ಲಕ್ನೋ : ಮಾರುಕಟ್ಟೆಯಲ್ಲಿ ಶಾಪಿಂಗ್ ಮಾಡುವ ಸಂದರ್ಭದಲ್ಲಿ ಆಂಟಿ ಎಂದು ಕರೆದಿದ್ದಕ್ಕೆ ಹುಡುಗಿಯೊಬ್ಬಳಿಗೆ ಮಹಿಳೆ ಹೊಡೆದಿರುವ ಘಟನೆ ಉತ್ತರ ಪ್ರದೇಶದ ಇತಾನ ಬಾಬುಗಂಜ್ ಮಾರುಕಟ್ಟೆಯಲ್ಲಿ ನಡೆದಿದೆ.

40 ವರ್ಷದ ಮಹಿಳೆ ತನ್ನ ಗೆಳತಿಯರೊಂದಿಗೆ ಶಾಪಿಂಗ್ ಗೆ ತೆರಳಿದ್ದರು. ಈ ಸಂದರ್ಭದಲ್ಲಿ ಶಾಪಿಂಗ್ ಮಾಡುತ್ತಿದ್ದ ಹುಡುಗಿಯೊಬ್ಬರು ಆಂಟಿ ಎಂದು ಕರೆದಿದ್ದಾಳೆ. ಇದಕ್ಕೆ ಕೋಪಗೊಂಡ ಮಹಿಳೆ ಹುಡುಗಿಯನ್ನು ಹಿಗ್ಗಾಮುಗ್ಗಾ ಥಳಿಸಿದ್ದಾಳೆ.

ಹುಡುಗಿ ಆಂಟಿ ಎಂದು ಕರೆದಿದ್ದಕ್ಕೆ ಕೋಪಗೊಂಡ ಮಹಿಳೆ ಹಾಗೂ ಅವರ ಸ್ನೇಹಿತೆಯರು ಅಲ್ಲಿಯೇ ಜಗಳ ಪ್ರಾರಂಭಿಸಿದ್ದಾರೆ. ಈ ಸಂದರ್ಭದಲ್ಲಿ ಮಹಿಳೆ, ಹುಡುಗಿಯ ಕೂದಲನ್ನು ಹಿಡುದ ಎಳೆದಾಡಿದ್ದಾರೆ. ಈ ಸಂದರ್ಭದಲ್ಲಿ ಲೇಡಿ ಪೊಲೀಸರೊಬ್ಬರು ಆಗಮಿಸಿ, ಜಗಳವನ್ನು ಶಾಂತ ಮಾಡಿದ್ದಾರೆ. ನಂತರ ಇವರ ಸಮಸ್ಯೆಯನ್ನು ಇತ್ಯರ್ಥಪಡಿಸಿ ಅಲ್ಲಿಂದ ಕಳಿಸಿದ್ದಾರೆ.

ಆದರೆ, ಈ ಕುರಿತು ಯಾವುದೇ ದೂರು ದಾಖಲಾಗಿಲ್ಲ. ಮಹಿಳೆ, ಹುಡುಗಿಯನ್ನು ಎಳೆದು ಹೊಡೆದಿರುವ ವಿಡಿಯೋ ಮಾತ್ರ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ.

Leave a Reply

Your email address will not be published. Required fields are marked *

You May Also Like

ದೇಶದಲ್ಲಿ 7 ಸಾವಿರದಷ್ಟು ರೂಪಾಂತರ ಕೊರೊನಾ ವೈರಸ್

ದೇಶದಲ್ಲಿ ಕೊರೊನಾ ವೈರಸ್‌ನ 7 ಸಾವಿರಕ್ಕೂ ಹೆಚ್ಚು ರೂಪಾಂತರಗಳು ಇರುವ ಸಾಧ್ಯತೆ ಇದ್ದು, ಈ ಪೈಕಿ ಕೆಲವು ಗಂಭೀರ ಅಪಾಯ ಉಂಟುಮಾಡಬಹುದು ಎಂದು ಹಿರಿಯ ವಿಜ್ಞಾನಿ ರಾಕೇಶ್ ಮಿಶ್ರಾ ಹೇಳಿದ್ದಾರೆ.

ಲಿಂ.ತೋಂಟದ ಸಿದ್ದಲಿಂಗ ಶ್ರೀಗಳವರ “ಆಲಮಟ್ಟಿ ಪ್ರೇಮ ಕಾವ್ಯಭಾವ” ಅನನ್ಯ !!!

ಬರಹ : ಗುಲಾಬಚಂದ ಆರ್.ಜಾಧವ. ಆಲಮಟ್ಟಿಆಲಮಟ್ಟಿ (ವಿಜಯಪುರ ಜಿಲ್ಲೆ) : ಮನದಾಳದಿಂದ ಹೊರಡುವ ನಿಷ್ಕಲ್ಮಶ,ನಿಸ್ವಾರ್ಥವುಳ್ಳ ಪ್ರೀತಿ…

ಯಾವುದೇ ಆತಂಕ ಬೇಡ ಅಮಿತ್ ಶಾ ಆರೋಗ್ಯವಾಗಿದ್ದಾರಂತೆ

ನಾನು ಆರೋಗ್ಯವಾಗಿದ್ದೇನೆ. ಯಾವುದೇ ಆತಂಕಕ್ಕೆ ಆಸ್ಪದವಿಲ್ಲ ಎಂದು ಗೃಹ ಮಂತ್ರಿ ಅಮಿತ್ ಶಾ ಟ್ವೀಟ್ ಮಾಡಿದ್ದಾರೆ.

ಚೀನಾ ತನ್ನ ಸೇನೆಯನ್ನು ಹಿಂದಕ್ಕೆ ಕರೆಸಿಕೊಳ್ಳದ ಹೊರತು ಭಾರತ ಜಗ್ಗುವುದಿಲ್ಲ..

ಲಡಾಖ್‌ನಲ್ಲಿ ಉಭಯ ರಾಷ್ಟ್ರಗಳ ನಡುವೆ ಗಡಿ ಸಮಸ್ಯೆ ಸೃಷ್ಟಿಯಾದ ಬಳಿಕ ಸೇನೆ ನಿಯೋಜಿಸಲಾಗಿದ್ದು, ಇದೀಗ ಗಡಿಯಲ್ಲಿ ಚೀನಾದ ಪೀಪಲ್ಸ್ ಲಿಬರೇಶನ್ ಆರ್ಮಿ ತಮ್ಮ ಸೇನೆಯನ್ನು ವಾಪಸ್ ಕರೆಸಿಕೊಳ್ಳದ ಹೊರತು ಭಾರತ ಸೇನಾಪಡೆಯನ್ನು ಹಿಂದಕ್ಕೆ ಕರೆಯಿಸಿಕೊಳ್ಳುವುದಿಲ್ಲ ಎಂದು ಸೇನೆ ತಿಳಿಸಿದೆ.