ಮೈಸೂರು : ತಾಯಿ ಚಾಮುಂಡೇಶ್ವರಿಗೆ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರು ಹರಿಕೆ ತೀರಿಸಿದ್ದಾರೆ.
ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರು, ನಾಡ ಹಬ್ಬ ಯಶಸ್ವಿಯಾಗಲಿ ಎಂದು ಹರಕೆ ಹೊತ್ತಿದ್ದರು. ಹೀಗಾಗಿ ತಮ್ಮ ತಂದೆ, ತಾಯಿ ಹಾಗೂ ಮಗುವಿನೊಂದಿಗೆ ಚಾಮುಂಡಿಯ ಪಲ್ಲಕ್ಕಿ ರಥ ಎಳೆಯುವ ಮೂಲಕ ಹರಕೆ ತೀರಿಸಿದ್ದಾರೆ. ನಾಡ ಹಬ್ಬದ ಸಂದರ್ಭದಲ್ಲಿಯೇ ಅವರು ಮೈಸೂರು ಜಿಲ್ಲೆಯ ಜಿಲ್ಲಾಧಿಕಾರಿಯಾಗಿ ನೇಮಕವಾಗಿದ್ದರು. ಹೀಗಾಗಿ ಇದು ಸುಸೂತ್ರವಾಗಿ ನಡೆಯಲಿ ಎಂಬ ಕಾರಣಕ್ಕೆ ಹರಕೆ ಹೊತ್ತಿದ್ದಾರೆ.
ನವರಾತ್ರಿಯ 9ನೇ ದಿನ ಪಲ್ಲಕ್ಕಿ ರಥ ಎಳೆದು ಹರಕೆ ತೀರಿಸಿದ್ದಾರೆ. ದಸಾರದ ಪ್ರಮುಖ ಆಕರ್ಷಣೆ ಎಂದರೆ ದು ಜಂಬೂ ಸವಾರಿ. ದೇಶ – ವಿದೇಶದಿಂದ ಜನರು ಆಗಮಿಸಿ ಇದನ್ನು ಕಣ್ಣು ತುಂಬಿಕೊಳ್ಳುತ್ತಿದ್ದರು. ಆದರೆ, ಈ ವರ್ಷ ಕೊರೊನಾದ ಹಿನ್ನೆಲೆಯಲ್ಲಿ ಇದು ಸರಳವಾಗಿ ನಡೆದಿದೆ.
ಕೇವಲ 500 ಮೀಟರ್ ಗೆ ಮಾತ್ರ ಸೀಮಿತವಾಗುವಂತೆ ಸವಾರಿ ನಡೆಸಲಾಗಿತ್ತು. ನಂದಿ ಧ್ವಜಕ್ಕೆ ಪೂಜೆ ಸಲ್ಲಿಸಿದ ನಂತರ, ಕುಂಭಲಗ್ನದಲ್ಲಿ ಸಿಎಂ ಯಡಿಯೂರಪ್ಪ ಅರಮನೆಯ ಕೋಟೆ ಆಂಜನೇಯ ಸ್ವಾಮಿ ದೇವಾಲಯದ ಮುಂಭಾಗದಲ್ಲಿ ನಂದಿಧ್ವಜಕ್ಕೆ ಪೂಜೆ ನೆರವೇರಿಸಿದ್ದರು. ಹಬ್ಬ ಈ ಬಾರಿ ಕೇವಲ 23 ನಿಮಿಷಗಳಲ್ಲಿ ಪೂರ್ತಿಯಾಯಿತು.