ಉತ್ತರಪ್ರಭ ಸುದ್ದಿ
ಬೆಂಗಳೂರ: ಕರ್ನಾಟಕದ ಮುಖ್ಯಮಂತ್ರಿಗಳಾದ ಶ್ರೀ ಬಸವರಾಜ ಬೊಮ್ಮಾಯಿ ಅವರು ಕರ್ನಾಟಕ ಹೈಕೋರ್ಟನ ಮಾಜಿ ನ್ಯಾಯಾಧೀಶರಾದ ನ್ಯಾಯಮೂರ್ತಿ ಕೆ.ಎನ್.ಫಣೀಂದ್ರ ಅವರನ್ನು ಕರ್ನಾಟಕದ ಉಪಲೋಕಾಯುಕ್ತರನ್ನಾಗಿ ನೇಮಿಸುವಂತೆ ರಾಯಪಾಲರಿಗೆ ಶಿಫಾರಸ್ಸು ಪತ್ರವನ್ನು ಬರೆದಿದ್ದರು.

ಕರ್ನಾಟಕ ಲೋಕಾಯುಕ್ತ ಕಾಯಿದೆ, 1984 (ಕರ್ನಾಟಕ ಅಧಿನಿಯಮ ನಂ.4 1985) ಸೆಕ್ಷನ್ 3(1) ಕರ್ನಾಟಕ ರಾಜ್ಯಪಾಲರಾದ ಥಾವರ್ಚಂಡ್ ಗೆಹ್ಲೋಟ್ ಅವರ ಆದೇಶದಂತೆ ಕರ್ನಾಟಕ ಹೈಕೋರ್ಟ ಮಾಜಿ ನ್ಯಾಯಾಧೀಶರಾದ ನ್ಯಾಯಮೂರ್ತಿ ಕೆ.ಎನ್.ಫಣೀಂದ್ರ ಅವರನ್ನು ಕರ್ನಾಟಕದ ಉಪಲೋಕಾಯುಕ್ತರನ್ನಾಗಿ ಆಡಳಿತ ಮತ್ತು ಸುಧಾರಣೆ ಇಲಾಖೆ ಸರ್ಕಾರದ ಕಾರ್ಯದರ್ಶೀಗಳಾದ ಹೇಮಲತಾ ಪಿ ದಿನಾಂಕ:22.03.2022ರAದು ಆದೇಶ ಹೊರಡಿಸಿದ್ದಾರೆ.

