ಬೆಂಗಳೂರು : ಮಾಜಿ ಮೇಯರ್ ಸಂಪತ್ ರಾಜ್ ರನ್ನು ಪಕ್ಷದಿಂದ ಉಚ್ಛಾಟಿಸಬೇಕು ಎಂದು ಶಾಸಕ ಅಖಂಡ ಶ್ರೀನಿವಾಸ ಮೂರ್ತಿ ಮನವಿ ಮಾಡಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಪರಾಧಿ ಎಷ್ಟೇ ದೊಡ್ಡ ಸ್ಥಾನದಲ್ಲಿದ್ದರೂ ಅವರು ಅಪರಾಧಿನೆ. ಅವರು ಯಾರೇ ಆಗಿದ್ದರೂ ಶಿಕ್ಷೆ ನೀಡಬೇಕು. ನಾನು, ನನ್ನ ರಾಜಕೀಯ ಜೀವನದಲ್ಲಿ ಯಾರೊಂದಿಗೂ ಇದುವರೆಗೂ ದ್ವೇಷದ ರಾಜಕಾರಣ ಮಾಡಿಲ್ಲ. ನಾನು ಕೇವಲ ಶಾಸಕನೆಂದು ಭಾವಿಸಿ ಕೆಲಸ ಮಾಡಿಲ್ಲ. ಜನರ ಸೇವಕನಾಗಿ ಕೆಲಸ ಮಾಡಿದ್ದೇನೆ ಎಂದು ಹೇಳಿದ್ದಾರೆ.

ನಾನು, ಕಾರ್ಪೊರೇಟರ್ ಗಳೊಂದಿಗೆ ಚೆನ್ನಾಗಿಯೇ ಇದ್ದೆ. ನನ್ನನ್ನು ಹತ್ಯೆ ಮಾಡುವಂತಹ ಯಾವ ಕೆಲಸಗಳನ್ನೂ ನಾನು ಮಾಡಿಲ್ಲ. ನಾನು ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಹಾಗೂ ಜಮೀರ್ ಬಳಿ ಹೋಗಿ ಒತ್ತಾಯ ಮಾಡುತ್ತೇನೆ. ನನ್ನ ಪ್ರಾಣ ತೆಗಿಯಲು ಮುಂದಾಗಿದ್ದವರನ್ನು ಪಕ್ಷದಿಂದ ಉಚ್ಛಾಟಿಸಬೇಕು ಎಂದು ಆಗ್ರಹಿಸಿದ್ದಾರೆ.

ನಾನು ಪಕ್ಷ ಸೇರುವ ಸಂದರ್ಭದಲ್ಲಿಯೂ ಇವರು ಪ್ರತಿಭಟನೆ ಮಾಡಿದ್ದರು. ಆದರೆ, ಇವರು ಹೀಗೆ ಮಾಡುತ್ತಾರೆ ಎಂಬುವುದು ನನಗೆ ಗೊತ್ತಿಲ್ಲ. ಇಂತಹ ವ್ಯಕ್ತಿಗಳಿಂದ ಪಕ್ಷಕ್ಕೆ ಕೆಟ್ಟ ಹೆಸರು ಬರುತ್ತದೆ. ಹೀಗಾಗಿ ಇಂತಹ ವ್ಯಕ್ತಿಗಳು ಪಕ್ಷದಲ್ಲಿ ಇರಬಾರದು ಎಂದು ಮನವಿ ಮಾಡಿದ್ದಾರೆ.

Leave a Reply

Your email address will not be published. Required fields are marked *

You May Also Like

ಮದ್ಯ ಮಾರಾಟ ನಿಷೇಧಕ್ಕೆ ಗೋರ್ ಸೇನಾ ಒತ್ತಾಯ

ಮದ್ಯೆ ಮಾರಾಟ ಸಂಪೂರ್ಣವಾಗಿ ನಿಶೇಧಿಸುವಂತೆ ಒತ್ತಾಯಿಸಿ ಗೋರ್ ಸೇನಾ ಸಂಘಟನೆಯಿಂದ ತಹಶೀಲ್ದಾರರಿಗೆ ಮನವಿ ಸಲ್ಲಿಸಲಾಯಿತು.

ಉದ್ಧವ್ ಠಾಕ್ರೆ ಮನದಲ್ಲಿ ಮೂಡಿದ ನಿರಾಳ!

ಕೇಂದ್ರ ಚುನಾವಣಾ ಆಯೋಗವು ಮೇ. 27ರ ಒಳಗೆ ಮಹಾರಾಷ್ಟ್ರದ ವಿಧಾನ ಪರಿಷತ್ತಿಗೆ ಚುನಾವಣೆ ನಡೆಸಲು ಅನುಮತಿ ನೀಡಿದ್ದು, ಸಿಎಂ ಉದ್ದವ್ ಠಾಕ್ರೆಗೆ ಸಂತಸ ತಂದಿದೆ.

ಕ್ರೇಜಿಸ್ಟಾರ್ ರವಿಚಂದ್ರನ್‌ಗೆ 60ನೆ ಹುಟ್ಟುಹಬ್ಬದ ಸಂಭ್ರಮ

ಬೆಂಗಳೂರು: ಚಿತ್ರರಂಗದ ಬಣ್ಣದ ಲೋಕದಲ್ಲೇ ಕನಸು ಕಟ್ಟಿಕೊಂಡ ಕನಸುಗಾರ ವಿ.ರವಿಚಂದ್ರನ್ ಅವರಿಗೆ ಇಂದು 60 ನೆ ವರ್ಷದ ಹುಟ್ಟುಹಬ್ಬದ ಸಂಭ್ರಮ. ತಮ್ಮ ನೆಚ್ಚಿನ ನಟನ ಷಷ್ಠಿ ಪೂರ್ತಿಯನ್ನು ಬಹಳ ವಿಜೃಂಭಣೆಯಿಂದ ಆಚರಿಸಬೇಕು ಎಂದು ರವಿಚಂದ್ರನ್ ಅಭಿಮಾನಿಗಳು ಕನಸು ಕಟ್ಟಿಕೊಂಡಿದ್ದರಾದರೂ ಅವರ ಕನಸಿಗೆ ಕೊರೊನಾ ಮಹಾಮಾರಿ ತಣ್ಣಿರೆರಚಿರುವುದರಿಂದ ತಾವು ಇದ್ದಲ್ಲಿಯೇ ಸರಳವಾಗಿ ಆಚರಿಸಿದ್ದಾರೆ.

ಮಣಿಪುರ ಬಿಜೆಪಿ ಸರ್ಕಾರಕ್ಕೆ ಸಂಕಷ್ಟ..!

ಇಂಫಾಲ: ಮಣಿಪುರದಲ್ಲಿ ಆಡಳಿತಾರೂಢ ಬಿಜೆಪಿಯ ಮೂವರು ಶಾಸಕರು ಮತ್ತು ಎನ್.ಪಿ.ಪಿ.ಯ ಒಬ್ಬ ಶಾಸಕ ರಾಜೀನಾಮೆ ನೀಡಿದ್ದಾರೆ.…