ಬೆಂಗಳೂರು : ರಾಜ್ಯದಲ್ಲಿ ಸದ್ಯ ಕಾರ್ಯನಿರ್ವಹಿಸುತ್ತಿರುವ ಪೊಲೀಸರ ಪೈಕಿ ಶೇ. 11ರಷ್ಟು ಸಿಬ್ಬಂದಿಗೆ ಸೋಂಕು ತಗುಲಿದ್ದು, ಈ ಪೈಕಿ 87 ಜನ ಬಲಿಯಾಗಿದ್ದಾರೆ.

ರಾಜ್ಯದಲ್ಲಿ 80 ಸಾವಿರ ಜನ ಪೊಲೀಸರು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಈ ಪೈಕಿ ಶೇ. 11ರಷ್ಟು ಜನ ವೈರಸ್ ಗೆ ತುತ್ತಾಗಿದ್ದರು. ನ. 2ರ ವರೆಗೂ 9,348 ಪೊಲೀಸರಿಗೆ ಸೋಂಕು ತಗುಲಿದ್ದು, ಇದರಲ್ಲಿ ಈಗಾಗಲೇ 8,052 ಜನ ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಗಳಿಂದ ಬಿಡುಗಡೆಯಾಗಿದ್ದಾರೆ. 

ಬೆಂಗಳೂರು ನಗರದಲ್ಲಿ ಇಲ್ಲಿಯವರೆಗೆ 2,904 ಜನ ಪೊಲೀಸ್ ಸಿಬ್ಬಂದಿಗೆ ಸೋಂಕು ದೃಢಪಟ್ಟಿದ್ದು, ಇದರಲ್ಲಿ ಇಲ್ಲಿಯವರೆಗೆ 2,432 ಜನ ಚೇತರಿಸಿಕೊಂಡಿದ್ದಾರೆ. ಅಲ್ಲದೆ, 31 ಸಿಬ್ಬಂದಿ ಮಹಾಮಾರಿಗೆ ಬಲಿಯಾಗಿದ್ದಾರೆ. 

ಈ ನಡುವೆ ಕರ್ತವ್ಯದ ವೇಳೆ ಸೋಂಕು ತಗುಲಿ ಮೃತಪಟ್ಟಿರುವ 84 ಜನ ಪೊಲೀಸ್ ಸಿಬ್ಬಂದಿಗಳಿಗೆ ರಾಜ್ಯ ಸರ್ಕಾರ ರೂ. 30 ಲಕ್ಷ ಪರಿಹಾರ ನೀಡಲಾಗಿದೆ. ಮೂವರು ಪೊಲೀಸರು ಇತ್ತೀಚೆಗಷ್ಟೇ ಸಾವನ್ನಪ್ಪಿದ್ದು, ಮೃತ ಪೊಲೀಸರ ಕುಟುಂಬಸ್ಥರಿಗೂ ಶೀಘ್ರದಲ್ಲಿಯೇ ಪರಿಹಾರ ನೀಡಲಾಗುತ್ತದೆ. ಇದಲ್ಲದೆ, ಮೃತ ಪೊಲೀಸರ ಕುಟುಂಬದ ಒಬ್ಬ ಸದಸ್ಯರಿಗೆ ಸರ್ಕಾರಿ ಉದ್ಯೋಗವನ್ನು ನೀಡಲಾಗುತ್ತದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. 

ಇತ್ತೀಚಿನ ದಿನಗಳಲ್ಲಿ ಪೊಲೀಸರಿಗೂ ಸೋಂಕು ತಗುಲುವ ಸಂಖ್ಯೆ ಕಡಿಮೆಯಾಗುತ್ತಿದೆ. ಜುಲೈ ಹಾಗೂ ಆಗಸ್ಟ್ ತಿಂಗಳಿನಲ್ಲಿ ಪ್ರತಿ ನಿತ್ಯ 20 ರಿಂದ 30 ಜನರಲ್ಲಿ ಸೋಂಕು ಕಾಣಿಸಿಕೊಳ್ಳುತ್ತಿತ್ತು. ಆದರೆ, ಈ ಸಂಖ್ಯೆ ಒಂದಂಕಿಗೆ ಬಂದು ನಿಂತಿದೆ.

Leave a Reply

Your email address will not be published. Required fields are marked *

You May Also Like

ಕಳ್ಳಬಟ್ಟಿ ಸಾರಾಯಿ ಮಾರಾಟ ಆರೋಪ ಮಲ್ಲಸಮುದ್ರ ಬಳಿ ಓರ್ವನ ಬಂಧನ

ಕಳ್ಳಭಟ್ಟಿ ಸಾರಾಯಿ ಮಾರಾಟ ಮಾಡುತ್ತಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಲಾಕ್ ಡೌನ್ ಸಮಯವನ್ನೇ ಬಂಡವಾಳ ಮಾಡಿಕೊಂಡು ಕಳ್ಳಭಟ್ಟಿ ಮಾರುತ್ತಿದ್ದ ಆರೋಪಿ ಬಂಧಿಸಿದ್ದಾರೆ.

ನರೆಗಲ್ ಗಾರ್ಡನ್ ಕಥೆ: ಅಭಿವೃದ್ಧಿ ಹೆಸರಲ್ಲಿ ಹಣ ಲೂಟಿ?

ಗದಗ: ಪಟ್ಟಣ ಪಂಚಾಯತಿ ಕಾಂಪೌಂಡ್ ಪಕ್ಕದಲ್ಲಿಯೇ ಉದ್ಯಾನವನ ಇದ್ದರು. ಸಹ ಇಲ್ಲಿನ ಮುಖ್ಯಾಧಿಕಾರಿ , ಸಿಬ್ಬಂದಿಗಳ…

ಆಲಮಟ್ಟಿ ರಮ್ಯ ನೋಟಕ್ಕೆ ರಾಜ್ಯಪಾಲರು ಫಿದಾ..!

ಉತ್ತರಪ್ರಭಆಲಮಟ್ಟಿ: (ವಿಜಯಪುರ ಜಿಲ್ಲೆ) ಮೊಟ್ಟಮೊದಲ ಬಾರಿಗೆ ಬಯಲುನಾಡಿನ ಪ್ರಾಕೃತಿಕ ತಾಣದಲ್ಲಿ ರಾಜ್ಯದ ರಾಜ್ಯಪಾಲರ ದಿವ್ಯ ದರ್ಶನ…