ಮಂಗಳೂರು : ಬಿಜೆಪಿಯು ಮುಂಬರುವ ಚುನಾವಣೆಗೆ ಈಗಿನಿಂದಲೇ ಭರ್ಜರಿ ತಯಾರಿ ನಡೆಸಿದೆ. ಪಕ್ಷ ಸಂಘಟನೆಗೆ ಈಗಿನಿಂದಲೇ ಮುಂದಾಗಿದೆ.

ಈ ಹಿನ್ನೆಲೆಯಲ್ಲಿ ನಗರದಲ್ಲಿ ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸಭೆ ನಡೆದಿದ್ದು, ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ರಾಜ್ಯದಲ್ಲಿ 140 ರಿಂದ 150 ಸೀಟ್ ಗಳನ್ನು ಸ್ವಂತ ಬಲದಿಂದ ಗೆದ್ದು, ಮತ್ತೊಮ್ಮೆ ಅಧಿಕಾರ ರಚನೆ ಮಾಡಲು ಸಿದ್ಧತೆ ನಡೆಸಿದೆ.

ಈ ಹಿನ್ನೆಲೆಯಲ್ಲಿ ಸದ್ಯದಲ್ಲಿಯೇ ನಡೆಯುವ ಗ್ರಾಪಂ, ತಾಪಂ ಹಾಗೂ ಜಿಪಂ ಚುನಾವಣೆಗಳ ಮೇಲೆ ಬಿಜೆಪಿ ಕಣ್ಣು ನೆಟ್ಟಿದೆ. ಅಲ್ಲದೇ, ಈ ಚುನಾವಣೆಗಳನ್ನು ಕೂಡ ಬಿಜೆಪಿ ಗಂಭೀರವಾಗಿ ತೆಗೆದುಕೊಂಡಿದೆ. ಸ್ಥಳೀಯ ಸಂಸ್ಥೆಗಳ ಚುನಾವಣೆಗಳೇ ಮುಂಬರುವ ವಿಧಾನಸಭೆ ಚುನಾವಣೆಯ ಮೆಟ್ಟಿಲುಗಳು ಎಂದು ಬಿಜೆಪಿ ಭಾವಿಸಿದೆ.

ಬಿಜೆಪಿ ಕಾರ್ಯಕರ್ತರಿಗೆ ಇದು ಸೌಭಾಗ್ಯದ ವರ್ಷ. ಕೇಂದ್ರ ಹಾಗೂ ರಾಜ್ಯದಲ್ಲಿ ಬಿಜೆಪಿ ಸರ್ಕಾರವಿದ್ದು, ಇದು ಸ್ವರ್ಣಯುಗದಂತೆ ಭಾಸವಾಗುತ್ತಿದೆ. ರಾಜ್ಯದ 311 ಮಂಡಲ, 37 ಸಂಘಟನಾತ್ಮಕ ಜಿಲ್ಲೆಗಳಲ್ಲಿ ಮತಗಟ್ಟೆ ಸಂಘಟನೆ ಈಗಾಗಲೇ ಸಂಪೂರ್ಣವಾಗಿದೆ. ಇದರೊಂದಿಗೆ ಪಂಚರತ್ನ ಹಾಗೂ ಪೇಜ್ ಪ್ರಮುಕ್ ನೇಮಕ ಕೂಡ ಮಾಡಲಾಗಿದೆ.

Leave a Reply

Your email address will not be published. Required fields are marked *

You May Also Like

ನಾವು ಜನರ ಪರ, ಭ್ರಷ್ಟ ಸರ್ಕಾರದ ಪರವಲ್ಲ: ಸಿದ್ದು

ಬೆಂಗಳೂರು: ಕೋವಿಡ್ ಸಂಬಂಧಿ ಪಿಪಿಇ ಕಿಟ್ ಮತ್ತು ಇತರ ಸಲಕರಣೆ ಕೊಳ್ಳುವಾಗ ಸರ್ಕಾರ ಭಾರಿ ದುಡ್ಡು…

ಗಂಗಾಪುರ ಸಕ್ಕರೆ ಕಾರ್ಖಾನೆಯಲ್ಲಿ ಕೊಲೆ ಪ್ರಕರಣ: ಆರೋಪಿ ಬಂಧನ!

ಇತ್ತಿಚೆಗೆ ಗದಗ ಜಿಲ್ಲೆ ಮುಂಡರಗಿ ತಾಲೂಕಿನ ಗಂಗಾಪುರದ ವಿಜಯನಗರ ಸಕ್ಕರೆ ಕಾರ್ಖಾನೆಯಲ್ಲಿ ನಡೆದ ಸೆಕ್ಯೂರಿಟಿ ಗಾರ್ಡ್ ಕೊಲೆ ಪ್ರಕರಣವನ್ನು ಕೊನೆಗೂ ಮುಂಡರಗಿ ಪೊಲೀಸರು ಭೇದಿಸಿದ್ದಾರೆ.

ಸುಕ್ಕಾ ಹೊಡದ್ ಒಂಚೂರು ಉಪ್ಪಿನಕಾಯಿ ಒಳಗೋದ ಕೂಡ್ಲೆ ಏನಾತಂತೀರಿ…!

ಹೊಗ್ಗೋ ನಿನ್ನ ತಲಿ ದಿಮ್ ಹಿಡದಂಗಾಗಿ ಹ್ಯಂಗ್ಯಂಗರ ಮಾತಾಡಾಕತ್ತಿನಿ ಅನಸಾಕತ್ತೈತಿ ನಂಗ. ಅಯ್ಯೋ ನಂಗು ಹಂಗಾ ಅನಾಸಾಕತ್ತೈತಿ. ತಲಿ ದಿಮ್ಮಿನ ವಿಷಯ ಹೋಗ್ಲಿ ಹ್ಯಾಂಗಿತ್ತು ಮೊದಲ ದಿನದ ಅನುಭವ….!

ಪಿಎಂ ಕೇರ್ಸ್ ಅಡಿ ಸಂಗ್ರಹವಾದ ಮೊತ್ತದ ಲೆಕ್ಕ ಕೊಡಿ: ಸಿದ್ದರಾಮಯ್ಯ

ಬೆಂಳೂರು: ಪ್ರತಿಪಕ್ಷ ನಾಯಕರಾಗಿ ಅಧಿಕಾರಿಗಳ ಸಭೆಯನ್ನೇ ನಡೆಸಿಲ್ಲ ಎಂದು ಬಿಜೆಪಿ ಮುಖಂಡ ಬಿ.ಎಲ್.ಸಂತೋಷ ಆರೋಪಿಸಿದ್ದಾರೆ. ವಿಧಾನಸೌಧದಲ್ಲಿರುವ…