಗಮಿಸುವ ಜನರು ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕೆಂದು ಗಚ್ಚಿನಮಠದ ವರರುದ್ರಮುನಿ ಶಿವಚಾರ್ಯ ಸ್ವಾಮೀಜಿ ಹೇಳಿದರು.

ಗದಗ ಜಿಲ್ಲೆಯಲ್ಲಿಂದು 7 ಕೊರೊನಾ ಪಾಸಿಟಿವ್!

ಗದಗ: ಜಿಲ್ಲೆಯಲ್ಲಿಂದು 7 ಕೊರೊನಾ ಪಾಸಿಟಿವ್ ಪ್ರಕರಣ ಪತ್ತೆಯಾಗಿದ್ದು ಈ ಮೂಲಕ ಸೋಂಕಿತರ ಸಂಖ್ಯೆ 210…