ಮುಂಬಯಿ: ತಾವು ಇಟ್ಟ ಹಣಕ್ಕೆ ಬಡ್ಡಿಯಾದರೂ ಸಿಗುತ್ತೆ ಎನ್ನುವ ಕಾರಣಕ್ಕೆ ಬಹುತೇಕರು ಬ್ಯಾಂಕಿನಲ್ಲಿ ಹಣ ಠೇವಣಿ ಇಡುವುದು ಸಹಜ. ಆದರೆ ಸ್ಟೇಟ್ ಬ್ಯಾಂಕ್ ಆಪ್ ಇಂಡಿಯಾ ಡೆಪಾಸಿಟ್ ಮೇಲಿನ ಬಡ್ಡಿ ಹಣವನ್ನೇ ಇಳಿಕೆ ಮಾಡಿದೆ. ಈ ಮೂಲಕ ಠೇವಣಿದಾರರಿಗೆ ಎಸ್.ಬಿ.ಐ ಆಘಾತ ನೀಡಿದೆ. ಇನ್ನು ಎಸ್.ಬಿ.ಐನ ಈ ನಿರ್ಧಾರವನ್ನೇ ಉಳಿದ ಬ್ಯಾಂಕ್ ಗಳು ಕೂಡ ಪಾಲಿಸುವ ಸಾದ್ಯತೆ ಇದೆ ಎನ್ನಲಾಗುತ್ತಿದೆ.

ರಿಸರ್ವ್ ಬ್ಯಾಂಕ್ ರೆಪೊ ದರಗಳನ್ನು ಕಡಿತ ಮಾಡಿದ ಬೆನ್ನಲ್ಲಿಯೇ ಎಸ್.ಬಿ.ಐ ಕೂಡ ಈ ನಿರ್ಧಾರ ಕೈಗೊಂಡಿದೆ. ಎಲ್ಲ ಬಗೆಯ ಠೇವಣಿಗಳ ಮೇಲಿನ ಬಡ್ಡಿಯನ್ನು ಶೇ.4ರಷ್ಟು ಇಳಿಕೆ ಮಾಡಿದೆ. ಹೊಸ ಬಡ್ಡಿ ದರ ಬುಧವಾರದಿಂದಲೇ ಜಾರಿಗೆ ಬಂದಿದೆ. ಹೊಸ ಠೇವಣಿ ಹಾಗೂ ನವೀಕರಣಗೊಳ್ಳುವ ಠೇವಣಿಗಳಿಗೆ ಹೊಸ ದರವೇ ಅನ್ವಯವಾಗಲಿದೆಯಂತೆ. ಶೇ. 7.75 ಬಡ್ಡಿ ನೀಡುತ್ತಿದ್ದ ಆರ್.ಬಿ.ಐನ ಸಣ್ಣ ಉಳಿತಾಯ ಯೋಜನೆಯನ್ನು ಸರಕಾರ ಸ್ಥಗಿತಗೊಳಿಸಿದ ಬೆನ್ನಲ್ಲಿಯೇ ಈಗ ಎಸ್.ಬಿ.ಐ ಈ ಕ್ರಮಕ್ಕೆ ಮುಂದಾಗಿದೆ. ಏಳು ದಿನಗಳ ಕನಿಷ್ಟ ಅವಧಿಯ ಠೇವಣಿ ಮೇಲೆ ಈವರೆಗೆ ಶೇ. 3.3 ಬಡ್ಡಿ ಸಿಗುತ್ತಿತ್ತು. ಆದರೆ ಇದೀಗ ಶೇ. 2.9ರ ಬಡ್ಡಿ ಹಣ ಸಿಗಲಿದೆ.

ಮೇ.12ರಂದು ಮೊದಲ ಕಂತಿನಲ್ಲಿ ಠೇವಣಿ ಮೇಲಿನ ಬಡ್ಡಿ ದರ ಇಳಿಕೆ ಮಾಡಲಾಗಿತ್ತು. ಈ ಮೂಲಕ ತಿಂಗಳಲ್ಲಿ ಎರಡನೇ ಬಾರಿ ಎಸ್.ಬಿ.ಐ ಠೇವಣಿ ಮೇಲಿನ ಬಡ್ಡಿ ದರ ಇಳಿಕೆ ಮಾಡಿದಂತಾಗಿದೆ.

Leave a Reply

Your email address will not be published.

You May Also Like

ರೈಲು ಹಳಿ ದುರಂತ: 16 ಸಾವು

ಮಹಾರಾಷ್ಟ್ರ:ನಿನ್ನೆಯಷ್ಟೆ ವಿಶಾಖಪಟ್ಟಣ ದುರಂತದ ಬೆನ್ನಲ್ಲೆ ಇಂದು ಔರಂಗಾಬಾದ್ ಪ್ರಕರಣ ಜನರನ್ನು ಬೆಚ್ಚಿ ಬೀಳಿಸಿದೆ. ಔರಂಗಾಬಾದ್ ರೈಲು…

ಕೋವಿಡ್ ಬಾಧಿತ ಮಕ್ಕಳಿಗೆ ಕವಾಸಾಕಿ ಕಾಯಿಲೆ ಕಾಟ :ಏನಿದು ಕಾಯಿಲೆ? ಲಕ್ಷಣಗಳೇನು?

ಕೋವಿಡ್ ಬಾಧಿತ ಎಲ್ಲ ಮಕ್ಕಳಲ್ಲೂ ಇದು ಕಂಡು ಬಂದಿಲ್ಲವಾದರೂ, ಭಾರತ ಸೇರಿ ವಿಶ್ವಾದ್ಯಂತ ಹಲವಾರು ಪ್ರಕರಣಗಳು ವರದಿಯಾಗಿವೆ.ಕೋವಿಡ್ ಬಾಧಿತ ಮಕ್ಕಳಲ್ಲಿ, ಸೋಂಕಿಗೆ ಒಳಗಾದ 2-3 ವಾರಕ್ಕೆ

ಕೊರೋನಾ ಕಾವ್ಯ-2

ಶಿಕ್ಷಕಿ ಶಿಲ್ಪಾ ಮ್ಯಾಗೇರಿ. ಹವ್ಯಾಸ ಬರಹದ ಮೂಲಕ ಕಾವ್ಯ ಕಟ್ಟುವ ಕಸೂತಿಯನ್ನು ಕರಗತ ಮಾಡಿಕೊಂಡ ಶಿಕ್ಷಕಿ ಶಿಲ್ಪಾ ಎಮ್.ಎ, ಬಿಇಡಿ ಪದವಿ ಪಡೆದಿದ್ದಾರೆ. ಇವರು ಭಾರತಾಂಬೆ ಕವನ ಸಂಕಲನದ ಮೂಲಕ ಸಾಹಿತ್ಯ ಕ್ಷೇತ್ರಕ್ಕೆ ಪ್ರವೇಶ ಪಡೆದರು. ಮಾತು ಮೌನದ ನಡುವೆ ಕವನ ಸಂಕಲನ ಹಾಗೂ ಆಕಾಶಕ್ಕೊಂದು ಏಣಿ ಚುಟುಕು ಸಂಕಲನ ಇವರ ಇನ್ನೆರಡು ಸಂಕಲನಗಳು. ಬೆಳಗಾವಿಯ ಹೊಂಬೆಳಕು ಸಾಂಸ್ಕೃತಿಕ ಸಂಘ ನೀಡುವ ರಾಷ್ಟ್ರ ಕೂಟ ಸಾಹಿತ್ಯಶ್ರೀ ಪ್ರಶಸ್ತಿಗೆ ಬಾಜನರಾಗಿದ್ದಾರೆ.