ಲಕ್ನೋ : ಪತ್ನಿಯ ಅನೈತಿಕ ಸಂಬಂಧಕ್ಕೆ ಬೇಸತ್ತ ಪತಿ, ತನ್ನ ಅಣ್ಣನನ್ನೇ ಕೊಲೆ ಮಾಡಿದ್ದ ಪ್ರಕರಣವನ್ನು ಪೊಲೀಸರು ಬೇಧಿಸಿದ್ದಾರೆ.
ಕಳೆದ ಎರಡು ತಿಂಗಳ ಹಿಂದೆ ಉತ್ತರ ಪ್ರದೇಶದ ಚಂದೌಲಿಯ ಧುರಿ ಕೋಟ್ ಗ್ರಾಮದ ಹತ್ತಿರ ರಾಕೇಶ್ ರೋಶನ್ ಎಂಬುವವರ ಮೃತ ದೇಹ ಪತ್ತೆಯಾಗಿತ್ತು. ತನಿಖೆ ಕೈಗೊಂಡಿದ್ದ ಪೊಲೀಸರು ಕೊಲೆಯ ರಹಸ್ಯ ಬಯಲಿಗೆ ತಂದಿದ್ದಾರೆ. ಅಲ್ಲದೇ, ಅ. 29ರಂದು ಎನ್ ಕೌಂಟರ್ ಪ್ರಕರಣದಲ್ಲಿ ಅಶುತೋಷ್ ಯಾದವ್ ಎಂಬ ಆರೋಪಿಯನ್ನು ಪೊಲೀಸರು ಬಂಧಿಸಿದ್ದರು.
ಈ ಸಂದರ್ಭದಲ್ಲಿ ಬಂಧಿಯಾಗಿರುವ ಆಶುತೋಷ್, ಕೊಲೆಯ ಕಥೆಯನ್ನು ಪೊಲೀಸರಿಗೆ ತಿಳಿಸಿದ್ದಾನೆ. ಮುಖೇಶ್ ಯಾದವ್ ಎಂಬ ವ್ಯಕ್ತಿಯೇ ರಾಕೇಶ್ ನನ್ನು ಕೊಲೆ ಮಾಡಿದ್ದು ಎಂಬುವುದು ತಿಳಿದಿದೆ. ಅದಕ್ಕೆ ನಾನು ಕೂಡ ಸಾಥ್ ನೀಡಿದ್ದೇನೆ ಎಂದು ಹೇಳಿದ್ದಾನೆ. ಈ ಹೇಳಿಕೆ ಆಧರಿಸಿ ಪೊಲೀಸರು, ಮುಖೇಶ್ ನನ್ನು ಬಂಧಿಸಿ, ವಿಚಾರಣೆ ನಡೆಸಿದಾಗ ಸತ್ಯ ಬಯಲಿಗೆ ಬಂದಿದೆ.
ಅಲ್ಲದೇ, ಪತ್ನಿಯೊಂದಿಗೆ ತನ್ನ ಅಣ್ಣ ಅಕ್ರಮ ಸಂಬಂಧ ಹೊಂದಿದ್ದರಿಂದಾಗಿ ಕೊಲೆ ಮಾಡಿರುವುದಾಗಿ ಆರೋಪಿ ಮುಖೇಶ್ ಹೇಳಿದ್ದಾನೆ. ಮೂರು ವರ್ಷಗಳ ಹಿಂದೆ ಪ್ರಕರಣವೊಂದರಲ್ಲಿ ಮುಖೇಶ್ ಜೈಲುಪಾಲಾಗಿದ್ದ ಸಂದರ್ಭದಲ್ಲಿ ಪತ್ನಿ, ಬಾವನ ಜೊತೆಯಲ್ಲಿ ಅಕ್ರಮ ಸಂಬಂಧ ಹೊಂದಿದದ್ದಳು. ಕೆಲವು ತಿಂಗಳ ಹಿಂದೆ ಜಾಮೀನಿನ ಮೇಲೆ ಹೊರ ಬಂದ ಮುಖೇಶ್ ನಿಗೆ ಈ ವಿಷಯ ಗೊತ್ತಾಗಿದೆ.
ಹೀಗಾಗಿ ಜೈಲಿನಲ್ಲಿ ಪರಿಚಿತನಾಗಿದ್ದ ಅಶುತೋಷ್ ಸಹಾಯ ಪಡೆದು, ಕೊಲೆ ಮಾಡಿದ್ದಾಗಿ ರಾಕೇಶ್ ಒಪ್ಪಿಕೊಂಡಿದ್ದಾನೆ.
