ಲಂಡನ್: ಈಗಾಗಲೇ ದೇಶದಲ್ಲಿ ಕೊರೊನಾ ಒಂದು ಹಂತಕ್ಕೆ ಆರ್ಭಟ ಪ್ರದರ್ಶಿಸಿತ್ತು. ಇನ್ನು ರಾಜ್ಯದ ಪಾಲಿಗೆ ಸೋಂಕಿತರ ಸಂಖ್ಯೆಯಲ್ಲಿ ಕೊಂಚ ಇಳಿಮುಖ ಕಾಣುತ್ತಿದೆ. ಆದರೆ
ಕೋವಿಡ್-19 ನಿಂದ ಆಸ್ಪತ್ರೆಗೆ ದಾಖಲಾಗಿರುವ ರೋಗಿಗಳು ಎಷ್ಟೇ ಅನಾರೋಗ್ಯಕ್ಕೆ ತುತ್ತಾಗಿದ್ದರೂ ಅವರಿಗೆ ಗಿಲೀಡ್‌ನ ರೆಮ್ಡೆಸಿವಿರ್ ಔಷಧ ನೀಡುವುದನ್ನು ಶಿಫಾರಸು ಮಾಡುವುದಿಲ್ಲ ಎಂದು ವಿಶ್ವ ಆರೋಗ್ಯ ಸಂಸ್ಥೆ ತಿಳಿಸಿದೆ.

ಆಸ್ಪತ್ರೆಗೆ ದಾಖಲಾದ 7000ಕ್ಕೂ ಅಧಿಕ ರೋಗಿಗಳ ಮೇಲೆ ನಡೆಸಿದ ನಾಲ್ಕು ಅಂತಾರಾಷ್ಟ್ರೀಯ ಪ್ರಯೋಗಗಳಿಂದ ಪಡೆದ ಡೇಟಾಗಳನ್ನು ಪರಾಮರ್ಶನೆ ನಡೆಸಿ ಈ ಶಿಫಾರಸು ನೀಡಿದೆ.

ಕೋವಿಡ್ 19 ವಿರುದ್ಧದ ಚಿಕಿತ್ಸೆಯಲ್ಲಿ ರೆಮ್ಡೆಸಿವಿರ್ ಪರಿಣಾಮಕಾರಿ ಔಷಧಿಯಾಗಲಿದೆ ಎಂದು ಅಂದಾಜಿಸಲಾಗಿತ್ತು. ಆದರೆ ಡಬ್ಲೂಎಚ್ಓ ಹೇಳಿಕೆಯಿಂದ ಔಷಧಿಗೆ ಕೊಂಚ ಹಿನ್ನಡೆಯಾದಂತಾಗಿದೆ. ಈ ಔಷಧಿ ಬಗ್ಗೆ ಹೇಳುವ ಯಾವುದಕ್ಕೂ ಪುರಾವೆ ಸಿಕ್ಕಿಲ್ಲ ಎಂದು ಡಬ್ಲೂಎಚ್ಓ ಸ್ಪಷ್ಟಪಡಿಸಿದೆ.

Leave a Reply

Your email address will not be published. Required fields are marked *

You May Also Like

ಗದಗ ಜಿಲ್ಲಾ ಪಂಚಾಯತ ಸಿಇಓ ಭರತ್ ಎಸ್ ವರ್ಗಾವಣೆ, ಮುಂದಿನ ಆದೇಶದವರೆಗು ಕಾರ್ಯನಿರ್ವಹಿಸಲು ಡಾ. ಸುಶೀಲಾ.ಬಿ ರವರಿಗೆ ಸರ್ಕಾರದ ಆದೇಶ

ಉತ್ತರಪ್ರಭಗದಗ: ಗದಗ ಜಿಲ್ಲಾ ಪಂಚಾಯತ್ತಿನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಭರತ್ ಎಸ್ ಅವರನ್ನ ದಿ: 06.04.2022…

ಲಕ್ಷ್ಮೇಶ್ವರ ತಾಲೂಕಿನಾದ್ಯಂತ ಜವಳು ಮಣ್ಣಿಗೆ ಮರಳು ರೂಪ ಕೊಟ್ಟು ಅಕ್ರಮ!

ಅಕ್ರಮ ಮರಳು ಗಣಿಗಾರಿಕೆ ನಡೆಯುತ್ತಿರುವುದು ಅಧಿಕಾರಿಗಳಿಗೆ ಗೊತ್ತಿದೆಯಂತೆ, ಆದರೆ ಸ್ಥಳಕ್ಕೆ ಭೇಟಿ ನೀಡಿ ಕ್ರಮ ಕೈಗೊಳ್ಳುತ್ತಾರಂತೆ. ಇದು ಕೇವಲ ಒಂದು ವಿಚಾರದ್ದಲ್ಲ.

ಮೆದುಳು ಜ್ವರ ಲಸಿಕಾಕರಣದ ಅಭಿಯಾನ ಯಶಸ್ವಿಗೊಳಿಸಿ:ಜಿಲ್ಲಾಧಿಕಾರಿ ವೈಶಾಲಿ

ಉತ್ತರಪ್ರಭ ಸುದ್ದಿ ಗದಗ: ಜಿಲ್ಲೆಯಾದ್ಯಂತ ಡಿಸೆಂಬರ್ 5 ರಿಂದ 24 ರವರೆಗೆ ಮೆದುಳು ಜ್ವರ ಲಸಿಕಾಕರಣವನ್ನು…

ಕಸಾಪ ವತಿಯಿಂದ ಕವಿ-ಬರಹಗಾರರ ಪ್ರೋತ್ಸಾಹ ವೇದಿಕೆ

ತಾಲ್ಲೂಕ ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ನೂತನ ತಾಲ್ಲೂಕಿಗೆ ಒಳಪಡುವ ಕವಿಗಳನ್ನು ಪ್ರೋತ್ಸಾಹಿಸುವ ದೃಷ್ಟಿಯಿಂದ, ಬರಹಗಾರರ ಸೃಜನಶೀಲತೆಯನ್ನು ಹೆಚ್ಚಿಸಲು ತಾಲ್ಲೂಕ ಮಟ್ಟದ ಕವನ ಸಂಕಲನವನ್ನು ಪ್ರಕಟಿಸಲು ನಿರ್ಧರಿಸಲಾಗಿದೆ ಎಂದು ಕಸಾಪ ತಾಲ್ಲೂಕು ಅಧ್ಯಕ್ಷ ಘನಮಠದಯ್ಯಸ್ವಾಮಿ ಸಾಲಿಮಠ ತಿಳಿಸಿದ್ದಾರೆ.