ಕೊರೊನಾ ಸೋಂಕಿತರಿಗೆ ಈ ಔಷಧಿ ನೀಡಬಾರದಂತೆ

ಲಂಡನ್: ಈಗಾಗಲೇ ದೇಶದಲ್ಲಿ ಕೊರೊನಾ ಒಂದು ಹಂತಕ್ಕೆ ಆರ್ಭಟ ಪ್ರದರ್ಶಿಸಿತ್ತು. ಇನ್ನು ರಾಜ್ಯದ ಪಾಲಿಗೆ ಸೋಂಕಿತರ ಸಂಖ್ಯೆಯಲ್ಲಿ ಕೊಂಚ ಇಳಿಮುಖ ಕಾಣುತ್ತಿದೆ. ಆದರೆ
ಕೋವಿಡ್-19 ನಿಂದ ಆಸ್ಪತ್ರೆಗೆ ದಾಖಲಾಗಿರುವ ರೋಗಿಗಳು ಎಷ್ಟೇ ಅನಾರೋಗ್ಯಕ್ಕೆ ತುತ್ತಾಗಿದ್ದರೂ ಅವರಿಗೆ ಗಿಲೀಡ್‌ನ ರೆಮ್ಡೆಸಿವಿರ್ ಔಷಧ ನೀಡುವುದನ್ನು ಶಿಫಾರಸು ಮಾಡುವುದಿಲ್ಲ ಎಂದು ವಿಶ್ವ ಆರೋಗ್ಯ ಸಂಸ್ಥೆ ತಿಳಿಸಿದೆ.

ಆಸ್ಪತ್ರೆಗೆ ದಾಖಲಾದ 7000ಕ್ಕೂ ಅಧಿಕ ರೋಗಿಗಳ ಮೇಲೆ ನಡೆಸಿದ ನಾಲ್ಕು ಅಂತಾರಾಷ್ಟ್ರೀಯ ಪ್ರಯೋಗಗಳಿಂದ ಪಡೆದ ಡೇಟಾಗಳನ್ನು ಪರಾಮರ್ಶನೆ ನಡೆಸಿ ಈ ಶಿಫಾರಸು ನೀಡಿದೆ.

ಕೋವಿಡ್ 19 ವಿರುದ್ಧದ ಚಿಕಿತ್ಸೆಯಲ್ಲಿ ರೆಮ್ಡೆಸಿವಿರ್ ಪರಿಣಾಮಕಾರಿ ಔಷಧಿಯಾಗಲಿದೆ ಎಂದು ಅಂದಾಜಿಸಲಾಗಿತ್ತು. ಆದರೆ ಡಬ್ಲೂಎಚ್ಓ ಹೇಳಿಕೆಯಿಂದ ಔಷಧಿಗೆ ಕೊಂಚ ಹಿನ್ನಡೆಯಾದಂತಾಗಿದೆ. ಈ ಔಷಧಿ ಬಗ್ಗೆ ಹೇಳುವ ಯಾವುದಕ್ಕೂ ಪುರಾವೆ ಸಿಕ್ಕಿಲ್ಲ ಎಂದು ಡಬ್ಲೂಎಚ್ಓ ಸ್ಪಷ್ಟಪಡಿಸಿದೆ.

Exit mobile version