ಮಂಡ್ಯ : ಮನೆಯವರ ನಿರಂತರ ದೌರ್ಜನ್ಯಕ್ಕೆ ಬೇಸತ್ತ ಸೊಸೆಯೊಬ್ಬರು ಪತಿ, ಮಾವ ಹಾಗೂ ಅತ್ತೆಯನ್ನು ರಾಡ್ ನಿಂದ ಹೊಡೆದು ಕೊಲೆ ಮಾಡಿರುವ ಘಟನೆ ನಡೆದಿದೆ.
ಈ ಘಟನೆ ಜಿಲ್ಲೆಯ ಕೆ.ಆರ್. ಪೇಟೆಯಲ್ಲಿ ನಡೆದಿದೆ. ಕೌಟುಂಬಿಕ ಕಲಹದಿಂದ ಬೇಸತ್ತ ಮಹಿಳೆಯೊಬ್ಬರು ಮೂವರನ್ನೂ ಕೊಲೆ ಮಾಡಿದ್ದಾರೆ. ಈ ಘಟನೆ ಒಂದು ವಾರದ ಹಿಂದೆಯೇ ನಡೆದಿದೆ. ಆದರೆ, ಗಾಯಾಳುಗಳು ನಿನ್ನೆ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.
ಹೆಮ್ಮಡಹಳ್ಳಿಯ ನಿವಾಸಿ, ಮಹಿಳೆಯ ಪತಿ ನಾಗರಾಜು (50), ಮಾವ ವೆಂಕಟೇಗೌಡ(70) ಹಾಗೂ ಅತ್ತೆ ಕುಳ್ಳಮ್ಮ (60) ಕೊಲೆಯಾದವರು. ಆರೋಪಿತ ಮಹಿಳೆ ನಾಗಮಣಿ ಎಂಬುವವರನ್ನು ಪೊಲೀಸರು ಬಂಧಿಸಿದ್ದು, ತನಿಖೆ ಕೈಗೊಂಡಿದ್ದಾರೆ.
