ದೆಹಲಿ: ಈ ತಿಂಗಳ ಆರಂಭದಲ್ಲಿ ಲಡಾಕ್ ನಲ್ಲಿ ಭಾರತ ಮತ್ತು ಚೀನ ಮಿಲಿಟರಿ ಮುಖಾಮುಖಿಯಾದ ಹಿನ್ನೆಲೆ ಮತ್ತು ಚೀನಾದೊಂದಿಗೆ ಹೆಚ್ಚುತ್ತಿರುವ ಉದ್ವಿಗ್ನತೆಯ ಮಧ್ಯೆ ನಿಖರವಾಗಿ ಏನು ನಡೆಯುತ್ತಿದೆ ಎಂದು ದೇಶಕ್ಕೆ ತಿಳಿಸಿ ಎಂದು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ದೇಶದಲ್ಲಿ 1.6 ಲಕ್ಷಕ್ಕೂ ಹೆಚ್ಚು ಜನರಿಗೆ ತಗುಲಿರುವ ಕೊರೋನವೈರಸ್ ಸೋಂಕಿನ ವಿರುದ್ಧ ಭಾರತವು ಹೋರಾಡುತ್ತಿರುವಾಗ ಈ ವಿಷಯದಲ್ಲಿ ಕೇಂದ್ರ ಸರ್ಕಾರದ ನಿರಂತರ ಮೌನ ಬೃಹತ್ ಊಹಾಪೋಹ ಮತ್ತು ಅನಿಶ್ಚಿತತೆಗೆ ಕಾರಣವಾಗಿದೆ ಎಂದು ರಾಹುಲ್ ಹೇಳಿದ್ದಾರೆ. ಲಡಾಕ್ ನ ಪರಿಸ್ಥಿತಿ ಮತ್ತು ಚೀನಾದೊಂದಿಗಿನ ಉದ್ವಿಗ್ನತೆಯನ್ನು ಗಂಭೀರ ರಾಷ್ಟ್ರೀಯ ಕಾಳಜಿಯಾಗಿ ಪರಿಗಣಿಸಿ ಎಂದು ಕಾಂಗ್ರೆಸ್ ಹೇಳಿದೆ.
ಚೀನಾದೊಂದಿಗಿನ ಗಡಿ ಪರಿಸ್ಥಿತಿಯ ಬಗ್ಗೆ ಸರ್ಕಾರದ ಮೌನವು ಬಿಕ್ಕಟ್ಟಿನ ಸಮಯದಲ್ಲಿ ಭಾರಿ ಊಹಾಪೋಹಗಳಿಗೆ ಮತ್ತು ಅನಿಶ್ಚಿತತೆಗೆ ಉತ್ತೇಜನ ನೀಡುತ್ತಿದೆ. ಕೇಂದ್ರ ಸರ್ಕಾರ ಏನಾಗುತ್ತಿದೆ ಎಂಬುದನ್ನು ದೇಶಕ್ಕೆ ನಿಖರವಾಗಿ ಹೇಳಬೇಕು ಎಂದು ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ.
ಮೇ 5 ಮತ್ತು 6 ರಂದು ಲಡಾಕ್ ನ ಪಾಂಗೊಂಗ್ ಸರೋವರ ಪ್ರದೇಶದಲ್ಲಿ ಉಭಯ ರಾಷ್ಟ್ರಗಳ ಸೈನಿಕರ ನಡುವೆ ನಡೆದ ಮಾತಿನ ಚಕಮಕಿಯಲ್ಲಿ ಭಾರತ ಮತ್ತು ಚೀನಾ ನಡುವಿನ ಉದ್ವಿಗ್ನತೆ ಹೆಚ್ಚಾಗಿದ್ದು, ಇದರಲ್ಲಿ ಹಲವಾರು ಭಾರತೀಯ ಸೈನಿಕರು ಗಾಯಗೊಂಡಿದ್ದಾರೆ ಎನ್ನಲಾಗಿತ್ತು.
ಅಂದಿನಿಂದ, ಚೀನಾದ ಸೈನ್ಯದ ಆಕ್ರಮಣಗಳ ಬಗ್ಗೆ ಅನೇಕ ವರದಿಗಳು ಬಂದಿವೆ, ಚೀನಾ ಸೈನಿಕರನ್ನು ಪಂಗೊಂಗ್ ಸರೋವರದ ಮೋಟಾರು ದೋಣಿಗಳಲ್ಲಿ ಗುರುತಿಸಲಾಗಿದೆ. ಚೀನೀ ಹೆಲಿಕಾಪ್ಟರ್ ಗಳು ಸಹ ಈ ಪ್ರದೇಶದಲ್ಲಿ ಕಂಡುಬಂದಿವೆ.

Leave a Reply

Your email address will not be published. Required fields are marked *

You May Also Like

ಜಪಾನ್​ನ ಬೆತ್ತಲೆ ಹಬ್ಬದಲ್ಲಿ ಈ ಬಾರಿ ಆಯ್ದ ಜನರಿಗೆ ಮಾತ್ರ ಎಂಟ್ರಿ!

ಕೊರೋನಾ ಸೋಂಕಿನ ರಣಕೇಕೆಯಿಂದ ಸಾವಿರಾರು ಜನರು ಪ್ರಾಣ ಕಳೆದುಕೊಂಡರು. ಅಷ್ಟೇ ಅಲ್ಲದೇ ದೇಶ-ವಿದೇಶಗಳಲ್ಲಿಯೂ ಕೊರೊನಾ ಸೋಂಕಿನಿಂದಾಗಿ ಪ್ರತಿವರ್ಷ ನಡೆಯುತ್ತಿದ್ದ ಹಲವಾರು ಕಾರ್ಯಕ್ರಮಗಳು ಸ್ಥಗಿತಗೊಂಡಿವೆ.

ಕಾಂಗ್ರೆಸ್ ಪಕ್ಷವನ್ನು ಈ ಬಾರಿ ಬುಡಮೇಲು ಸಮೇತ ಜನರೇ ಕಿತ್ತೆಸೆಯುತ್ತಾರೆ – ಸಿ.ಟಿ.ರವಿ ವಾಗ್ದಾಳಿ

ಕುಕ್ಕರ್ ಬಾಂಬರ್ ಗಳಿಗೆ ಬಿರಿಯಾನಿ ತಿನ್ನಿಸುವವರು ಅಧಿಕಾರಕ್ಕೆ ಬಂದರೆ ಭದ್ರತೆಗೆ ಅಪಾಯ !ನಿಡಗುಂದಿ: ರಾಜ್ಯದಲ್ಲಿ ಕುಕ್ಕರ್…

ಕೇಂದ್ರದ ಮಾಜಿ ಸಚಿವ ಜಸ್ವಂತ್ ಸಿಂಗ್ ಇನ್ನಿಲ್ಲ!

ನವದೆಹಲಿ : ಕೇಂದ್ರದ ಮಾಜಿ ಸಚಿವ ಜಸ್ವಂತ್ ಸಿಂಗ್ (82) ಇಂದ ಬೆಳಿಗ್ಗೆ ಇಹಲೋಕ ತ್ಯಜಿಸಿದ್ದಾರೆ.…

ಕೋಲಾರದ ಸುತ್ತಮುತ್ತ ಆವರಿಸಿದೆ ಕೊರೊನಾ!

ಲಾಕ್ಡೌನ್ ಸಡಿಲಿಕೆ ಮಾಡಿದ್ದರಿಂದಾಗಿ ಹಾಗೂ ಗಡಿ ರಾಜ್ಯಗಳಲ್ಲಿ ಪತ್ತೆಯಾಗಿರುವ ಕೊರೊನಾ ಪ್ರರಕಣಗಳ ಸಂಖ್ಯೆಯಿಂದಾಗಿ ಜಿಲ್ಲೆಯ ಜನರದಲ್ಲಿ ಆತಂಕ ಮನೆ ಮಾಡಿದ್ದು, ಇಲ್ಲಿ ಕೂಡ ಕೊರೊನಾ ಭಯ ಕಾಡುತ್ತಿದೆ.