ಉತ್ತರಪ್ರಭ
ನೇತ್ರದಾನ ಮಾಡಬೇಕೆಂದು ಕೊಂಡಿದ್ದೇನೆ
ನೊಂದಾಯಿಸಿಕೊಳ್ಳಿ ನನ್ನೆಯ ಹೆಸರನ್ನ
ಉರಿಯುವ ಬೆಂಕಿಯಲಿಟ್ಟರೆ ಬೂದಿಯಾಗುತ್ತೇನೆ
ಮಣ್ಣಿನೊಳಗೆ ಹುಗಿದರೆ ಕೊಳೆತು ಹೋಗುತ್ತೇನೆ
ಸತ್ತ ಮೇಲೆಯೂ ಉಪಕಾರಿಯಾಗ ಬೇಕಾಗಿದೆ
ಉಪಯೋಗವಾಗುವ ಅಂಗಾಂಗ ದಾನ ಕೊಟ್ಟು
ಬೆಳಕನ್ನೇ ಕಾಣದ ಅದೆಷ್ಟೋ ಅಂಧರಿದ್ದಾರೆ ಇಲ್ಲಿ
ಕಾಣದನ್ನು ಕಣ್ಣು ತೆರದು ನೋಡಲಿ ಅವರು ಇಲ್ಲಿ
ಬದುಕಿನ ತುಂಬಾ ಕತ್ತಲೆಯನ್ನೇ ತುಂಬಿಕೊಂಡಿದ್ದಾರೆ
ನೋಡಲಿ ಅವರು ಹೆತ್ತ ಮಡಿಲನ್ನ ಹೊತ್ತು ಹೆಗಲನ್ನ
ಬೆಳಕಿಲ್ಲದ ಮನೆಯೊಳಗೆ ವಾಸಿಸುವುದೇ ಕಷ್ಟ
ಅಂಧಕಾರದ ಮದ್ಯ ಬಳಲಿದ್ದಾರೇ ಬಲು ನಷ್ಟ
ನನ್ನ ಕಣ್ಣಿದ್ದಾದರು ನೋಡಲಿ ಪ್ರಕೃತಿಯ ಸೊಬಗನ್ನು
ಕಣ್ಣು ತುಂಬಿಕೊಳ್ಳಲಿ ಪ್ರಕೃತಿಯ ಸೌಂದರ್ಯವನ್ನು
ಒಬ್ಬರ ಕತ್ತಲೆಯ ಕಳೆಯುವ ಭಾಗ್ಯ ನನಗೆ ಸಿಕ್ಕಿದೆ
ಇದಕ್ಕಿಂತ ಹೆಚ್ಚೇನು ಬೇಡ ಅವರಿಗೆ ಬೆಳಕಾಗುವೆ
ದೀಪದಿಂದ ದೀಪವನ್ನು ಹಚ್ಚಿ ಇಡುವಂತೆ ಮಾನವ
ಧಾನ ಧರ್ಮವನ್ನು ಮಾಡುವುದು ಕಲೆಯಬೇಕಾಗಿದೆ
ದಾನದಿಂದ ಇನ್ನೊಬ್ಬರ ಹಾನಿಯನ್ನು ತಪ್ಪಿಸಬಹುದು
ಹಿಂದೇಟು ಏಕೆ? ನೊಂದಾಯಿಸಿಕೊಳ್ಳಿರೀ ಹೆಸರನ್ನು
ಕಷ್ಟಕ್ಕೆ ಪರಿಹಾರ ಬದುಕಿದ್ದಾಗಲೇ ಹುಡುಕೋಣ
ಸತ್ತ ಮೇಲೆ ಅಂಗಾಂಗಗಳ ಕೊಟ್ಟು ಹೋಗೋಣ
ಇಲ್ಲಿ ಇದಷ್ಟು ದಿನ ನಾವು ಆದರ್ಶವಾಗಿ ಬಾಳೋಣ
ಸತ್ತ ಮೇಲೆ ಇಲ್ಲಿ ಸಂದೇಶವ ಕೊಟ್ಟು ಸಾಗೋಣ.


