ಬೆಂಗಳೂರು: 2021-21ನೇ ಸಾಲಿನ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕರ ವರ್ಗಾವಣೆಯನ್ನು ಗಣಕೀಕೃತ ಕೌನ್ಸಲಿಂಗ್ ಮೂಲಕ ನಡೆಸಲಾಗುತ್ತಿದೆ.

ಈ ಪ್ರಕ್ರಿಯೇಯನ್ನು ಪ್ರಾರಂಭಿಸಲು ಪೂರ್ವಭಾವಿಯಾಗಿ ಶಿಕ್ಷಕರ ವರ್ಗಾವಣೆ ತಂತ್ರಾಂಶದ ಪ್ರಾತ್ಯೆಕ್ಷಿಕೆ, ಶಾಲೆಗಳಲ್ಲಿ ಹುದ್ದೆಗಳ ಮಂಜೂರಾತಿ ವಿವರ, ಕಾರ್ಯ ನಿರ್ವಹಿಸುತ್ತಿರುವ ಶಿಕ್ಷಕರ ಮಾಹಿತಿ ಹಾಗೂ ಕಾರ್ಯ ನಿರ್ವಹಿಸುತ್ತಿರುವ ಶಿಕ್ಷಕರ ಮಾಹಿತಿ ಪರಿಶೀಲನೆ, ಮತ್ತು ಶಿಕ್ಷಕರ ಸೇವಾ ವಿವರ ಪರಿಶೀಲಿಸಿ ದೃಢಿಕರಿಸುವ ಬಗ್ಗೆ ಡಿಡಿಒ ಅವರಿಂದ ಮಾಹಿತಿ ಪಡೆಯುವ ಕುರಿತು ಆನ್ ಲೈನ್ ಮೂಲಕ ವಿಡಿಯೋ ಕಾನ್ಫರೆನ್ಸ್ ಸಭೆ ಕರೆಯಲಾಗಿದೆ.

ಸಭೆಯ ವೇಳಾಪಟ್ಟಿ

ಬೆಂಗಳೂರು ವಿಭಾಗದಲ್ಲಿ 03-11-2020 ರಂದು ಮದ್ಯಾಹ್ನ 3 ಗಂಟೆಯಿಂದ 5 ಗಂಟೆಯವರೆಗೆ ನಡೆಯಲಿದೆ. ಮೈಸೂರು ವಿಭಾಗ 04-11-2020 ರಂದು ಬೆಳಿಗ್ಗೆ 11 ಗಂಟೆಯಿಂದ ಮದ್ಯಾಹ್ನ 1 ಗಂಟೆವರೆಗೆ ಬೆಳಗಾವಿ ವಿಭಾಗ 04-11-2020 ರಂದು ಮದ್ಯಾಹ್ನ 3 ಗಂಟೆಯಿಂದ 5 ಗಂಟೆವರೆಗೆ ಹಾಗೂ ಕಲಬುರಗಿ ವಿಭಾಗ 05-11-2020 ಬೆಳಿಗ್ಗೆ 11 ಗಂಟೆಯಿಂದ 1 ಗಂಟೆವರೆಗೆ ಉರ್ದು ಮತ್ತು ಭಾಷಾ ಅಲ್ಪಸಂಖ್ಯಾತ ಶಾಲೆಗಳ ನಿರ್ದೇಶನಾಲಯದ ನಿರ್ದೇಶಕರು ತಿಳಿಸಿದ್ದಾರೆ.

 

Leave a Reply

Your email address will not be published. Required fields are marked *

You May Also Like

ಗದಗ ಜಿಲ್ಲೆಯಲ್ಲಿ ಶರವೇಗದಲ್ಲಿ ಸೋಂಕು: ಇಂದು 72 ಕೊರೊನಾ ಪಾಸಿಟಿವ್!

ಗದಗ: ಜಿಲ್ಲೆಯಲ್ಲಿಂದು 72 ಕೊರೊನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ಈ ಮೂಲಕ ಒಟ್ಟು ಈವರೆಗೆ 774…

ಮುಂಬೈ ಎಕ್ಸಪ್ರೆಸ್ ನಲ್ಲಿ ಬಂದಿಳಿದರು 124 ಜನ..!

ಮುಂಬೈನಲ್ಲಿದ್ದ ಜನರು ಇಂದು ಮುಂಬೈ-ಗದಗ ಎಕ್ಸಪ್ರೆಸ್ ರೈಲಿನ ಮೂಲಕ ಗದಗ ನಗರಕ್ಕೆ ಆಗಮಿಸಿದರು. ಇದರಲ್ಲಿ 124 ಜನರು ರೈಲಿನ ಮೂಲಕ ನಗರಕ್ಕೆ ಆಗಮಿಸಿದರು.

ಗದಗ ಕ ಸಾ ಪ ಚುಣಾವಣೆಯ ವಿವರ : ಅಧ್ಯಕ್ಷರಾಗಿ ವಿವೇಕಾನಂದಗೌಡ ಪಾಟೀಲ

ಈ ಚುಣಾವಣಾ ಸ್ಪರ್ಧೆಯಲ್ಲಿ ಇದೆ ಮೊದಲ ಬಾರಿಗೆ ಒಟ್ಟು 2231 ಮತಗಳನ್ನು ಪಡೆಯುವದರ ಮುಲಕ ಗದಗ ಜಿಲ್ಲೆಯ ನರಗುಂದ, ನರೇಗಲ್ , ಲಕ್ಷ್ಮೇಶ್ವರ, ರೋಣ, ಗಜೇಂದ್ರಗಡ, ಮುಂಡರಗಿಯಲ್ಲಿ ಕೊನೆಯ ಹಂತದವರೆಗೂ ಮುನ್ನಡೆ ಕಾಯ್ದುಕೊಂಡಿದ್ದ  ವಿವೇಕಾನಂದಗೌಡ  ಪಾಟೀಲರು, ಹೊಳೆಆಲೂರ, ಶಿರಹಟ್ಟಿಯಲ್ಲಿ ಅಲ್ಪ ಹಿನ್ನಡೆ ಅನುಭವಿಸಿ, ಕ ಸಾ ಪ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.