ಬೆಂಗಳೂರು : ಕೆಎಎಸ್ ಅಧಿಕಾರಿ ಡಾ. ಸುಧಾ ಅವರ ಮನೆಯ ಮೇಲೆ ಭ್ರಷ್ಟಾಚಾರ ನಿಗ್ರಹ ದಳ ದಾಳಿ ನಡೆಸಿದ್ದು, ಬರೋಬ್ಬರಿ 3.7 ಕೆಜಿ ಚಿನ್ನ ಹಾಗೂ 10.5 ಕೆಜಿ ಬೆಳ್ಳಿಯ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

ಈ ಕುರಿತು ಎಸಿಬಿ ಐಜಿಪಿ ಚಂದ್ರಶೇಖರ್ ತಿಳಿಸಿದ್ದಾರೆ. ಇತ್ತೀಚೆಗೆ ಡಾ. ಸುಧಾ ಅವರ ನಿವಾಸದ ಮೇಲೆ ಎಸಿಬಿ ದಾಳಿ ನಡೆಸಿತ್ತು. ಬೆಂಗಳೂರು, ಉಡುಪಿ, ಮೈಸೂರು ಸೇರಿದಂತೆ ಏಳು ಸ್ಥಳಗಳಲ್ಲಿ ದಾಳಿ ಮಾಡಲಾಗಿದ್ದು, ಈ ವೇಳೆ ರೂ. 36.89 ಲಕ್ಷ ನಗದು ವಶಪಡಿಸಿಕೊಳ್ಳಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಬ್ಯಾಂಕ್ ಖಾತೆಯಲ್ಲಿ ರೂ. 3.5 ಕೋಟಿ ಠೇವಣಿ ಹಾಗೂ 20ಕ್ಕೂ ಹೆಚ್ಚು ಆಸ್ತಿಗೆ ಸಂಬಂಧಿಸಿದ ದಾಖಲೆಗಳು ಪತ್ತೆಯಾಗಿವೆ. ಸ್ಥಿರಾಸ್ತಿ ಕ್ರಯ ಪತ್ರಗಳು, ಜಿಪಿಎ ಕರಾರುಗಳು, ಖರೀದಿ ಒಪ್ಪಂದ ಸೇರಿದಂತೆ 200 ಆಸ್ತಿ ಪತ್ರಗಳು ಪತ್ತೆಯಾಗಿವೆ ಎಂದು ಅವರು ಹೇಳಿದ್ದಾರೆ.

ಸುಧಾ ಅವರಿಗೆ ನೊಟೀಸ್ ನೀಡಿಲ್ಲ. ಆದರೆ, ದಾಖಲೆಗಳಿದ್ದರೆ ತಿಳಿಸುವಂತೆ ಸೂಚಿಸಲಾಗಿದೆ. ಸುಧಾ ಅವರ ಹೊರತಾಗಿ‌ ಅವರ ಮನೆ ಮೇಲೆ ದಾಳಿ ಮಾಡಲಾಗಿದ್ದು, ದಾಳಿಗೆ ತುತ್ತಾದವರನ್ನು ಬೇನಾಮಿಗಳು ಎಂದು ಪರಿಗಣಿಸಲಾಗಿದೆ. 50 ಬ್ಯಾಂಕ್ ಖಾತೆಗಳು ಪತ್ತೆಯಾಗಿದ್ದು, 50 ಚೆಕ್ ಲೀಫ್‌ ಗಳು ದೊರೆತಿವೆ ಎಂದು ಹೇಳಿದ್ದಾರೆ.

Leave a Reply

Your email address will not be published. Required fields are marked *

You May Also Like

ಮಾಜಿ ನ್ಯಾಯಾಧೀಶರಾದ ನ್ಯಾಯಮೂರ್ತಿ ಕೆ.ಎನ್.ಫಣೀಂದ್ರ ಉಪಲೋಕಾಯುಕ್ತರಾಗಿ ನೇಮಕ

ಉತ್ತರಪ್ರಭ ಸುದ್ದಿಬೆಂಗಳೂರ: ಕರ್ನಾಟಕದ ಮುಖ್ಯಮಂತ್ರಿಗಳಾದ ಶ್ರೀ ಬಸವರಾಜ ಬೊಮ್ಮಾಯಿ ಅವರು ಕರ್ನಾಟಕ ಹೈಕೋರ್ಟನ ಮಾಜಿ ನ್ಯಾಯಾಧೀಶರಾದ…

ಮೇವುಂಡಿ: ಈಜಲು ಹೋದ ಬಾಲಕ ನೀರು ಪಾಲು

ಗೆಳೆಯರೊಂದಿಗೆ ಈಜಲು ಹೋದ ಬಾಲಕ ನೀರು ಪಾಲಾದ ಘಟನೆ ಮುಂಡರಗಿ ತಾಲೂಕಿನ ಮೇವುಂಡಿ ಗ್ರಾಮದಲ್ಲಿ ನಡೆದಿದೆ. 14 ವರ್ಷದ ಬಾಲಕ ಚನ್ನವೀರಗೌಡ ಮೃತ ಬಾಲಕ. ಗೆಳೆಯರೊಂದಿಗೆ ಬುಧವಾರ ಈಜಲ ಹೋದಾಗ ಇಲ್ಲಿನ ಹಿರೇಹಳ್ಳದಲ್ಲಿ ಮುಳುಗಿ ಸಾವನ್ನಪ್ಪಿದ ಘಟನೆ ನಡೆದಿದೆ.

ಸಾವಿನ ಸಂಖ್ಯೆಯಲ್ಲಿ 10 ಸಾವಿರದ ಗಡಿ ದಾಟಿದ ರಾಜ್ಯ!

ಬೆಂಗಳೂರು : ರಾಜ್ಯದಲ್ಲಿ ಮಹಾಮಾರಿ ಮತ್ತೊಂದು ದಾಖಲೆ ಬರೆದಿದೆ. ಅಲ್ಲದೇ, ಸಾವಿನ ಸಂಖ್ಯೆಯಲ್ಲಿ ರಾಜ್ಯವು 10 ಸಾವಿರದ ಮೈಲಿಗಲ್ಲು ದಾಟಿದೆ.

ನಾಗಾವಿ ತಾಂಡದಲ್ಲಿ ಜಲಜೀವನ ಯೋಜನೆಗೆ ಚಾಲನೆ

ತಾಲೂಕಿನ ನಾಗಾವಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ನಾಗಾವಿ ತಾಂಡದಲ್ಲಿ ಹಾಗೂ ಬಿಂಕದಕಟ್ಟಿ, ಮಲ್ಲಸಮುದ್ರ ಗ್ರಾಮಗಳಲ್ಲಿ ಜಲ ಜೀವನ ಮಿಷನ್ ಯೋಜನೆಯ ಕಾಮಗಾರಿಗೆ ಭಾನುವಾರ ಶಾಸಕ ಎಚ್.ಕೆ.ಪಾಟೀಲ ಭೂಮಿ ಪೂಜೆ ನೆರವೇರಿಸಿದರು.