ಬೆಂಗಳೂರು : ಡಿಜೆ ಹಳ್ಳಿ ಹಾಗೂ ಕೆಜೆ ಹಳ್ಳಿ ಗಲಭೆಯ ಪ್ರಮುಖ ಆರೋಪಿ, ಮಾಜಿ ಮೇಯರ್ ಸಂಪತ್ ರಾಜ್ ಅವರ ಪತ್ತೆಗಾಗಿ ಸಿಸಿಬಿ ಪೊಲೀಸರು ವಿಶೇಷ ತಂಡ ರಚಿಸಿದ್ದಾರೆ.

ಸಂಪತ್ ರಾಜ್ ಅವರು, ಆಸ್ಪತ್ರೆಯಿಂದಲೇ ತಲೆ ತಪ್ಪಿಸಿಕೊಂಡಿದ್ದಾರೆ. ಅವರು, ಬೇರೆ ರಾಜ್ಯಕ್ಕೆ ಹೋಗಿರಬಹುದು ಎಂಬ ಶಂಕೆ ವ್ಯಕ್ತವಾಗುತ್ತಿದ್ದು, ಫೋನ್ ಕೂಡ ಸ್ವೀಚ್ ಆಫ್ ಆಗಿದೆ. ಇದರೊಂದಿಗೆ ಅವರ ಕುಟುಂಬಸ್ಥರನ್ನು ಪತ್ತೆ ಹಚ್ಚುವ ಕಾರ್ಯ ಕೂಡ ವಿಫಲವಾಗಿದೆ. ಸಂಪತ್ ರಾಜ್ ಇರುವಿಕೆಯ ಬಗ್ಗೆ ಸಿಸಿಬಿ ಅಧಿಕಾರಿಗಳಿಗೆ ಸುಳಿವು ಸಿಕ್ಕಿದೆ ಎಂದು ತಿಳಿದು ಬಂದಿದೆ. ಶೀಘ್ರದಲ್ಲಿಯೇ ಬಂಧಿಸಲಾಗುತ್ತದೆ ಎಂಬ ಮಾತು ಕೂಡ ಕೇಳಿ ಬರುತ್ತಿದೆ. 

ಸಂಪತ್ ರಾಜ್ ಬಿಡುಗಡೆಗೂ ಮುನ್ನ ಪೊಲೀಸರಿಗೆ ಮಾಹಿತಿ ನೀಡಬೇಕು ಎಂದು ಆಸ್ಪತ್ರೆ ಆಡಳಿತ ಮಂಡಳಿಗೆ ಸೂಚನೆ ನೀಡಲಾಗಿತ್ತು. ಅವರು ಕೂಡ ಅದನ್ನು ಪಾಲಿಸಿಲ್ಲ. ಹೀಗಾಗಿ ಆಸ್ಪತ್ರೆಗೂ ನೊಟೀಸ್ ನೀಡಲಾಗಿದೆ. 

ಡಿಜೆ ಹಳ್ಳಿ ಹಾಗೂ ಕೆಜೆ ಹಳ್ಳಿಯಲ್ಲಿ ನಡೆದ ಹಿಂಸಾಚಾರ ಪ್ರಕರಣದಲ್ಲಿ ಪ್ರಮುಖ ಆರೋಪಿಗಳಲ್ಲಿ ಒಬ್ಬರಾಗಿರುವ ಸಂಪತ್ ರಾಜ್, ಸೋಂಕು ತಗುಲಿರುವ ನೆಪದಲ್ಲಿ ಬ್ಯಾಪಿಸ್ಟ್ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ, ಸಿಸಿಬಿ ಅಧಿಕಾರಿಗಳು ತೆರಳುವ ಹೊತ್ತಿಗಾಗಲೇ ಡಿಸ್ಚಾರ್ಜ್ ಆಗಿ ಪರಾರಿಯಾಗಿದ್ದಾರೆ ಎನ್ನಲಾಗಿದೆ.

Leave a Reply

Your email address will not be published. Required fields are marked *

You May Also Like

ಆನ್‍ಲೈನ್ ಮೂಲಕ ಐ.ಟಿ.ಐ ಕೋರ್ಸಗಳಿಗೆ ಪ್ರವೇಶಾತಿ

ರಾಜ್ಯದ 270 ಸರಕಾರಿ ಹಾಗೂ 196 ಅನುದಾನಿತ ಕೈಗಾರಿಕಾ ತರಬೇತಿ ಸಂಸ್ಥೆಗಳಿಗೆ ಅಗಷ್ಟ-2020 ನೇ ಸಾಲಿಗೆ ಮೆರಿಟ್-ಕಂ-ರಿಸರ್ವೇಷನ್ ಆಧಾರಿತ ಪ್ರವೇಶಗಳನ್ನು ಆನ್‍ಲೈನ್ ಮುಖಾಂತರ ಮಾಡಲಾಗುತ್ತಿದೆ.

ಬ್ಯಾಂಕ್ ಗೆ ನುಗ್ಗಿ ಮ್ಯಾನೇಜರ್ ಮೇಲೆ ಹಲ್ಲೆ : ಆರೋಪಿ ಬಂಧನ

ಹಣ ಡ್ರಾ ಮಾಡಿಕೊಡುವಂತೆ ಬ್ಯಾಂಕ್ ಮ್ಯಾನೇಜರ್ ಒಬ್ಬರ ಮನೆಗೆ ನುಗ್ಗಿದ ಇಬ್ಬರು ಮ್ಯಾನೇಜರ್ ಮೇಲೆ ದರ್ಪ ತೋರಿದ ಘಟನೆ ಬಾಲೆಹೊಸೂರು ಗ್ರಾಮದಲ್ಲಿ ನಡೆದಿತ್ತು.

ಕಾಂಗ್ರೆಸ್ ಅಭ್ಯರ್ಥಿ ಸಲೀಂ ಅಹ್ಮದ್ ಜಯ ಕಾಂಗ್ರೇಸ್ ಕಾರ್ಯಕರ್ತರಿಂದ ಸಂಭ್ರಮಾಚರಣೆ

ಉತ್ತರಪ್ರಭ ಲಕ್ಷ್ಮೇಶ್ವರ: ಧಾರವಾಡ ವಿಧಾನ ಪರಿಷತ್ ಚುಣಾವಣೆಯ ಮತ ಎಣಿಕೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸಲೀಂ ಅಹ್ಮದ್…

ಕಸಾಪ ಜಿಲ್ಲಾಧ್ಯಕ್ಷ ಶರಣು ಹೇಳಿಕೆ: ಸಾಹಿತ್ಯ ಭವನಗಳ ಕಾಮಗಾರಿ ಪೂರ್ಣಗೊಳಿಸಿದ ಹೆಮ್ಮೆ ಇದೆ

ರಾಜ್ಯಕ್ಕೆ ಮಾದರಿಯಾದ ಜಿಲ್ಲಾ ಸಾಹಿತ್ಯ ಭವನ ಕಳೆದ 24 ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ರೋಣ ತಾಲೂಕ ಕನ್ನಡ ಸಾಹಿತ್ಯ ಭವನಗಳು ನಮ್ಮ ಅವಧಿಯಲ್ಲಿ ಪೂರ್ಣಗೊಳಿಸಿ ಉದ್ಘಾಟನೆಯಾಗಿರುವುದು ಹೆಮ್ಮೆಯ ಸಂಗತಿಯಾಗಿದೆ