ಹಾಸನ : ಜಿಲ್ಲೆಯಲ್ಲಿ ಬೆಳ್ಳಂ ಬೆಳಿಗ್ಗೆ ಗುಂಡಿನ ಸದ್ದು ಕೇಳಿ ಬಂದಿದೆ. ರೌಡಿ ಶೀಟರ್ ಮೇಲೆ ಫೈರಿಂಗ್ ಮಾಡಿರುವ ಪೊಲೀಸರು ಬಂಧಿಸಿದ್ದಾರೆ.

ಗ್ರಾಮಾಂತರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಮೂವರು ಯುವಕರ ಮೇಲೆ ಚೂರಿ ಇರಿತದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಬಂಧಿಸಲು ತೆರಳಿದ್ದರು. ಈ ಸಂದರ್ಭದಲ್ಲಿ ಸುನೀಲ್, ಗ್ರಾಮಾಂತರ ಪಿಎಸ್ ಐ ಸುರೇಶ್‍ ಎಂಬುವವರಿಗೆ ಚೂರಿ ಇರಿದಿದ್ದಾನೆ.

ಈ ಸಂದರ್ಭದಲ್ಲಿ ಪೊಲೀಸರು, ಪರಿಸ್ಥಿತಿ ನಿಯಂತ್ರಿಸಲು ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ. ಆದರೂ ಫೈರಿಂಗ್ ಸಂದರ್ಭದಲ್ಲಿ ಆರೋಪಿತ ಹಾಗೂ ಆತನ ಸಹಚರರು ದಾಳಿ ಮಾಡಲು ಮುಂದಾಗಿದ್ದಾರೆ. ಹೀಗಾಗಿ ಸುನೀಲ್ ಮೇಲೆ ಗುಂಡು ಹಾರಿಸಿದ್ದಾರೆ.

ಆರೋಪಿತ ಹಲವು ಗಂಭೀರ ಪ್ರಕರಣಗಳಲ್ಲಿ ಬೇಕಾಗಿದ್ದಾನೆ. ಹೀಗಾಗಿ ಪೊಲೀಸರು ಹುಡುಕಾಟ ನಡೆಸಿದ್ದರು. ಗಾಯಗೊಂಡಿರುವ ಪಿಎಸ್ ಐ ಹಾಗೂ ಗುಂಡೇಟು ಬಿದ್ದ ರೌಡಿ ಶೀಟರ್ ನನ್ನು ಹಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಆಸ್ಪತ್ರೆಗೆ ಎಸ್ಪಿವ ಶ್ರೀನಿವಾಸ್ ಗೌಡ ಭೇಟಿ ಪರಿಶೀಲನೆ ನಡೆಸಿದ್ದಾರೆ.

Leave a Reply

Your email address will not be published. Required fields are marked *

You May Also Like

ನೇತ್ರ ದಾನ

ಉತ್ತರಪ್ರಭ ನೇತ್ರದಾನ ಮಾಡಬೇಕೆಂದು ಕೊಂಡಿದ್ದೇನೆನೊಂದಾಯಿಸಿಕೊಳ್ಳಿ ನನ್ನೆಯ ಹೆಸರನ್ನಉರಿಯುವ ಬೆಂಕಿಯಲಿಟ್ಟರೆ ಬೂದಿಯಾಗುತ್ತೇನೆಮಣ್ಣಿನೊಳಗೆ ಹುಗಿದರೆ ಕೊಳೆತು ಹೋಗುತ್ತೇನೆ ಸತ್ತ…

ಬೀದರ್ ಗೆ ಮಹಾರಾಷ್ಟ್ರ ಕಂಟಕ….ಧಾರವಾಡಕ್ಕೆ ದೆಹಲಿ ಕಂಟಕ!!

ಧಾರವಾಡ: ಬೀದರ್ ನಲ್ಲಿ ಗರ್ಭಿಣಿ ಸೇರಿದಂತೆ 6 ಜನರಲ್ಲಿ ಸೋಂಕು ಪತ್ತೆಯಾಗಿದೆ. ಧಾರವಾಡದಲ್ಲಿ ಕೂಡ ಇಂದು…

ಜಮೀನು ವಿವಾದ ಕೊಲೆಯಲ್ಲಿ ಅಂತ್ಯ.

ಜಮೀನು ವಿವಾದ ಕೊಲೆಯಲ್ಲಿ ಅಂತ್ಯವಾದ ಘಟನೆ ಹಾವೆರಿ ಜಿಲ್ಲೆಯಲ್ಲಿ ನಡೆದಿದೆ.

ಕೊರೊನಾ ಎಫೆಕ್ಟ್: ಎಂಜನೀಯರಿಂಗ್, ಡಿಪ್ಲೋಮಾ, ಎಂಬಿಎ, ಐಟಿಐ ಉದ್ಯೋಗಿಗಳು ನರೆಗಾ ಕೆಲಸಕ್ಕೆ..!

ಉನ್ನತ ಶಿಕ್ಷಣ ಪಡೆದು ತಿಂಗಳಾದರೆ ಸಾಕು ಕೈತುಂಬ ಸಂಬಳ ಎಣಿಸುತ್ತಿದ್ದವರು ಬದುಕಿನ ಅನಿವಾರ್ಯತೆಗೆ ನರೇಗಾ ಕೂಲಿ ಕೆಲಸಕ್ಕೆ ಹೊರಟಿದ್ದಾರೆ.