ನವದೆಹಲಿ: ಮಹಾಮಾರಿ ಕೊರೊನಾಗೆ ದೇಶದಲ್ಲಿ ದಿನದಿಂದ ದಿನಕ್ಕೆ ಬಲಿಯಾಗುತ್ತಿರುವವರ ಸಂಖ್ಯೆ ಏರಿಕೆಯಾಗುತ್ತಿದೆ.

ವಿಶ್ವದಲ್ಲಿನ ವಿವಿಧ ರಾಷ್ಟ್ರಗಳಲ್ಲಿಯೂ ಹೆಮ್ಮಾರಿಯ ಆಟ ನಿಂತಿಲ್ಲ. ಈ ಮಹಾಮಾರಿಯ ನಿಯಂತ್ರಣ ಇನ್ನೂ ಸಾಧ್ಯವಾಗುತ್ತಿಲ್ಲ. ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ 3,604 ಜನರಿಗೆ ಸೋಂಕು ತಗುಲಿದ್ದು, ಇಲ್ಲಿಯವರೆಗೆ ಒಟ್ಟು ಸೋಂಕಿತರ ಸಂಖ್ಯೆ 70,756ಕ್ಕೆ ಏರಿಕೆ ಕಂಡಿದೆ.

24 ಗಂಟೆಗಳಲ್ಲಿ 87 ಜನರು ಸೋಂಕಿಗೆ ಬಲಿಯಾಗಿದ್ದಾರೆ. ಈ ನಿಟ್ಟಿನಲ್ಲಿ ಸೋಂಕಿನಿಂದ ಬಲಿಯಾದವರ ಸಂಖ್ಯೆ 2,293ಕ್ಕೆ ಏರಿಕೆ ಕಂಡಿದೆ.

ಸೋಮವಾರಕ್ಕಿಂತಲೂ ಇಂದು ಸೋಂಕಿತರ ಪತ್ತೆ ಸಂಖ್ಯೆ ಕಡಿಮೆಯಾಗಿದೆ. ನಿನ್ನೆ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ನೀಡಿದ್ದ ಮಾಹಿತಿ ಪ್ರಕಾರ 24 ಗಂಟೆಗಳಲ್ಲಿ 4,213 ಜನರಿಗೆ ಸೋಂಕು ತಗುಲಿತ್ತು. ಅಲ್ಲದೇ, 97 ಜನರು ಬಲಿಯಾಗಿದ್ದರು.

Leave a Reply

Your email address will not be published.

You May Also Like

ಗದಗ ನಗರದ ಹುಡ್ಕೋ ಕಾಲನಿ ಕಂಟೇನ್ಮೆಂಟ್ ಝೋನ್ ಘೋಷಣೆ

ಇಲ್ಲಿನ ವಾರ್ಡ 35ರ ಹುಡ್ಕೋ ಕಾಲನಿ 2ನೇ ಕ್ರಾಸ್ ಇದರ ಸುತ್ತಲಿನ 100 ಮೀ. ಪ್ರದೇಶವನ್ನು ತಕ್ಷಣದಿಂದ ಕೊವಿಡ್-19 ಸೋಂಕು ನಿಯಂತ್ರಿತ (ಕಂಟೇನ್ಮೆಂಟ) ಪ್ರದೇಶವೆಂದು

ರಾಜ್ಯದ 2 ಜಿಲ್ಲೆಗಳು ಸೇರಿದಂತೆ ದೇಶದ 25 ಜಿಲ್ಲೆಗಳಲ್ಲಿಯೇ ಮಹಾಮಾರಿಗೆ ಬಲಿಯಾದವರ ಪ್ರಮಾಣ ಶೇ. 48ರಷ್ಟು!

ನವದೆಹಲಿ : ದೇಶದಲ್ಲಿ ಆರಂಭದಲ್ಲಿ ಕೊರೊನಾ ಅಟ್ಟಾಹಸವನ್ನು ಕಟ್ಟಿ ಹಾಕಿದ್ದರೂ ಆ ನಂತರ ಅದು ತನ್ನ ವ್ಯಾಪ್ತಿ ಮೀರುತ್ತಿದೆ. ಹೀಗಾಗಿ ದಿನದಿಂದ ದಿನಕ್ಕೆ ಸೋಂಕಿತರ ಸಂಖ್ಯೆ ಏರಿಕೆಯಾಗುತ್ತಿದೆ.

ನಟ ಸಲ್ಮಾನ್ ಖಾನ್ ಈ ರೀತಿ ಮಾಡಿದ್ದು ಸತ್ಯವೇ? ಸರಿಯೇ?

ಮುಂಬಯಿ : ಕೊರೊನಾದ ಅಬ್ಬರದ ನಡುವೆ ಬಾಲಿವುಡ್ ನ ಒಂದೊಂದೆ ಮುಖಗಳು ಅನಾವರಣಕ್ಕೆ ಬರುತ್ತಿವೆ. ಯುವ ನಟ ಸುಶಾಂತ್‌ ಸಿಂಗ್‌ ರಜಪೂತ್‌ ನಿಧನದ ನಂತರ ಅನೇಕ ಸತ್ಯಗಳು ಹೊರ ಬರುತ್ತಿವೆ. ಪಕ್ಷಪಾತ, ಗುಂಪುಗಾರಿಕೆ, ಕೀಳು ರಾಜಕೀಯದ ಕುರಿತು ದೊಡ್ಡ ಮಟ್ಟದಲ್ಲಿ ಚರ್ಚೆ ಆಗುತ್ತಿದೆ.

ಗದಗ ಜಿಲ್ಲೆಯಲ್ಲಿ ಸೋಂಕಿನ ಏಕ್-ದಮ್ ನೆಗೆತ: ಯಾವ ಊರಲ್ಲಿ ಎಷ್ಟು?

ಗದಗ ಜಿಲ್ಲೆಯ ಮಟ್ಟಿಗೆ ಈ ಹಿಂದೆ ಒಂದೇ ದಿನ 24 ಪಾಸಿಟಿವ್ ಪ್ರಕರಣ ದೃಢಪಟ್ಟಿದ್ದು ಗರಿಷ್ಠ…