ವಾಷಿಂಗ್ಟನ್ : ಅಮೆರಿಕದ ಚುನಾವಣೆಯಲ್ಲಿ ನಿಕಟ ಪೈಪೋಟಿ ಕಂಡು ಬರುತ್ತಿದೆ. ಹೀಗಾಗಿ ಗೆಲುವು ಯಾರ ಪಾಲಿಗೆ ಧಕ್ಕಲಿದೆ ಎಂಬುವುದು ತೀವ್ರ ಕುತೂಹಲಕ್ಕೆ ಕಾರಣವಾಗಿದೆ.
ಅಮೆರಿಕ ಅಧ್ಯಕ್ಷರಾಗಲು ಎಲೆಕ್ಟೊರಲ್ ಕಾಲೇಜ್ ನ 538 ಮತಗಳಲ್ಲಿ ಅಧ್ಯಕ್ಷೀಯ ಅಭ್ಯರ್ಥಿಯು 270 ಮತಗಳನ್ನು ಗಳಿಸಬೇಕು. ಮತ ಗಳಿಕೆಯಲ್ಲಿ ಸದ್ಯ ಇಬ್ಬರ ನಡುವೆ ಪೈಪೋಟಿ ಕಂಡು ಬರುತ್ತಿದೆ. ವಿಸ್ಕೋಸಿನ್ ನಲ್ಲಿ ಜೊ ಬೈಡನ್ ಗೆಲುವು ದಾಖಲಿಸಿದ್ದಾರೆ. ಈ ಮೂಲಕ ಅವರು 10 ಎಲೆಕ್ಟೋರಲ್ ಮತಗಳನ್ನು ಪಡೆದಿದ್ದಾರೆ ಎಂದು ಅಸೋಸಿಯೇಷನ್ ಪ್ರೆಸ್ ಹಾಗೂ ಸಿಎನ್ಎನ್ ವರದಿ ಮಾಡಿದ್ದು, ಇದುವರೆಗೂ ಅಧಿಕೃತ ಫಲಿತಾಂಶ ಹೊರ ಬಂದಿಲ್ಲ.
ಒಂದು ವೇಳೆ ಬೈಡೆನ್ ಈ ರಾಜ್ಯ ಗೆದ್ದರೆ ಬೈಡನ್ ಪರ ಎಲೆಕ್ಟೊರಲ್ ಮತಗಳ ಏರಿಕೆ ಸಂಖ್ಯೆ 248ಕ್ಕೆ ಏರಿಕೆ ಕಾಣುತ್ತದೆ. ಟ್ರಂಪ್ ಅವರು 214 ಮತಗಳನ್ನು ಪಡೆದಿದ್ದಾರೆ. ವಿಸ್ಕೋಸಿನ್ ಹಾಗೂ ಮಿಚಿಗನ್ ರಾಜ್ಯಗಳಲ್ಲಿ ಮರು ಮತ ಎಣಿಕೆಗೆ ಆಗ್ರಹಿಸಿದ್ದಾರೆ.
ಇಂದು ಬೆಳಿಗ್ಗೆಯವರೆಗೂ ಎಲೆಕ್ಟೊರಲ್ ಮತ ಗಳಿಕೆಯಲ್ಲಿ ಜೋ ಬೈಡೆನ್ ಮುಂದೆ ಇದ್ದಾರೆ. ಅವರು ಶೇ. 50.15ರಷ್ಟು (70,343, 018) ಮತ ಗಳಿಸಿದ್ದಾರೆ. ಡೊನಾಲ್ಡ್ ಟ್ರಂಪ್ ಶೇ. 48.23(67,660,501) ಮತ ಗಳಿಸಿದ್ದಾರೆ. ಈಗಾಗಲೇ ಕೆಲವು ಪ್ರಮುಖ ರಾಜ್ಯಗಳಲ್ಲಿ ಬೈಡೆನ್ ಜಯ ಗಳಿಸಿದ್ದಾರೆ.