ಲಕ್ನೋ : ಪತ್ನಿಯ ಅನೈತಿಕ ಸಂಬಂಧಕ್ಕೆ ಬೇಸತ್ತ ಪತಿ, ತನ್ನ ಅಣ್ಣನನ್ನೇ ಕೊಲೆ ಮಾಡಿದ್ದ ಪ್ರಕರಣವನ್ನು ಪೊಲೀಸರು ಬೇಧಿಸಿದ್ದಾರೆ.

ಕಳೆದ ಎರಡು ತಿಂಗಳ ಹಿಂದೆ ಉತ್ತರ ಪ್ರದೇಶದ ಚಂದೌಲಿಯ ಧುರಿ ಕೋಟ್ ಗ್ರಾಮದ ಹತ್ತಿರ ರಾಕೇಶ್ ರೋಶನ್ ಎಂಬುವವರ ಮೃತ ದೇಹ ಪತ್ತೆಯಾಗಿತ್ತು. ತನಿಖೆ ಕೈಗೊಂಡಿದ್ದ ಪೊಲೀಸರು ಕೊಲೆಯ ರಹಸ್ಯ ಬಯಲಿಗೆ ತಂದಿದ್ದಾರೆ. ಅಲ್ಲದೇ, ಅ. 29ರಂದು ಎನ್‍ ಕೌಂಟರ್ ಪ್ರಕರಣದಲ್ಲಿ ಅಶುತೋಷ್ ಯಾದವ್ ಎಂಬ ಆರೋಪಿಯನ್ನು ಪೊಲೀಸರು ಬಂಧಿಸಿದ್ದರು.

ಈ ಸಂದರ್ಭದಲ್ಲಿ ಬಂಧಿಯಾಗಿರುವ ಆಶುತೋಷ್, ಕೊಲೆಯ ಕಥೆಯನ್ನು ಪೊಲೀಸರಿಗೆ ತಿಳಿಸಿದ್ದಾನೆ. ಮುಖೇಶ್ ಯಾದವ್ ಎಂಬ ವ್ಯಕ್ತಿಯೇ ರಾಕೇಶ್ ನನ್ನು ಕೊಲೆ ಮಾಡಿದ್ದು ಎಂಬುವುದು ತಿಳಿದಿದೆ. ಅದಕ್ಕೆ ನಾನು ಕೂಡ ಸಾಥ್ ನೀಡಿದ್ದೇನೆ ಎಂದು  ಹೇಳಿದ್ದಾನೆ. ಈ ಹೇಳಿಕೆ ಆಧರಿಸಿ ಪೊಲೀಸರು, ಮುಖೇಶ್ ನನ್ನು ಬಂಧಿಸಿ, ವಿಚಾರಣೆ ನಡೆಸಿದಾಗ ಸತ್ಯ ಬಯಲಿಗೆ ಬಂದಿದೆ. 

ಅಲ್ಲದೇ, ಪತ್ನಿಯೊಂದಿಗೆ ತನ್ನ ಅಣ್ಣ ಅಕ್ರಮ ಸಂಬಂಧ ಹೊಂದಿದ್ದರಿಂದಾಗಿ ಕೊಲೆ ಮಾಡಿರುವುದಾಗಿ ಆರೋಪಿ ಮುಖೇಶ್ ಹೇಳಿದ್ದಾನೆ. ಮೂರು ವರ್ಷಗಳ ಹಿಂದೆ ಪ್ರಕರಣವೊಂದರಲ್ಲಿ ಮುಖೇಶ್ ಜೈಲುಪಾಲಾಗಿದ್ದ ಸಂದರ್ಭದಲ್ಲಿ ಪತ್ನಿ, ಬಾವನ ಜೊತೆಯಲ್ಲಿ ಅಕ್ರಮ ಸಂಬಂಧ ಹೊಂದಿದದ್ದಳು. ಕೆಲವು ತಿಂಗಳ ಹಿಂದೆ ಜಾಮೀನಿನ ಮೇಲೆ ಹೊರ ಬಂದ ಮುಖೇಶ್ ನಿಗೆ ಈ ವಿಷಯ ಗೊತ್ತಾಗಿದೆ. 

ಹೀಗಾಗಿ ಜೈಲಿನಲ್ಲಿ ಪರಿಚಿತನಾಗಿದ್ದ ಅಶುತೋಷ್ ಸಹಾಯ ಪಡೆದು, ಕೊಲೆ ಮಾಡಿದ್ದಾಗಿ ರಾಕೇಶ್ ಒಪ್ಪಿಕೊಂಡಿದ್ದಾನೆ. 

Leave a Reply

Your email address will not be published. Required fields are marked *

You May Also Like

ಚೀನಾ ಬಗ್ಗೆ ನಿಖರ ಮಾಹಿತಿ ನೀಡಿ: ರಾಹುಲ್ ಗಾಂಧಿ

ದೆಹಲಿ: ಈ ತಿಂಗಳ ಆರಂಭದಲ್ಲಿ ಲಡಾಕ್ ನಲ್ಲಿ ಭಾರತ ಮತ್ತು ಚೀನ ಮಿಲಿಟರಿ ಮುಖಾಮುಖಿಯಾದ ಹಿನ್ನೆಲೆ…

ಶ್ರೀಮಂತರ ಪಟ್ಟಿಯಲ್ಲಿ ಕೆಳಕ್ಕೆ ಇಳಿದ ಮುಖೇಶ್ ಅಂಬಾನಿ!

ಮುಂಬಯಿ : ಫೋರ್ಬ್ಸ್ ಪಟ್ಟಿಯಲ್ಲಿ ಹಿಂದಕ್ಕೆ ಬಿದ್ದಿರುವ ಭಾರತೀಯ ಉದ್ಯಮಿ ಮುಖೇಶ್ ಅಂಬಾನಿ ಅವರು 9ನೇ ಸ್ಥಾನಕ್ಕೆ ಕುಸಿತ ಕಂಡಿದ್ದಾರೆ.

ನಡಕಟ್ಟಿನ ಕೂರಿಗೆ ಸಂಶೋಧನೆಗೆ ಪದ್ಮಶ್ರೀ ಪ್ರಶಸ್ತಿಯ ಗರಿ

ಧಾರವಾಡ: ಬಿತ್ತುವ ಕೂರಿಗೆ ತಜ್ಞ ಅಬ್ದುಲ್‌ ಖಾದರ್ ನಡಕಟ್ಟಿನ ಗೆ ಪದ್ಮಶ್ರೀ ಪ್ರಶಸ್ತಿಯ ಗರಿ ಹೌದು…

ಋತುಮತಿಯಾದ ತಕ್ಷಣ ಮುಸ್ಲಿಂ ಹೆಣ್ಣುಮಕ್ಕಳು ಮದುವೆಗೆ ಅರ್ಹರು : ಪಂಜಾಬ್-ಹರ್ಯಾಣ ಹೈಕೋರ್ಟ್ ತೀರ್ಪು

ಮುಸ್ಲಿಂ ಬಾಲಕಿಯರು ಋತುಮತಿಯಾದ ತಕ್ಷಣ ಮದುವೆಗೆ ಅರ್ಹತೆ ಪಡೆದುಕೊಳ್ಳುತ್ತಾರೆ. ಅಂಥ ಬಾಲಕಿಯರಿಗೆ 18 ವರ್ಷ ಪೂರ್ಣಗೊಳದೇ ಇದ್ದರೂ ಅವರ ವಿವಾಹ ಕಾನೂನುಬದ್ಧವಾಗಿರುತ್ತದೆ ಎಂದು ಪಂಜಾಬ್ ಮತ್ತು ಹರ್ಯಾಣ ಹೈಕೋರ್ಟ್ ತೀರ್ಪು ನೀಡಿದೆ.