ಬೀದರ್: ಕಳೆದ ಮೂರು ತಿಂಗಳಲ್ಲಿ ಜನರ ಆರ್ಥಿಕ ಸ್ಥಿತಿ ತೀರಾ ಬಿಗಡಾಯಿಸುತ್ತಾ ಹೊರಟಿದೆ. ಇದರಿಂದ ಕೊರೊನಾ ದುಡಿಯುವ ಕೈಗಳ ಕೆಲಸ ಕಸಿದಿದೆ. ಕೂಲಿ ಕಾರ್ಮಿಕರ ಸ್ಥಿತಿ ಒಂದೆಡೆ ಗಂಭೀರ ಸ್ವರೂಪ ತಾಳಿದ್ದರೆ, ಇದಕ್ಕೆ ಎಂಜನೀಯರಿಂಗ್, ಡಿಪ್ಲೋಮಾ, ಎಂಬಿಎ ಓದಿ ಉದ್ಯೋಗದಲ್ಲಿದ್ದವರ ಪಾಡು ಭಿನ್ನವಾಗೇನಿಲ್ಲ. ಉನ್ನತ ಶಿಕ್ಷಣ ಪಡೆದು ತಿಂಗಳಾದರೆ ಸಾಕು ಕೈತುಂಬ ಸಂಬಳ ಎಣಿಸುತ್ತಿದ್ದವರು ಬದುಕಿನ ಅನಿವಾರ್ಯತೆಗೆ ನರೇಗಾ ಕೂಲಿ ಕೆಲಸಕ್ಕೆ ಹೊರಟಿರುವುದು ಬೀದರ್ ಜಿಲ್ಲೆಯ ಕಮಠಾಣ ಗ್ರಾಮದಲ್ಲಿ ಕಂಡು ಬಂದಿದೆ.

ಏನ್ ಮಾಡೊದ್ರಿ ಹೈದರಾಬಾದ್ ದಾಗ ಒಳ್ಳೆ ಕೆಲ್ಸದಾಗಿದ್ದೆ. ಲಾಲ್ ಡೌನ್ ನಿಂದ ಊರ್ ಸೇರಿದ್ ಮ್ಯಾಲೆ ಕೆಲ್ಸಾನಾ ಇಲ್ದಂಗಾಗಿತ್ತು. ಇರೋ ಬರೋ ಹಣ ಎಲ್ಲ ಖಾಲಿ ಆಗ್ಯಾವು. ಅದಕ್ಕ ನಮ್ಮ ಊರಾಗ ಉದ್ಯೋಗ ಖಾತ್ರಿ ಯೋಜನೆದಾಗ ಕೆಲ್ಸಾ ಶುರು ಮಾಡಿದ್ರು, ಹಿಂಗಾಗಿ ಕೆಲಸಕ್ಕ ಬಂದೇವ್ರಿ.

ಸತೀಶ್, ಗ್ರಾಮಸ್ಥ

ಅಂದಾಜು 20 ಕ್ಕೂ ಅಧಿಕ ಜನರು ಈ ಗ್ರಾಮದಲ್ಲಿ ದೇಶದ ವಿವಿಧ ರಾಜ್ಯಗಳಲ್ಲಿ ಉನ್ನತ ಹುದ್ದೆಯಲ್ಲಿದ್ದರು. ಆದ್ರೆ ಈಗ ಲಾಕ್ ಡೌನ್ ಸ್ವಲ್ಪ ಸಡಿಲಿಕೆಯಾದರೂ ಕೂಡ ಇವರ ಪರಿಸ್ಥಿತಿ ಸುಧಾರಣೆಯಾಗುವ ಯಾವುದೇ ಲಕ್ಷಣ ಕಾಣದ ಹಿನ್ನೆಲೆ ಅನಿವಾರ್ಯವಾಗಿ ನರೆಗಾ ಕೂಲಿಗೆ ಹೋಗಬೇಕಾಗಿದೆ. ಈಗಾಗಲೇ ಕೊರೊನಾಗೂ ಮೊದಲೇ ದೇಶದ ಆರ್ಥಿಕ ಸ್ಥಿತಿ ನೆಲಕಚ್ಚುವ ಆತಂಕ ಎದುರಿಸುತ್ತಿತ್ತು. ಇನ್ನು ಕೊರೊನಾ ವಕ್ಕರಿಸಿಕೊಂಡ ಘಳಿಗೆ ಯಿಂದ ಆರ್ಥಿಕ ಸ್ಥಿತಿ ನೆಲ ಕಚ್ಚಿಯೇ ಬಿಟ್ಟಿತು. ಇದರಿಂದಾಗಿ ಬಹಳಷ್ಟು ಕಂಪನಿಗಳು ಉದ್ಯೋಗಿಗಳನ್ನು ಕೆಲಸದಿಂದ ತೆಗೆಯುವುದು, ಸಂಬಳ ಕಡಿತ ಹೀಗೆ ಒಂದಲ್ಲ ಒಂದು ಕಾರಣದಿಂದ ಉದ್ಯೋಗಿಗಳು ಸಂಕಷ್ಟಕ್ಕೆ ಸಿಲುಕಿ ತತ್ತರಿಸಿದ್ದಾರೆ.

ಇಂಥ ಸಂಕಷ್ಟ ಕಾಲದಲ್ಲಿ ವಿದ್ಯಾವಂತ ಯುವಕರು ಸರ್ಕಾರದ ಯೋಜನೆಯನ್ನು ಸದ್ಭಳಕೆ ಮಾಡಿಕೊಳ್ಳುತ್ತಿರುವುದು ಸಂತಸದ ಸಂಗತಿ. ಎಲ್ಲ ವಿದ್ಯಾವಂತರಿಗೂ ಈ ಯುವಕರ ಕಾರ್ಯ ಮಾದರಿಯಾಗಿದೆ.

ಗ್ಯಾನೇಂದ್ರಕುಮಾರ್, ಜಿ.ಪಂ ಸಿಇಓ

ದಿನದಿಂದ ದಿನಕ್ಕೆ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಲೇ ಇದೆ. ಆದರೆ ದೇಶದ ಬೇರೆ, ಬೇರೆ ರಾಜ್ಯಗಳಲ್ಲಿ ಉನ್ನತ ಹುದ್ದೆ ಗಿಟ್ಟಿಸಿಕೊಂಡು ಬದುಕು ಕಟ್ಟಿಕೊಂಡವರು ಈಗ ಅಕ್ಷರಶ: ಬೀದಿಗೆ ಬರುವಂತಾಗಿದೆ. ಈ ಕಾರಣದಿಂದ ತಮ್ಮ ಊರುಗಳಿಗೆ ಮರಳಿದ ಉದ್ಯೋಗಿಗಳು ನರೇಗಾ ಯೋಜನೆಯಡಿ ಚೆಕ್ ಡ್ಯಾಂ, ಕೆರೆ ಹೂಳೆತ್ತುವುದು, ನಾಲೆ ಸ್ವಚ್ಛತಾ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದಾರೆ.

Leave a Reply

Your email address will not be published. Required fields are marked *

You May Also Like

ಟ್ವೀಟರ್ ನಟ ರಜನಿಕಾಂತ ಟ್ವೀಟ್ ಅಳಿಸಿ ಹಾಕಿದ್ದು ಯಾಕೆ?

ಖ್ಯಾತ ನಟ ರಜನಿಕಾಂತ್ ಮಾಡಿದ ಟ್ವೀಟ್ ನ್ನು ಸ್ವತಃ ಟ್ವೀಕರ್ ಅಳಿಸಿ ಹಾಕಿದೆ. ಅವರ ಟ್ವೀಟ್ ಜಾಗದಲ್ಲೀಗ ಟ್ವೀಟರ್ ನಿಯಮ ಉಲ್ಲಂಘಿಸಿರುವುದರಿಂದ ಈ ಟ್ವೀಟ್ ಲಭ್ಯವಿಲ್ಲ ಎಂದು ಸೂಚಿಸಿದೆ. ಟ್ವೀಟ್ ಅಳಿಸಿ ಹಾಕಲಿ ಕಾರಣ ಏನು ಗೊತ್ತೆ?

ಪ್ಲೀಸ್…..ಈ ಸಂದರ್ಭದಲ್ಲಿ ಖಾತೆ ಬದಲಾವಣೆ ಮಾಡಬೇಡಿ!

ಬೆಂಗಳೂರು : ಈ ಸಂದರ್ಭದಲ್ಲಿ ಖಾತೆ ಬದಲಾವಣೆ ಮಾಡಬೇಡಿ. ಈ ಸಂದರ್ಭದಲ್ಲಿ ಮಾಡಿದರೆ ಸಮಾಜಕ್ಕೆ ಬೇರೆ ಸಂದೇಶ ರವಾಣೆ ಮಾಡಿದಂತಗುತ್ತದೆ ಎಂದು ಆರೋಗ್ಯ ಸಚಿವ ಶ್ರೀರಾಮುಲು ಅವರ ಬೇಸರ ವ್ಯಕ್ತಪಡಿಸಿದ್ದಾರೆ.

ಕಾರ್ಮಿಕ ಮುಖಂಡ ಮಹೇಶ್ ಹಿರೇಮಠ ಆಕ್ರೋಶ: ಸರ್ಕಾರದ ಕೆಟ್ಟ ಧೋರಣೆ ನಿಲ್ಲುವವರೆಗೂ ನಮ್ಮ ಹೋರಾಟ ನಿಲ್ಲದು

ಸರ್ಕಾರದ ಕೆಟ್ಟ ಧೋರಣೆಗಳು ಎಲ್ಲಿಯವರೆಗೆ ನಡೆಯುತ್ತವೇಯೋ ಅಲ್ಲಿಯವರೆಗೆ ನಮ್ಮ ಹೋರಾಟ ನಿಲ್ಲುವದಿಲ್ಲ ನಮ್ಮ ಕಾರ್ಮಿಕ ವರ್ಗದವರು ಅನುಭವಿಸುವ ನೋವು ಸರ್ಕಾರಕ್ಕೆ ಗೊತ್ತಾಗುತ್ತಿಲ್ಲ ಎಂದು ಕಾರ್ಮಿಕ ಮುಖಂಡ ಮಹೇಶ್ ಹಿರೇಮಠ ಸರ್ಕಾರದ ವಿರುದ್ಧ ಕಿಡಿಕಾರಿದರು.

ಲಕ್ಷ್ಮೇಶ್ವರ ಪೊಲೀಸರ ಕಾರ್ಯಾಚರಣೆ: ಕುರಿ, ಮೇಕೆ ಕಳ್ಳರು ಅಂದರ್..!

ಶಿರಹಟ್ಟಿ ಮತ್ತು ಲಕ್ಷ್ಮೇಶ್ವರ ತಾಲೂಕು ವ್ಯಾಪ್ತಿಯಲ್ಲಿ ಇತ್ತೀಚಿನ ದಿನಗಳಲ್ಲಿ ಮೇಕೆ ಹಾಗೂ ಕುರಿ ಕಳ್ಳತನ ಪ್ರಕರಣಗಳು ಕಂಡು ಬಂದಿದ್ದವು. ಘಟನೆ ಗ್ರಾಮೀಣ ಭಾಗದ ಜನರ ನಿದ್ದೆಗೆಡಿಸಿತ್ತು. ಆದರೆ ಕೊನೆಗೂ ಕಳ್ಳರನ್ನು ಸೆರೆ ಹಿಡಿಯುವಲ್ಲಿ ಲಕ್ಷ್ಮೇಶ್ವರ ಪೊಲೀಸರು ಯಶಸ್ವಿಯಾಗಿದ್ದಾರೆ.