ಗದಗ: ಶಾಂತಿ, ಕೋಮು ಸೌಹಾರ್ಧತೆಗೆ ಜಿಲ್ಲೆ ಹೆಸರುವಾಸಿಯಾಗಿದೆ. ಇಂತಹ ಸೌಹಾರ್ಧ ತಾಣದಲ್ಲಿ ದೀಪಾವಳಿ ಹಬ್ಬವನ್ನು ಭಾವೈಕ್ಯತೆಯಿಂದ ಆಚರಿಸೋಣ. ಹೀಗಾಗಿ ಚರ್ಚ್, ದರ್ಗಾ ಮಸೀದಿಗಳಲ್ಲಿ ದೀಪ ಬೆಳಗಿಸುವ ಮೂಲಕ ನಾಡಿನಲ್ಲಿ ಕೋಮು ಸೌಹಾರ್ದತೆ ಬಲಪಡಿಸಲು ಮುಂದಾಗೋಣ ಎಂದು ಶ್ರೀರಾಮ ಸೇನೆ ಧಾರವಾಡ ವಿಭಾಗ ಸಂಚಾಲಕ ರಾಜು ಖಾನಪ್ಪನವರ ಹೇಳಿದರು.

ಅವರು ಸೋಮವಾರ ನಗರದಲ್ಲಿ ಪತ್ರಿಕಾಗೋಷ್ಟಿಯನ್ನುದ್ದೇಶಿಸಿ ಮಾತನಾಡಿ, ಗದುಗಿನ ಐತಿಹಾಸಿಕ ವೀರ ನಾರಾಯಣ, ತ್ರಿಕುಟೇಶ್ವರ ದೇವಸ್ಥಾನ ಹಾಗೂ ಜುಮ್ಮಾ ಮಸಿದಿಗಳನ್ನು ಒಳಗೊಂಡAತೆ ಒಂದೇ ಒಂದು ಟ್ರಸ್ಟ್ ಕಮೀಟಿ ಇದೆ. ಹಿಂದೂ ದೇವಾಲಯ ಮುಸ್ಲಿಂಮರ ಮಸಿದಿಗೆ ಈ ತರಹದ ಟ್ರಸ್ಟ್ ಇರುವುದು ದೇಶದಲ್ಲಿ ಇದು ಒಂದೇಯಾಗಿದೆ ಎಂದು ಹೇಳಿದರು.

ಜ. ತೊಂಟದಾರ್ಯ ಮಠ, ವಿರೇಶ್ವರ ಪುಣ್ಯಾಶ್ರಮಗಳು ನಾಡಿನ ಕೊಮು ಸೌಹಾರ್ದತೆಗೆ ದೇಶದಲ್ಲಿಯೇ ಮಾದರಿಯಾಗಿವೆ. ಮುಸ್ಲಿಂ ಬಾಂಧವರ ಪವಿತ್ರ ಹಬ್ಬ ಮೊಹರಂ ಹಬ್ಬದ ನಿಮಿತ್ಯ ಸೊರಟೂರಿನ ಅನ್ನದಾನೇಶ್ವರ ಮಠದಲ್ಲಿ ಯುಗಾದಿಗೆ, ಕುರ್ತಕೊಟಿ ಗ್ರಾಮದ ಶರಣ ಬಸವೇಶ್ವರ ಜಾತ್ರಾ ಸಮಯದಲ್ಲಿ ನಡೆಯುವ ಪುರಾಣಗಳಲ್ಲಿ ಮುಸ್ಲಿಂ ಬಾಂಧವರು ಸಾಮೂಹಿಕ ಪ್ರಾರ್ಥನೆ ಸಲ್ಲಿಸುವುದು ನಾಡಿನ ಕೋಮು ಸೌಹಾರ್ದತೆ ಮತ್ತೊಂದು ಉದಾಹರಣೆಯಾಗಿದೆ.

ಹೀಗಾಗಿ ಈ ವರ್ಷದ ದೀಪಾವಳಿ ಹಬ್ಬದಂದು ಮಸೀದಿ, ದರ್ಗಾ ಚರ್ಚ್ಗಳಲ್ಲಿ ದೀಪ ಬೆಳಗುವ ಮೂಲಕ ಕೋಮು ಸೌಹಾರ್ಧತೆಯನ್ನು ನಾಡಿಗೆ ಸಾರಬೇಕು ಎಂದರು. ಬೆಳಗಾವಿ ವಿಭಾಗದ ಸಂಘಟನಾ ಕಾರ್ಯಾದರ್ಶಿ ಗಣೇಶ ಸಿಂತ್ರೆ, ಜಿಲ್ಲಾಧ್ಯಕ್ಷ ಮಹೇಶ ಕುರ್ತಕೋಟಿ, ಶಿವಯೋಗಿ ಹಿರೇಮಠ, ನಾಗರಾಜ ಗಡಿಯಪ್ಪ, ಮಾಂತೇಶ ಪಾಟೀಲ, ಅನೀಲ ಮುಳ್ಳಾಳ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು

Leave a Reply

Your email address will not be published. Required fields are marked *

You May Also Like

ಕೈಗೆ ಕಪ್ಪು ಬಟ್ಟೆ ಕಟ್ಟಿಕೊಂಡು ಪ್ರತಿಭಟನೆ ಮಾಡಿದ ಬಿಜೆಪಿ ಕಾರ್ಯಕರ್ತರು

ಲಕ್ಷ್ಮೇಶ್ವರ: ಪಟ್ಟಣದ ಶಿಗ್ಲಿ ಕ್ರಾಸ್ ನಲ್ಲಿ ಸರ್ಕಲ್ ನಲ್ಲಿ ಬಿಜೆಪಿ ಯುವಮೋರ್ಚಾ ಶಿರಹಟ್ಟಿ ಘಟಕ ಹಾಗೂ…

ಐಪಿಎಲ್ ಬೆಟ್ಟಿಂಗ್ – ಧಾರವಾಡದಲ್ಲಿ ನಾಲ್ವರ ಬಂಧನ!

ಧಾರವಾಡ : ಅವಳಿ ನಗರದಲ್ಲಿ ಕ್ರಿಕೆಟ್ ಬೆಟ್ಟಿಂಗ್ ಜೋರಾಗುತ್ತಿದೆ. ಈ ಹಿನ್ನೆಲೆಯಲ್ಲಿ ಬೆಟ್ಟಿಂಗ್ ಅಡ್ಡೆಯ ಮೇಲೆ ದಾಳಿ ಮಾಡಿದ ಪೊಲೀಸರು ನಾಲ್ವರನ್ನು ಬಂಧಿಸಲಾಗಿದೆ.

ವಿ.ಪ ಚುನಾವಣೆ : ಶಾಸಕ ಎಚ್.ಕೆ.ಪಾಟೀಲ ಮತದಾನ

ಉತ್ತರಪ್ರಭ ಸುದ್ದಿ ಮುಳಗುಂದ: ಇಲ್ಲಿನ ಪಟ್ಟಣ ಪಂಚಾಯ್ತಿ ಕಾರ್ಯಾಲಯದಲ್ಲಿ ಸ್ಥಾಪಿಸಿದ ಧಾರವಾಡ ವಿಧಾನ ಪರಿಷತ್ ಚುನಾವಣೆಯ…

ಶಾಸಕರೇ ಲಕ್ಷ್ಮೇಶ್ವರ ಸರ್ಕಾರಿ ಆಸ್ಪತ್ರೆಯನ್ನೊಮ್ಮೆ ನೋಡಿ!

ರೋಗಿಗಳ ಪಾಲಿಗೆ ಆಸ್ಪತ್ರೆಗಳೇ ಸಂಜೀವಿನಿ ಅಂತಾರೆ. ಆದರಲ್ಲೂ ಸರ್ಕಾರಿ ಆಸ್ಪತ್ರೆಗಳಂತೂ ಬಡರೋಗಿಗಳಿಗೆ ಅನುಕೂಲವಾಗಿದೆ. ಆದರೆ ಸರಿಯಾದ ನಿರ್ವಹಣೆ ಇಲ್ಲದ ಕಾರಣ ಸರ್ಕಾರಿ ಆಸ್ಪತ್ರೆ ಗಬ್ಬು ನಾರುತ್ತಿದೆ.