ಫೋರ್ಬೆಸ್ ಗಂಜ್ : ಬಿಹಾರ ವಿಧಾನಸಭಾ ಚುನಾವಣೆಯ ಎರಡನೇ ಹಂತದ ಮತದಾನ ಶಾಂತಿಯಿಂದ ನಡೆದಿದ್ದು, ದೇಶದ ಜನತೆಯನ್ನು ಪ್ರಧಾನಿ ಮೋದಿ ಶ್ಲಾಘಿಸಿದ್ದಾರೆ.

ಸಾಂಕ್ರಾಮಿಕ ರೋಗದ ಮಧ್ಯೆಯೂ ಜನರು ತೆರಳಿ ಮತದಾನ ಮಾಡಿದ್ದು, ಶ್ಲಾಘನೀಯ ವಿಷಯ ಎಂದು ಮೋದಿ ಬಣ್ಣಿಸಿದ್ದಾರೆ. 

ಬಿಹಾರದಲ್ಲಿ ಚುನಾವಣಾ ಸಮಾವೇಶದಲ್ಲಿ ಮಾತನಾಡಿದ ಅವರು, ಬಿಹಾರ ನಮ್ಮ ದೇಶ ಮಾತ್ರವಲ್ಲ, ಇಡೀ ಜಗತ್ತಿಗೆ ಸಂದೇಶ ಸಾರುತ್ತಿದೆ. ಕೊರೊನಾ ಸಂಕಷ್ಟದ ಸಂದರ್ಭದಲ್ಲಿ ಜನರು ಮತ ಚಲಾಯಿಸಲು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿದ್ದಾರೆ. ಇದು ಪ್ರಜಾಪ್ರಭುತ್ವದ ಶಕ್ತಿ ಮತ್ತು ಇದು ಪ್ರತಿ ಬಿಹಾರಿಯ ಭಕ್ತಿ ಎಂದು ಹಾಡಿ ಹೊಗಳಿದ್ದಾರೆ. 

ಚುನಾವಣೆಗಳು ಪ್ರಜಾಪ್ರಭುತ್ವದ ಹಬ್ಬ ಇದ್ದಂತೆ. ಮತದಾನದ ದಿನವನ್ನು ಪ್ರತಿಯೊಬ್ಬ ಭಾರತೀಯಯನೂ ಯಶಸ್ವಿಗೊಳಿಸಬೇಕು. ಮತದಾನದ ವೇಳೆ ಮುಖಗವಸು ಕಡ್ಡಾಯವಾಗಿ ಧರಿಸುವುದು ಮತ್ತು ವ್ಯಕ್ತಿಗತ ಅಂತರ ಕಾಪಾಡಿಕೊಳ್ಳುವುದನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಹೇಳಿದ್ದಾರೆ.

Leave a Reply

Your email address will not be published. Required fields are marked *

You May Also Like

ತೀವ್ರಗತಿಯಲ್ಲಿಯೇ ಏರುತ್ತಿದೆ ಸೋಂಕು!!

ಮಹಾಮಾರಿ ಕೊರೊನಾಗೆ ದೇಶದಲ್ಲಿ ದಿನದಿಂದ ದಿನಕ್ಕೆ ಬಲಿಯಾಗುತ್ತಿರುವವರ ಸಂಖ್ಯೆ ಏರಿಕೆಯಾಗುತ್ತಿದೆ.

ಉಪ ಚುನಾವಣೆ – ಹಲವೆಡೆ ಮುನ್ನಡೆ ಸಾಧಿಸುತ್ತಿರುವ ಬಿಜೆಪಿ!

ನವದೆಹಲಿ : ರಾಜರಾಜೇಶ್ವರಿ ನಗರ, ಶಿರಾ ಉಪಚುನಾವಣೆಯಲ್ಲಿ ಬಿಜೆಪಿ ಮುನ್ನಡೆ ಸಾಧಿಸಿದೆ.

ವಿಶ್ವ ಬ್ಯಾಂಕ್ ನಿಂದ ದೇಶಕ್ಕೆ 1 ಬಿಲಿಯನ್ ಯುಎಸ್ಡಿ ಡಾಲರ್ ನೆರವು

ಭಾರತ ಸರ್ಕಾರದ ಹಲವು ಯೋಜನೆಗಳನ್ನು ಪರಾಮರ್ಶಿಸಿ ಕೊರೋನಾ ಸಂಕಷ್ಟ ಕಾಲದಲ್ಲಿ ಇದೀಗ ವಿಶ್ವ ಬ್ಯಾಂಕ್ ಭಾರತದ ನೆರವಿಗೆ ಧಾವಿಸಿದೆ.

ರಾಜ್ಯಕ್ಕೆ ಬರುವ ಯಾತ್ರಿಗಳಿಗೆ ಮಾರ್ಗಸೂಚಿ ಜಾರಿ

ಮಹಾರಾಷ್ಟ್ರ ಮತ್ತು ಕೇರಳದಲ್ಲಿ ಹೆಚ್ಚುತ್ತಿರುವ ಪ್ರಕರಣಗಳಿಂದಾಗಿ, ಈ ರಾಜ್ಯಗಳಿಂದ ಬರುವ ಜನರು ನೆಗೆಟಿವ್ ಆರ್ಟಿ-ಪಿಸಿಆರ್ ಪ್ರಮಾಣಪತ್ರವನ್ನು ಕರ್ನಾಟಕ ಕಡ್ಡಾಯಗೊಳಿಸಿದೆ.