ಬೆಂಗಳೂರು : ರಾಜ್ಯದಲ್ಲಿ ಎರಡು ಕ್ಷೇತ್ರಗಳಿಗೆ ಉಪ ಚುನಾವಣೆ ನಡೆದಿದ್ದು, ಮೂರೂ ಪಕ್ಷಗಳ ನಡುವೆ ಪೈಪೋಟಿ ಕಂಡು ಬಂದಿದೆ. ಈ ಹಿನ್ನೆಲೆಯಲ್ಲಿ ತಮ್ಮ ಪಕ್ಷದ ಅಭ್ಯರ್ಥಿಗಳ ಗೆಲುವಿಗಾಗಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ದೇವರಿಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ.

ಇಲ್ಲಿಯ ಬನಶಂಕರಿ ನಗರದಲ್ಲಿರುವ ಬನಶಂಕರಿ ದೇವಿ ದೇವಾಲಯಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಚುನಾವಣೆ ಪ್ರಕ್ರಿಯೆ ಮುಗಿಯುತ್ತಿದ್ದಂತೆ ಪೋಸ್ಟ್ ಹಾಕಿದ್ದ ಡಿಕೆಶಿ, ರಾಜರಾಜೇಶ್ವರಿ ನಗರ ಹಾಗೂ ಶಿರಾ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ತಮ್ಮ ಹಕ್ಕು ಚಲಾಯಿಸಿದ ಎಲ್ಲ ಮತದಾರರಿಗೂ ಧನ್ಯವಾದಗಳು ಎಂದು ಹೇಳಿದ್ದರು. ಈ ಸಂದರ್ಭದಲ್ಲಿ ತಮ್ಮ ಕಾರ್ಯಕರ್ತರಿಗೂ ಧನ್ಯವಾದಗಳನ್ನು ಡಿಕೆಶಿ ಅರ್ಪಿಸಿದ್ದರು.

ಡಿಕೆಶಿ ಅವರು ಕೆಪಿಸಿಸಿ ಸಾರಥ್ಯ ವಹಿಸಿಕೊಂಡ ನಂತರ, ಅವರು ಮೊದಲ ಬಾರಿಗೆ ಚುನಾವಣೆ ಎದುರಿಸಿದ್ದಾರೆ. ಹೀಗಾಗಿ ಅವರಿಗೆ ಈ ಎರಡೂ ಕ್ಷೇತ್ರಗಳ ಚುನಾವಣೆ ಪ್ರತಿಷ್ಠೆಯಿಂದ ಕೂಡಿದೆ. ಈಗಾಗಲೇ ಶಿರಾದಲ್ಲಿ 84.54ರಷ್ಟು ಹಾಗೂ ರಾಜರಾಜೇಶ್ವರಿ ನಗರದಲ್ಲಿ 45.24ರಷ್ಟು ಮತದಾನವಾಗಿದೆ. ನ. 10ರಂದು ಫಲಿತಾಂಶ ಹೊರ ಬೀಳಲಿದೆ.

Leave a Reply

Your email address will not be published. Required fields are marked *

You May Also Like

ಮಲೆನಾಡ ಜನರ ನಿದ್ದೆಗೆಡಿಸಿದ ಪಾದರಾಯನಪುರ!

ಪಾದರಾಯನಪುರದ ಗಲಾಟೆ ಮಲೆನಾಡಿನಲ್ಲಿ ಭಯ ಹುಟ್ಟಿಸುತ್ತಿದೆ. ಕೊರೊನಾ ದೇಶ ಹಾಗೂ ರಾಜ್ಯದಲ್ಲಿ ವಕ್ಕರಿಸಿದ ಸಂದರ್ಭದಲ್ಲಿ ಶಿವಮೊಗ್ಗ ಜಿಲ್ಲೆಯಲ್ಲಿ ಒಂದೇ ಒಂದು ಕೇಸ್ ಕೂಡ ಇರಲಿಲ್ಲ. ಆದರೆ, ಸದ್ಯ ಈ ಜಿಲ್ಲೆಯಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ.

ಮಹಿಳೆಯರನ್ನು ರಕ್ಷಿಸಬೇಕಾದ ಪೊಲೀಸನೇ ಇಲ್ಲಿ ಕಿರುಕುಳ ನೀಡಿದ್ದಾನೆ!!

ನವದೆಹಲಿ : ಮಹಿಳೆಯರ ಜೊತೆ ಅಸಭ್ಯವಾಗಿ ನಡೆದುಕೊಂಡ ಹಿನ್ನೆಲೆಯಲ್ಲಿ ದೆಹಲಿ ಪೊಲೀಸರು ಸಬ್ ಇನ್ಸಪೆಕ್ಟರ್ ಒಬ್ಬರನ್ನು ಬಂಧಿಸಿದ್ದಾರೆ.

ಸೇವಾ ಸಿಂಧುಗಾಗಿ ಸರತಿಯಲ್ಲಿ ಚಪ್ಪಲಿ ಇಟ್ಟು ಕಾದು ಕುಳಿತ ಕಾರ್ಮಿಕರು

ಬಿಸಿಲಿನ ತಾಪ ಹೆಚ್ಚಿದ ಹಿನ್ನೆಲೆಯಲ್ಲಿ ಜನರು ಸಾಲಿನಲ್ಲಿ ನಿಲ್ಲಲಾಗದೆ ತಮ್ಮ ಚಪ್ಪಲಿಗಳನ್ನು ಗುರುತಿಗಾಗಿ ಇಡುತ್ತಿರುವುದು ಹಾಗೂ ಭಾಷಾ ಸಮಸ್ಯೆ ಯಿಂದ ಸೇವಾ ಸಿಂಧು ಅರ್ಜಿ ಸಲ್ಲಿಸಲು ಕಾರ್ಮಿಕರು ಸುಸ್ತಾಗುತ್ತಿದ್ದಾರೆ.