ಉತ್ತರಪ್ರಭ ಸುದ್ದಿ

ಗದಗ: ಜಿಲ್ಲೆಯಾದ್ಯಂತ ಡಿಸೆಂಬರ್ 5 ರಿಂದ 24 ರವರೆಗೆ ಮೆದುಳು ಜ್ವರ ಲಸಿಕಾಕರಣವನ್ನು ಹಮ್ಮಿಕೊಳ್ಳಲಾಗಿದ್ದು, ಲಸಿಕಾಕರಣದ ಅಭಿಯಾನವನ್ನು ಯಶಸ್ವಿಗೊಳಿಸುವಂತೆ ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್ ತಿಳಿಸಿದರು.

ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಶುಕ್ರವಾರ ನಡೆದ ಜಿಲ್ಲಾ ಮಟ್ಟದ ಟಾಸ್ಕ್ ಫೋರ್ಸ ಸಮಿತಿ ಸಭೆಯಲ್ಲಿ ಮೆದುಳು ಜ್ವರ ಲಸಿಕಾಕರಣ ಅಭಿಯಾನ ಕಾರ್ಯಕ್ರಮ ಪೂರ್ವಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. 1 ರಿಂದ 15 ವರ್ಷದ ಅರ್ಹ ಯಾವುದೇ ಮಕ್ಕಳು ಮೆದುಳು ಜ್ವರ ಲಸಿಕೆಯಿಂದ ವಂಚಿತರಾಗಬಾರದು. ತಾಲೂಕು ಮಟ್ಟದಲ್ಲಿಯೂ ಸಹ ತಹಶೀಲ್ದಾರರ ಅಧ್ಯಕ್ಷತೆಯಲ್ಲಿ ಈ ಕುರಿತು ಸಭೆಯನ್ನು ಜರುಗಿಸಬೇಕು ಎಂದು ನಿರ್ದೇಶನ ನೀಡಿದರು.

ಬಿ ಮೆದುಳು ಜ್ವರ ಲಸಿಕಾಕರಣದ ಕುರಿತು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಮತ್ತು ಸಾರ್ವಜನಿಕ ಶಿಕ್ಷಣ ಇಲಾಖೆ, ಆರೋಗ್ಯ ಇಲಾಖೆ, ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರಿಗೆ ಸೂಕ್ತ ತರಬೇತಿ ನೀಡಬೇಕು ಎಂದು ಸೂಚಿಸಿದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳಾದ ಡಾ. ಜಗದೀಶ ನುಚ್ಚಿನ ಮಾತನಾಡಿ ಮೆದುಳು ಜ್ವರ ತಡೆಗೆ ನೀಡುವ ಲಸಿಕೆಯನ್ನು ಆಯಾ ಗ್ರಾಮದ ಅಂಗನವಾಡಿ, ಶಾಲೆ ಅಥವಾ ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ಮಾತ್ರವೇ ಲಸಿಕೆ ನೀಡಲಾಗುತ್ತದೆ. ಈ ಲಸಿಕಾಕರಣದಲ್ಲಿ ಮನೆ ಮನೆ ಭೇಟಿ ಇರುವುದಿಲ್ಲ.ಮೆದುಳುಜ್ವರಕ್ಕೆ ಲಸಿಕೆಯನ್ನು ಕಳೆದ 16 ವರ್ಷಗಳಿಂದ ದೇಶದ ವಿವಿಧ ರಾಜ್ಯಗಳಲ್ಲಿ ಬಳಕೆ ಮಾಡಲಾಗುತ್ತಿದೆ. ಲಸಿಕೆ ನೀಡುವ ಮೊದಲು ಮಕ್ಕಳು ಉಪಹಾರ ಇಲ್ಲವೇ ಊಟ ಮಾಡಿರಬೇಕು. ಈ ಬಗ್ಗೆ ಆಯಾ ಶಾಲೆಗಳ ಶಿಕ್ಷಕರು ಹಾಗೂ ಆರೋಗ್ಯ ಸಿಬ್ಬಂದಿಗಳು ಪರಿಶೀಲಿಸಿ ಲಸಿಕಾಕರಣಗೊಳಿಸಬೇಕು ಎಂದ ಅವರು ಮೆದುಳು ಜ್ವರ ಲಸಿಕಾಕರಣ ಅಭಿಯಾನದ ಉದ್ದೇಶವನ್ನು ವಿವರಿಸಿದರು.

ವಿಶ್ವ ಆರೋಗ್ಯ ಸಂಸ್ಥೆಯ ಪ್ರತಿನಿಧಿ (ಎಸ್.ಎಮ್.ಓ.) ಡಾ.ಮುಕುಂದ ಗಲಗಲಿ ಇವರು ಮಾತನಾಡಿ ಜಿಲ್ಲಾದ್ಯಂತ ಡಿಸೆಂಬರ್ 05 ರಿಂದ 24 ರ ವರೆಗೆ ಮೆದುಳು ಜ್ವರ ಲಸಿಕಾಕರಣ ಅಭಿಯಾನ ಹಮ್ಮಿಕೊಳ್ಳಲಾಗಿದೆ. 1 ರಿಂದ 15 ವರ್ಷದ ಎಲ್ಲ ಮಕ್ಕಳಿಗೆ ಈ ಲಸಿಕೆಯನ್ನು ನೀಡಲಾಗುತ್ತದೆ. ಜಿಲ್ಲೆಯಲ್ಲಿ ಒಟ್ಟು 297691 ಮಕ್ಕಳು ಲಸಿಕೆಗೆ ಒಳಪಡುತ್ತಾರೆ. ಲಸಿಕಾಕರಣದ ಮೂಲ ಉದ್ದೇಶವು ಮೆದುಳುಜ್ವರ ತಡೆಗಟ್ಟುವುದಾಗಿದ್ದು ಈ ಕುರಿತು ಅರಿವು ಮೂಡಿಸಲು ಶಾಲೆಯಲ್ಲಿ ಪಾಲಕರ ಸಭೆ ಕರೆದು ತಮ್ಮ ಮಕ್ಕಳಿಗೆ ತಪ್ಪದೇ ಲಸಿಕೆ ಹಾಕಿಸಿಕೊಳ್ಳಲು ಮನವರಿಕೆ ಮಾಡಬೇಕು ಎಂದರು.

ಜಿಲ್ಲಾ ಆರ್.ಸಿ.ಎಚ್. ಅಧಿಕಾರಿ ಡಾ.ಬಿ.ಎಂ.ಗೊಜನೂರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ಪಿ.ವೈ.ಶೆಟ್ಟೆಪ್ಪನವರ, ಆರೋಗ್ಯ ಇಲಾಖೆಯ ವಿವಿಧ ಹಂತದ ಅಧಿಕಾರಿಗಳು, ಜಿಲ್ಲೆಯ ಆಯಾ ತಾಲೂಕುಗಳ ಆರೋಗ್ಯಾಧಿಕಾರಿಗಳು, ಕ್ಷೇತ್ರ ಶಿಕ್ಷಣಾಧಿಕಾರಿಗಳು, ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ಹಾಜರಿದ್ದರು.

ಮೆದುಳು ಜ್ವರ ಲಸಿಕಾಕರಣದ ಕುರಿತು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಮತ್ತು ಸಾರ್ವಜನಿಕ ಶಿಕ್ಷಣ ಇಲಾಖೆ, ಆರೋಗ್ಯ ಇಲಾಖೆ, ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರಿಗೆ ಸೂಕ್ತ ತರಬೇತಿ ನೀಡಬೇಕು, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಸುಶೀಲಾ

Leave a Reply

Your email address will not be published. Required fields are marked *

You May Also Like

ಗದಗ ಜಿಲ್ಲೆ ಸದ್ಯಕ್ಕೆ ಲಾಕ್ ಡೌನ್ ಇಲ್ಲ: ಡಿಸಿ ಸುಂದರೇಶ ಬಾಬು

ಜಿಲ್ಲೆಯಲ್ಲಿ ಒಂದು ಹಂತಕ್ಕೆ ಕೋರೊನಾ ಸೋಂಕು ಹರಡುವಿಕೆ ನಿಯಂತ್ರಣದಲ್ಲಿದ್ದು ತಕ್ಷಣಕ್ಕೆ ಯಾವುದೇ ಬಗೆಯ ಲಾಕ್ ಡೌನ್ ಜಾರಿ ಮಾಡುತ್ತಿಲ್ಲ ಎಂದು ಗದಗ ಜಿಲ್ಲಾಧಿಕಾರಿ ಸುಂದರೇಶ ಬಾಬು ತಿಳಿಸಿದ್ದಾರೆ.

ಹೆಚ್.ಕೆ.ವಿವೇಕಾನಂದ ಆತಂಕ

ಜಗತ್ತು ಬೆಳೆದಂತೆ ಸಂಬಂಧಗಳು ವ್ಯಾಪಾರೀಕರಣವಾಗಿ, ಮಾನವೀಯ ಮೌಲ್ಯಗಳೇ ಕುಸಿಯುತ್ತಿವೆ. ಹೀಗಾಗಿ ಸಮಾಜ ವಿನಾಶದೆಡೆಗೆ ಸಾಗುತ್ತಿದೆ ಎಂದು ಪ್ರಗತಿಪರ ಚಿಂತಕ ಹೆಚ್.ಕೆ.ವಿವೇಕಾನಂದ ಹೇಳಿದರು.

ಕನ್ನಡ ನಾಡು ನುಡಿಗೆ ಜಕ್ಕಲಿ ಗ್ರಾಮದ ಕೊಡುಗೆ ಅಪಾರ :ವಿವೇಕಾನಂದಗೌಡ ಪಾಟೀಲ

ಉತ್ತರಪ್ರಭ ಸುದ್ದಿ ನರೆಗಲ್ಲ: ಕನ್ನಡ ನಾಡು ನುಡಿಗೆ ಗದಗ ಜಿಲ್ಲೆಯ ಜಕ್ಕಲಿ ಗ್ರಾಮ ಅಪಾರವಾದ ಕೊಡುಗೆ…