ನವದೆಹಲಿ : ಬಿಹಾರದಲ್ಲಿ ಈಗಾಗಲೇ ಮೊದಲ ಹಂತದ ಚುನಾವಣೆ ಮುಕ್ತಾಯವಾಗಿದ್ದು, ಎರಡನೇ ಹಂತದ ಚುನಾವಣೆ ಪ್ರಾರಂಭವಾಗಿದೆ.
ಬಿಹಾರದ 17 ಜಿಲ್ಲೆಗಳಲ್ಲಿನ 94 ಕ್ಷೇತ್ರಗಳಲ್ಲಿ ಎರಡನೇ ಹಂತದ ಮತದಾನ ಪ್ರಾರಂಭವಾಗಿದೆ. 2.86 ಕೋಟಿ ಮತದಾರರು 1,463 ಅಭ್ಯರ್ಥಿಗಳ ಭವಿಷ್ಯ ನಿರ್ಧರಿಸಲು ಮತದಾರರು ಮತಗಟ್ಟೆಯತ್ತ ಧಾವಿಸುತ್ತಿದ್ದಾರೆ.
ಇಂದು ನಡೆಯುತ್ತಿರುವ ಕ್ಷೇತ್ರಗಳಲ್ಲಿ ಬಿಜೆಪಿ 46 ಕ್ಷೇತ್ರಗಳಲ್ಲಿ ಹಾಗೂ ಜೆಡಿಯು 43 ಕ್ಷೇತ್ರಗಳಲ್ಲಿ ಕಣಕ್ಕೆ ಇಳಿದಿವೆ. ಇನ್ನೊಂದು ಮಿತ್ರ ಪಕ್ಷ ವಿಐಪಿ 5 ಕ್ಷೇತ್ರಗಳಲ್ಲಿ ಸ್ಪರ್ಧಿಸುತ್ತಿದೆ. ಮಹಾಘಟಬಂಧನ್ ನ ಪೈಕಿ ಆರ್ ಜೆಡಿ 56, ಕಾಂಗ್ರೆಸ್ 24 ಕ್ಷೇತ್ರಗಳಲ್ಲಿ ಸ್ಪರ್ಧಿಸುತ್ತಿದೆ. ಸಿಪಿಐಎಂಎಲ್ 6 ಕ್ಷೇತ್ರ, ಸಿಪಿಎಂ ಮತ್ತು ಸಿಪಿಐ ತಲಾ 4 ಕ್ಷೇತ್ರಗಳಲ್ಲಿ ಸ್ಪರ್ಧಿಸಿದೆ.
ಹಿರಿಯ ನಾಗರಿಕರಿಗಾಗಿ ಅಂಚೆ ಮತದಾನದ ವ್ಯವಸ್ಥೆ ಮಾಡಲಾಗಿದೆ. ಕೊರೊನಾದಿಂದ ಈ ಬಾರಿ ಒಂದು ಗಂಟೆಗಳ ಹೆಚ್ಚುವರಿ ಮತದಾನಕ್ಕೆ ಅವಕಾಶ ನೀಡಲಾಗಿದೆ. ಒಂದು ಗಂಟೆ ಅವಧಿಯಲ್ಲಿ ಕೊರೊನಾ ಸೋಂಕಿತರು ತಮ್ಮ ಹಕ್ಕು ಚಲಾಯಿಸಬಹುದು. ಸಾಮಾಜಿಕ ಅಂತರ, ಥರ್ಮಲ್ ಸ್ಕ್ರೀನಿಂಗ್, ಸ್ಯಾನಿಟೈಸರ್ ಬಳಕೆ ಕಡ್ಡಾಯವಾಗಿದೆ.
ಪ್ರತಿಪಕ್ಷಗಳ ಸಿಎಂ ಅಭ್ಯರ್ಥಿ ತೇಜಸ್ವಿ ಯಾದವ್ ರಘೋಪುರ ಕ್ಷೇತ್ರದಿಂದ ಸ್ಪರ್ಧಿಸಿದ್ದಾರೆ. 1995, 2000ರಲ್ಲಿ ಲಾಲೂ ಇಲ್ಲಿದ್ದ ಗೆದ್ದಿದ್ದರು. 2005ರಲ್ಲಿ ಲಾಲೂ ಯಾದವ್ ಪತ್ನಿ ರಾಬ್ಡಿ ದೇವಿ ಗೆದ್ದಿದ್ದರು. ಆದರೆ, 2010ರಲ್ಲಿ ರಾಬ್ಡಿ ದೇವಿ ಇಲ್ಲಿ ಸೋತಿದ್ದರು. ತೇಜಸ್ವಿ ಯಾದವ ಅವರ ಹಿರಿಯ ಸಹೋದರ ಸಮಸ್ತಿಪುರದಿಂದ ಸ್ಪರ್ಧಿಸಿದ್ದಾರೆ.