ಧಾರವಾಡ : ಮಾಜಿ ಸಚಿವ ವಿನಯ್ ಕುಲಕರ್ಣಿ ಅವರನ್ನು ಸಿಬಿಐ ವಶಕ್ಕೆ ಪಡೆದಿದೆ.

2017ರಲ್ಲಿ ಯೋಗೀಶ್ ಗೌಡ ಅವರ ಕೊಲೆ ನಡೆದಿತ್ತು. ಇಲ್ಲಿಯ ಸಪ್ತಾಪುರ ಜಿಮ್‍ ಗೆ ತೆರಳಿದ್ದ ದುಷ್ಕರ್ಮಿಗಳು ಮಚ್ಚಿನಿಂದ ದಾಳಿ ನಡೆಸಿ ಕೊಲೆ ಮಾಡಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಐವರನ್ನು ಬಂಧಿಸಿದ್ದರು.

ಪ್ರಕರಣದಲ್ಲಿ ವಿನಯ್ ಕುಲಕರ್ಣಿ ಅವರ ಹೆಸರು ತಳಕು ಹಾಕಿಕೊಂಡಿರುವ ಹಿನ್ನೆಲೆಯಲ್ಲಿ ಅವರನ್ನು ವಿಚಾರಣೆಗೆ ಒಳಪಡಿಸಲಾಗುತ್ತಿದೆ. ರಾಜ್ಯ ಸರ್ಕಾರವು 2019ರಲ್ಲಿ ಈ ಪ್ರಕರಣವನ್ನು ಸಿಬಿಐಗೆ ಹಸ್ತಾಂತರಿಸಿತ್ತು. ತನಿಖೆ ಆರಂಭಿಸಿರುವ ಸಿಬಿಐ, ಪ್ರಕರಣದ ಆರೋಪಿಗಳಾದ ಬಸವರಾಜ ಶಿವಪ್ಪ, ವಿಕ್ರಮ್ ಬಳ್ಳಾರಿ, ಕೀರ್ತಿ ಕುಮಾರ್ ಕುರಹಟ್ಟಿ, ಸಂದೀಪ್ ಸೌದತ್ತಿ, ವಿನಾಯಕ ಕಟಗಿ ಹಾಗೂ ಮಹಾಬಲೇಶ್ವರ ಹೊಂಗಲ್ ಅವರ ವಿರುದ್ಧ ಪ್ರಕರಣ ದಾಖಲಿಸಿದೆ ಎನ್ನಲಾಗಿದೆ.

Leave a Reply

Your email address will not be published. Required fields are marked *

You May Also Like

ಶಬರಿಮಲೈ ಯಾತ್ರಾರ್ಥಿಗಳಿಗೆ ಮಾರ್ಗಸೂಚಿ ಬಿಡುಗಡೆ

ಅಯ್ಯಪ್ಪಸ್ವಾಮಿ ದೇಗುಲ ಶಬರಿಮಲೈಗೆ ಹೋಗುವ ಮುನ್ನ ಭಕ್ತಾದಿಗಳಿಗೆ ಹೊಸ ಮಾರ್ಗಸೂಚಿಯನ್ನು ಹೊರಡಿಸಲಾಗಿದೆ.

ಗದಗನಲ್ಲಿಂದು ಒಂದು ಕೊರೊನಾ ಪಾಸಿಟಿವ್!

ಗದಗ: ಜಿಲ್ಲೆಯಲ್ಲಿಂದು ಒಂದು ಕೊರೊನಾ ಪಾಸಟಿವ್ ಪ್ರಕರಣ ಪತ್ತೆಯಾಗಿದ್ದು ಈ ಮೂಲಕ ಸೋಂಕಿತರ ಸಂಖ್ಯೆ 79…

ರಾಷ್ಟ್ರೀಯ ವಿಜ್ಞಾನ ದಿನಾಚರಣೆ

20ನೇ ಶತಮಾನದ ದೀರ್ಘಕಾಲಿಕ ವೈಜ್ಞಾನಿಕ ತಪಸ್ಸಿನಿಂದ ಹೊರಬಂದ ಅಮೂಲ್ಯ ಫಲಗಳು ರಾಮನ್ ಪರಿಣಾಮ ಹಾಗೂ ಸಾಪೇಕ್ಷವಾದ ರಾಮನ್ ಪರಿಣಾಮ ವಿಶ್ವದ ರಹಸ್ಯವನ್ನು ಬೇಧಿಸಿ ಮುಂದಿನ ಎಲ್ಲಾ ವೈಜ್ಞಾನಿಕ ಪ್ರಗತಿಗೆ ಸರಿಯಾದ ದಿಕ್ಕು ತೋರಿಸಿದ ಭೌತವಿಜ್ಞಾನಿ ಆಲ್ಬರ್ಟ್ ಐನ್ಸ್ಟೀನ್ ಹಾಗೆಯೇ ನಿಸರ್ಗದ ರಹಸ್ಯವನ್ನು ಬಯಲು ಮಾಡಿದ ನಮ್ಮ ದೇಶದ ಹಿರಿಮೆ-ಗರಿಮೆಗಳನ್ನು ಜಗತ್ತಿನ ಉತ್ತುಂಗ ಶಿಬಿರದಲ್ಲಿ ನಿಲ್ಲಿಸಿದ