ಲಕ್ನೋ : ರಾಜಕೀಯ ಮುಖಂಡರೊಬ್ಬರ ಪತ್ನಿ ಫೇಸ್‍ ಬುಕ್ ಗೆಳೆಯನ ಜೊತೆ ಓಡಿ ಹೋಗಿರುವ ಘಟನೆ ಉತ್ತರ ಪ್ರದೇಶದ ಅಮ್ರೋಹ ನಗರದ ಕೊತವಾಲಿಯಲ್ಲಿ ನಡೆದಿದೆ.

ಆದರೆ, ಇನ್ನೊಂದೆಡೆ ಈ ಮಹಿಳೆಯ ಇಬ್ಬರು ಮಕ್ಕಳು ತಾಯಿಗಾಗಿ ಕಣ್ಣೀರು ಹಾಕುತ್ತಿದ್ದಾರೆ. ಮಹಿಳೆಯ ಪತಿ ಸ್ಥಳೀಯ ಪ್ರಭಾವಿ ಮುಖಂಡರಾಗಿದ್ದಾರೆ. ಸದ್ಯ ತಮ್ಮ ಪತ್ನಿಯ ಕುರಿತು ದೂರು ಸಲ್ಲಿಸಲು ಹಿಂದೇಟು ಹಾಕುತ್ತಿದ್ದು, ತಮ್ಮ ಬೆಂಬಲಿಗರು ಮತ್ತು ಕುಟುಂಬಸ್ಥರ ಸಹಾಯದಿಂದ ಪತ್ನಿಯನ್ನು ಹುಡುಕಿಸುತ್ತಿದ್ದಾರೆ ಎಂದು ತಿಳಿದು ಬಂದಿದೆ.

ಈ ಮಹಿಳೆ ಸದಾ ಕಾಲಾ ಸಾಮಾಜಿಕ ಜಾಲತಾಣದಲ್ಲಿ ಸಕ್ರೀಯರಾಗಿರುತ್ತಿದ್ದರು. ವ್ಯಕ್ತಿಯೊಬ್ಬ ಇವರಿಗೆ ಫೇಸ್ ಬುಕ್ ಮೂಲಕ ಪರಿಚಯವಾಗಿದ್ದ. ಹೀಗಾಗಿ ಆತನ ಮೇಲೆಯೇ ಸದ್ಯ ಶಂಕೆ ವ್ಯಕ್ತಪಡಿಸಿದ್ದಾರೆ. 

ಮೊದಲಿಗೆ ಸಂಬಂಧಿಕರ ಮನೆ ಅಥವಾ ಊರಿಗೆ ತೆರಳಿರಬಹುದು ಎಂದು ಕುಟುಂಬಸ್ಥರು ಅಂದಾಜಿಸಿದ್ದರು. ಆದರೆ, ಎಲ್ಲ ಕಡೆ ವಿಚಾರಿಸಿದ ನಂತರ ಮಹಿಳೆ ಪತ್ತೆಯಾಗದಿದ್ದಾಗ ಫೇಸ್‍ ಬುಕ್ ಗೆಳೆಯನ ಜೊತೆ ಪಲಾಯನ ಮಾಡಿರುವ ಖಚಿತ ಸುಳಿವು ಸಿಕ್ಕಿದೆ.

Leave a Reply

Your email address will not be published. Required fields are marked *

You May Also Like

ಶಿರಹಟ್ಟಿ: ಗ್ರಾಮ ದೇವತೆ ದ್ಯಾಮವ್ವದೇವಿಯ ಜಾತ್ರೆಗೆ ಸಂಭ್ರಮದ ತೆರೆ

ಶಿರಹಟ್ಟಿ: ಪಟ್ಟಣದ ಗ್ರಾಮದೇವತೆ ದ್ಯಾಮವ್ವ ದೇವಿಯ ಜಾತ್ರೆಯು ಕಳೆದ 3 ದಿನಗಳಿಂದ ಅತ್ಯಂತ ವೈಭವದಿಂದ ಜರುಗಿದ್ದು, ಗುರುವಾರ ಸಲಕ ವಾದ್ಯ ಮೇಳಗಳೊಂದಿಗೆ ದ್ಯಾಮವ್ವ ದೇವಿಯನ್ನು ಗುಡಿ ದುಂಬಿಸುವದರ ಮೂಲಕ ಜಾತ್ರೆಗೆ ಸಂಭ್ರಮದ ತೆರೆ ಎಳೆಯಲಾಯಿತು.

ಜನಪದ ಜನರ ಜೀವನಾಡಿ; ಜನಪದ ಕಲಾವಿದರಿಗೆ ಹೆಚ್ಚಿನ ಗೌರವಗಳು ಸಿಗಬೇಕು: ರವಿಕಾಂತ ಅಂಗಡಿ

ಉತ್ತರಪ್ರಭ ಸುದ್ದಿಗದಗ: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ ಗದಗ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಗದಗ,…

ಲಕ್ಷ್ಮೇಶ್ವರ: ಕೊರೊನಾ ವಾರಿಯರ್ಸ್ ಗೆ ಶಿಕ್ಷಕನ ಸೇವೆ

ವೀಕೆಂಡ್ ಕರ್ಫ್ಯೂಗೆ ಪಟ್ಟಣದಲ್ಲಿ ಜನತೆ ಸಾಥ್ ನೀಡಿದ್ದು ಜನರು ಇಲ್ಲದೇ ಬಸ್ಟ್ಯಾಂಡ್, ಬಾನು ಮಾರ್ಕೆಟ್ ಸೇರಿದಂತೆ ಅನೇಕ ಕಡೆಗಳಲ್ಲಿ ಬಿಕೋ ಎನ್ನುತ್ತಿದೆ.

ಜಕ್ಕಲಿಯಲ್ಲಿ ಟೆಂಗಿನ ಮರಕ್ಕೆ ಸಿಡಿಲು!

ಟೆಂಗಿನ ಮರಕ್ಕೆ ಸಿಡಿಲು ಬಡಿದು ದಗದಗ ಹೊತ್ತಿ ಉರಿದ ಘಟನೆ ನರೇಗಲ್ಲ ಸಮೀಪದ ಜಕ್ಕಲಿ ಗ್ರಾಮದಲ್ಲಿ ನಡೆದಿದೆ.