ನವದೆಹಲಿ: ಭಾರತ ಸರ್ಕಾರದ ಹಲವು ಯೋಜನೆಗಳನ್ನು ಪರಾಮರ್ಶಿಸಿ ಕೊರೋನಾ ಸಂಕಷ್ಟ ಕಾಲದಲ್ಲಿ ಇದೀಗ ವಿಶ್ವ ಬ್ಯಾಂಕ್ ಭಾರತದ ನೆರವಿಗೆ ಧಾವಿಸಿದೆ.
1 ಬಿಲಿಯನ್ ಯುಎಸ್ ಡಿ ಡಾಲರ್ ಹಣಕಾಸಿನ ನೆರವಿಗೆ ವಿಶ್ವ ಬ್ಯಾಂಕ್ ಮುಂದಾಗಿದೆ. ಈಗಾಗಲೇ ಮೊದಲೇ ಆರ್ಥಿಕ ಮುಗ್ಗಟ್ಟಿನಿಂದ ಬಳಲುತ್ತಿದ್ದ ಭಾರತ ಕೊರೋನಾ ಸೋಂಕಿನಿಂದಾಗಿ ಮತ್ತಷ್ಟು ಆರ್ಥಿಕ ಸಂಕಷ್ಟಕ್ಕೀಡಾಗಿತ್ತು. ಈ ಮದ್ಯೆ ಇದೀಗ ಭಾರತದ ಸಾಮಾಜಿಕ ಸುರಕ್ಷತಾ ಯೋಜನೆಗಳಿಗಾಗಿ ವಿಶ್ವ ಬ್ಯಾಂಕ್ ನೆರವಿಗೆ ಮುಂದಾಗಿದೆ.