ಬೆಂಗಳೂರು : ರಾಜ್ಯದಲ್ಲಿ ಈಗಾಗಲೇ ವೈರಸ್ ಗೆ ಸುಮಾರು 2 ಕೋಟಿ ಜನರಿಗೆ ತಗುಲಿದೆ ಎಂದು ಸರ್ಕಾರ ನಡೆಸಿದ ಸಮೀಕ್ಷೆಯಿಂದ ತಿಳಿದು ಬಂದಿದೆ. 

ರಾಜ್ಯದಲ್ಲಿ ಸೆ. 16ರವರೆಗೆ ಕನಿಷ್ಠ 1.93 ಕೋಟಿ ಅಥವಾ ಶೇ. 27.3ರಷ್ಟು ಜನರಿಗೆ ಸೋಂಕು ತಗುಲಿದೆ ಎಂದು ಸರ್ಕಾರ ಈ ಅಂಕಿ – ಅಂಶವನ್ನು ಬಹಿರಂಗ ಪಡಿಸಿದೆ. 

ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ. ಕೆ ಸುಧಾಕರ್ ಮಾತನಾಡಿ, ಈ ಸರ್ವೆ 2020ರ ಸೆ. 3 ರಿಂದ 16 ರವರೆಗೆ ನಡೆದಿದೆ. ಮರಣ ಪ್ರಮಾಣವನ್ನು ಸೋಂಕಿಗೆ ಒಳಗಾದ ಒಟ್ಟು ಜನರಿಗೆ ಹೋಲಿಸಿದರೆ, ಬಹಳ ಕಡಿಮೆ ಇದೆ.

ರಾಜ್ಯದಲ್ಲಿ ಮರಣ ಪ್ರಮಾಣ ಶೇ. 0.05 ಇದೆ. ಮುಂಬಯಿನಲ್ಲಿ ಶೇ. 0.05 ರಿಂದ ಶೇ. 0.10, ಪುಣೆಯಲ್ಲಿ ಶೇ. 0.08, ದೆಹಲಿಯಲ್ಲಿ ಶೇ. 0.09, ಚೆನ್ನೈನಲ್ಲಿ ಶೇ. 0.13ರಷ್ಟು ಮರಣ ಪ್ರಮಾಣವಿದೆ ಎಂದು ಹೇಳಿದ್ದಾರೆ. ಇದೇ ರೀತಿ ಡಿಸೆಂಬರ್ ಅಂತ್ಯದಲ್ಲಿ ಒಂದು ಹಾಗೂ ಮಾರ್ಚ್ ಅಂತ್ಯಕ್ಕೆ ಮತ್ತೊಂದು ಸರ್ವೆ ನಡೆಸಲಾಗುವುದು ಎಂದು ಕೂಡ ಅವರು ಹೇಳಿದ್ದಾರೆ. 

Leave a Reply

Your email address will not be published. Required fields are marked *

You May Also Like

ಮದ್ಯಕ್ಕೆ ಸ್ಯಾನಿಟೈಸರ್ ಮಿಕ್ಸ್ ಮಾಡಿ ಕುಡಿದ ಐವರ ಸಾವು – ಹಲವರು ಗಂಭೀರ

ತಿರುವನಂತಪುರಂ : ಮದ್ಯಕ್ಕೆ ಸ್ಯಾನಿಟೈಸರ್ ಮಿಕ್ಸ್ ಮಾಡಿ ಸೇವಿಸಿದ ಐವರು ಸಾವನ್ನಪ್ಪಿದ್ದು, ಹಲವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಕೇರಳದ ಪಾಲಕ್ಕಾಡ್ ಜಿಲ್ಲೆಯ ಕಾಂಜಿಕೋಡ್ನನಲ್ಲಿ ನಡೆದಿದೆ.

ಮಗಳ ಮೇಲೆಯೇ ಅತ್ಯಾಚಾರ ಮಾಡಿದ ಪಾಪಿ!!

ಲಾಕ್‍ಡೌನ್ ಸಂದರ್ಭದಲ್ಲಿ 13 ವರ್ಷದ ಅಪ್ರಾಪ್ತ ಬಾಲಕಿಯ ಮೇಲೆ ಪಾಪಿ ತಂದೆಯೊಬ್ಬ ಅತ್ಯಾಚಾರ ನಡೆಸಿದ ಘಟನೆ ತೆಲಂಗಾಣದ ವಿಕರಾಬಾದ್ ಜಿಲ್ಲೆಯಲ್ಲಿ ನಡೆದಿದೆ.

ಅನ್ಲಾಕ್-2 ಮಾರ್ಗಸೂಚಿ ಬಿಡುಗಡೆ!: ಏನಿರುತ್ತೆ, ಏನಿರಲ್ಲ

ನವದೆಹಲಿ : ಕೇಂದ್ರ ಸರ್ಕಾರ ಹೊಸ ಮಾರ್ಗಸೂಚಿಗಳನ್ನು ಪ್ರಕಟಿಸಿದ್ದು, ಜುಲೈ 31ರ ವರೆಗೆ ಶಾಲಾ, ಕಾಲೇಜು,…

ನೀಟ್ (NEET) ಪರೀಕ್ಷೆಯ ದಿನಾಂಕ ಘೋಷಣೆ!

ಈ ಪರೀಕ್ಷೆಯು ದೇಶದಾದ್ಯಂತ ನಡೆಯಲಿದ್ದು ಕೋವಿಡ್ ಸೋಂಕು ಹರಡುತ್ತಿರುವುದರಿಂದ ಪರೀಕ್ಷೆಯ ಕೇಂದ್ರಗಳನ್ನು ಹೆಚ್ಚಿಸಲಾಗುವುದು ಹಾಗೂ ಈ ಮುಂಚೆ 155 ನಗರಗಳಲ್ಲಿ ಪರೀಕ್ಷೆ ನಡೆಯುತ್ತಿದ್ದು, ಈಗ 198 ನಗರಗಳಲ್ಲಿ ಪರೀಕ್ಷೆ ನಡೆಸಲಾಗುವುದು ಹಾಗೂ 3862 ಕೇಂದ್ರಗಳನ್ನು ಹೆಚ್ಚಿಸಲಾಗುವುದು ಎಂದು ಕೇಂದ್ರ ಶಿಕ್ಷಣ ಸಚಿವರು ತಿಳಿಸಿದ್ದಾರೆ.