ನ್ಯೂಯಾರ್ಕ್: ಜಾಗತಿಕ ಮಟ್ಟದಲ್ಲಿ ಕೊರೊನಾ ಭಾರೀ ವಿನಾಶಕ್ಕೆ ಕಾರಣವಾಗಿದೆ. ಜಗತ್ತಿನಲ್ಲಿ ಒಟ್ಟು 4.25 ಲಕ್ಷ ಜನ ಕೊರೊನಾಗೆ ಬಲಿಯಾಗಿದ್ದಾರೆ. ಒಟ್ಟು ಕೊರೋನಾ ಸೋಂಕಿತರ ಸಂಖ್ಯೆ 76.32 ಲಕ್ಷಕ್ಕೆ ಏರಿಕೆಯಾಗಿದೆ. ಈ ಪೈಕಿ ಒಟ್ಟು 4,25,282 ಜನ ಬಲಿಯಾಗಿದ್ದು, ಸಾವಿನ ಸಂಖ್ಯೆ ಏರುಗತಿಯಲ್ಲಿದೆ.
ಯುರೋಪ್ ನಲ್ಲಿ, 1,86,843 ಜನ ಕೊರೊನ ಸೋಂಕಿಗೆ ಬಲಿಯಾಗಿದ್ದರೆ, ಸೋಂಕಿತರ ಸಂಖ್ಯೆ 23,63,538. ಲ್ಯಾಟಿನ್ ಅಮೆರಿಕದಲ್ಲಿ ಕೊರೊನಾ ಪ್ರಮಾಧ ತೀವ್ರ ಏರಿಕೆಯಾಗಿದ್ದು, 76,343 ಜನ ಬಲಿಯಾಗಿ, 15,69,938 ಜನ ಸೋಂಕಿನಿಂದ ನರಳುತ್ತಿದ್ದಾರೆ.
ಇನ್ನು ದೊಡ್ಡಣ್ಣ ಎಂದು ಎದೆ ಸೆಟೆಸಿ ನಡೆಯುತ್ತಿದ್ದ ಅಮೆರಿಕದಲ್ಲಿ ಅತಿ ಹೆಚ್ಚು ಸಾವು ಸಂಭವಿಸಿದ್ದು, 1,14,643 ಜನ ಪ್ರಾಣಬಿಟ್ಟಿದ್ದಾರೆ. ಎರಡನೇ ಸ್ಥಾನದಲ್ಲಿ ಬ್ರೆಜಿಲ್ ಇದ್ದು, ಕೊರೋನಾ ಸೋಂಕಿಗೆ ಬಲಿಯಾದವರ ಸಂಖ್ಯೆ 41,828. ಮೂರನೇ ಸ್ಥಾನ ಬ್ರಿಟನ್ ಪಾಲಾಗಿದ್ದು, 41,481 ಜನ ಜೀವ ತೆತ್ತಿದ್ದಾರೆ. ನಂತರದ ಸ್ಥಾನ ಇಟಲಿ ಪಾಲಾಗಿದ್ದು, 34,223 ಜನ ಹಾಗೂ ಫ್ರಾನ್ಸ್ ನಲ್ಲಿ 29,374 ಜನ ಬಲಿಯಾಗಿದ್ದಾರೆ.

Leave a Reply

Your email address will not be published.

You May Also Like

ಸ್ತ್ರೀಯರ ವಿವಾಹದ ಕನಿಷ್ಠ ವಯೋಮಿತಿ ಕುರಿತು ಪರಿಶೀಲಿಸುವ ಚಿಂತನೆ ನಡೆದಿದೆ : ಪ್ರಧಾನಿ ಮೋದಿ

ಧ್ವಜಾರೋಹಣ ನೆರವೇರಿಸಿದ ಪ್ರಧಾನಿ ನರೇಂದ್ರ ಮೋದಿ ಹಲವು ಯೋಜನೆಗಳನ್ನು ಘೋಷಿಸಿದರು. ಇನ್ನು ಇದೇ ವೇಳೆ ದೇಶದ…

ಬೆಂಗಳೂರಿನಲ್ಲಿ ದಂಪತಿಯ ಬರ್ಬರ ಹತ್ಯೆ

ನಗರದಲ್ಲಿ ದಂಪತಿಯ ಹತ್ಯೆ ನಡೆದಿದ್ದು, ಮಗನಿಂದಲೇ ನಡೆದಿದೆ ಎನ್ನಲಾಗಿದೆ. ಕೋಣನಕುಂಟೆ ಬಳಿಯ ಆರ್ ಬಿಐ ಲೇಔಟ್ ನಲ್ಲಿ ಈ ಘಟನೆ ನಡೆದಿದೆ. ಗೋವಿಂದಪ್ಪ(65), ಶಾಂತಮ್ಮ(55) ಕೊಲೆಯಾದ ದುರ್ದೈವಿಗಳು. ಇವರನ್ನು ಟೆಕ್ಕಿಯಾಗಿರುವ ಮಗ ನವೀನ್ ಕೊಲೆಗೈದಿರಬಹುದು ಎಂಬ ಶಂಕಿಸಲಾಗಿದೆ.

ಕೋವಿಡ್‌ ಚಿಕಿತ್ಸೆ, ಸೌಲಭ್ಯಗಳಲ್ಲಿ ಲೋಪಗಳಾದರೆ ಸಂಸ್ಥೆಯ ಮುಖ್ಯಸ್ಥರೆ ಹೊಣೆ: ಸಚಿವ ಸುಧಾಕರ್

ಬೆಂಗಳೂರು: ಕೋವಿಡ್‌ ರೋಗಿಗಳಿಗೆ ಚಿಕಿತ್ಸೆ ಮತ್ತು ಸೌಲಭ್ಯಗಳನ್ನು ನೀಡುವ ವಿಷಯದಲ್ಲಿ ಲೋಪ ಅಥವಾ ದೂರುಗಳು ಕಂಡುಬಂದಲ್ಲಿ…