ಲಕ್ಷ್ಮೇಶ್ವರ: ಬೆಳಗಾವಿ ಜಿಲ್ಲೆ ಪೀರಣವಾಡಿ ಗ್ರಾಮದಲ್ಲಿ ಕ್ರಾಂತಿ ವೀರ ಸಂಗೋಳ್ಳಿ ರಾಯಣ್ಣನ ಮೂರ್ತಿಗೆ ಅವಮಾನ ಮಾಡಿರುವುದನ್ನು ಖಂಡಿಸಿ ಅಖಿಲ ಕರ್ನಾಟಕ ಸಂಗೋಳ್ಳಿ ರಾಯಣ್ಣ ಯುವಶಕ್ತಿ ವೇದಿಕೆ ಲಕ್ಷ್ಮೇಶ್ವರ ತಾಲೂಕ ಘಟಕದ ವತಿಯಿಂದ ತಹಶಿಲ್ದಾರರಿಗೆ ಮನವಿ ಸಲ್ಲಿಸಲಾಯಿತು.

ಈ ವೇಳೆ ತಾಲೂಕು ಅಧ್ಯಕ್ಷ ಸುರೇಶ ಹಟ್ಟಿ ಮಾತನಾಡಿ, ಬೆಳಗಾವಿ ಜಿಲ್ಲೆ ಪೀರಣವಾಡಿ ಗ್ರಾಮದಲ್ಲಿ ಪ್ರಥಮ ಸ್ವಾತಂತ್ರ್ಯ ಸೇನಾನಿ ಅಪ್ಪಟ ದೇಶ ಪ್ರೇಮಿ, ಸ್ವಾತಂತ್ರ್ಯ ಹೋರಾಟಗಾರ ಕ್ರಾಂತಿವೀರ ಸಂಗೋಳ್ಳಿ ರಾಯಣ್ಣನ ಮೂರ್ತಿಗೆ ಕೆಲ ದುಷ್ಕರ್ಮಿಗಳು ಉದ್ದೇಶ ಪೂರ್ವಕವಾಗಿ ಅವಮಾನಿಸಿ ಭಾವಚಿತ್ರ ತೆಗೆದು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟು ಸಮುದಾಯಗಳ ನಡುವೆ ಗೊಂದಲ ಸೃಷ್ಠಿಸಿದ್ದಾರೆ. ಹೀಗಾಗಿ ಮೂರ್ತಿಗೆ ಅವಮಾನ ಮಾಡಿದ ವ್ಯಕ್ತಿಗಳ ಮೇಲೆ ಸೂಕ್ತವಾದ ಕಾನೂನು ಕ್ರಮ ಜರುಗಿಸಬೇಕು. ಇಲ್ಲವಾದಲ್ಲಿ ಮುಂದಿನ ದಿನಮಾನಗಳಲ್ಲಿ ಉಗ್ರವಾದ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರು.

ಈ ಸಂದರ್ಭದಲ್ಲಿ ನೀಲಪ್ಪ ಪಡಗೇರಿ, ಮಂಜು ಮುಳಗುಂದ, ಗೋಳಪ್ಪ ಪೂಜಾರ, ಮಂಜುನಾಥ ಕಲ್ಲೂರ, ಸಿದ್ದಪ್ಪ ಕರಿಗಾರ, ಮಾಂತೇಶ ಆನಂದ ಗಡದವರ, ಗಂಗಾಧರ ಹಳ್ಳಿಕೇರಿ ಸೇರಿದಂತೆ ಅನೇಕರು ಇದ್ದರು.

Leave a Reply

Your email address will not be published. Required fields are marked *

You May Also Like

ಗೃಹ ಸಚಿವರ ತವರಲ್ಲಿ ಐಸ್ ಲಗಾ ಐಸಾ..! ಇನ್ನೂ ಸ್ವಲ್ಪ ಐಸಾ..!

ಐಸ್ ಲಗಾ ಐಸಾ..! ಇನ್ನೂ ಸ್ವಲ್ಪ ಐಸಾ..! ತಳ್ಳದೆ ಸ್ಟಾರ್ಟ್ ಆಗ್ತಿಲ್ಲಾ ಕರೊನಾ ವಾರಿಯರ್ಸ್ ರಥ..…

ಬಸವ ವಸತಿ ಯೋಜನೆ ಮನೆ ಮಂಜೂರು: ಪಿಡಿಒ ತಿಮ್ಮಣ್ಣ ಭೋವಿ

ವರದಿ: ವಿಠಲ ಕೆಳೂತ್ ಮಸ್ಕಿ: ಬಸವ ವಸತಿ ಯೋಜನೆ‌ ಹಾಗೂ ಡಾ.‌ಬಿ.ಆರ್ ಅಂಬೇಡ್ಕರ್ ಯೋಜನೆಯಡಿಯಲ್ಲಿ 30…

ಲಿಂ.ತೋಂಟದ ಸಿದ್ದಲಿಂಗ ಶ್ರೀ ಅಪರೂಪದ ಸಂತ ಇಂಥ ಪೂಜ್ಯರನ್ನು ನಾನೆಂದೂ ಕಾಣೆನು

ಉತ್ತರಪ್ರಭ ಸುದ್ದಿ ಗದಗ: ಅವರೊಬ್ಬ ಅಪ್ಪಟ ಕನ್ನಡಿಗರು. ಕರುನಾಡು,ದೇಶ ಕಂಡ ಅಪರೂಪದ ಮಹಾನ ಕಾವಿಧಾರಿ ಸಂತರು.…

ನಿಡಗುಂದಿಯಲ್ಲಿ ಬಿ.ಇಡಿ.ಪ್ರಶಿಕ್ಷಣಾಥಿ೯ಗಳಿಗೆ ಸ್ವಾಗತ- ವಿದ್ಯಾರ್ಥಿ ಒಕ್ಕೂಟ ಉದ್ಘಾಟನೆ ಶಿಕ್ಷಣದಿಂದ ಉತ್ತಮ ವ್ಯಕ್ತಿತ್ವ ರೂಪ

ನಿಡಗುಂದಿ: ಶಿಕ್ಷಣದ ಉದ್ದೇಶ ಒಳ್ಳೇಯ ಸಂಸ್ಕಾರಯುತ ವ್ಯಕ್ತಿತ್ವ ರೂಪಿಸುವುದು. ತರಗತಿ ಪಠ್ಯಕ್ರಮವನ್ನು ಅಭ್ಯಸಿಸುವದರ ಜೊತೆಗೆ ಸಾಮಾಜಿಕ…