ದುಬೈ : ಗೆಲ್ಲುವ ಫೇವರಿಟ್ ತಂಡವಾಗಿದ್ದ ಆರ್ ಸಿಬಿಯು ಚೆನ್ನೈ ತಂಡದ ವಿರುದ್ಧ ಹೀನಾಯ ಸೋಲು ಕಂಡಿದೆ. ಇದಕ್ಕೆ ಅಭಿಮಾನಿಗಳು ಬೇಸರ ವ್ಯಕ್ತಪಡಿಸುತ್ತಿದ್ದಾರೆ.

ಈ ಬಾರಿ ಆರ್ ಸಿಬಿಗೆ ಗೋ ಗ್ರೀನ್ ಮಂತ್ರ ಯಶಸ್ಸು ನೀಡಲಿಲ್ಲ. ಹಸಿರು ಜೆರ್ಸಿ ತೊಟ್ಟಿ ಆಡಿದ ಪ್ರತಿಯೊಂದು ಪಂದ್ಯದಲ್ಲಿಯೂ ಆರ್ ಸಿಬಿ ಭರ್ಜರಿ ಜಯ ದಾಖಲಿಸಿತ್ತು. ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡ ಆರ್ ಸಿಬಿಗೆ ಬ್ಯಾಟ್ಸಮನ್ ಗಳ ವೈಫಲ್ಯ ತಲೆನೋವಾಯಿತು. ಪರಿಣಾಮ ತಂಡವು ಕೇವಲ 20 ಓವರ್ ಗಳಲ್ಲಿ 6 ವಿಕೆಟ್ ಕಳೆದುಕೊಂಡು 145 ರನ್ ಮಾತ್ರ ಗಳಿಸಿತು.

ಗುರಿ ಬೆನ್ನಟ್ಟಿದ ಚೆನ್ನೈ ಪಡೆ 18.4 ಓವರ್ ಗಳಲ್ಲಿ 2 ವಿಕೆಟ್‌ ಕಳೆದುಕೊಂಡು 150 ರನ್‌ ಸಿಡಿಸಿತು. ಈ ಗೆಲುವಿನೊಂದಿಗೆ ಪ್ಲೇ ಆಫ್ ಕನಿಸಿಗೆ ಚೆನ್ನೈ ತಂಡ ಜೀವ ನೀಡಿತು. ಪಂದ್ಯ ಮುಕ್ತಾಯದ ನಂತರ ಆರ್ ಸಿಬಿ ತಂಡದ ನಾಯಕ ವಿರಾಟ್ ಮಾತನಾಡಿ, ಸೋಲಿಗೆ ಬೌಲರ್‌ ಗಳ ಕೆಟ್ಟ ಪ್ರದರ್ಶನ ಕಾರಣವಾಯಿತು.

ಪಿಚ್‌ ವರ್ತಿಸಿದ ರೀತಿ ತದ್ವಿರುದ್ಧವಾಗಿತ್ತು. ಅಲ್ಲದೇ, ನೇರ ಹಾಗೂ ನಿಖರತೆಯ ಬೌಲಿಂಗ್ ದಾಳಿ ಕಾಣಿಸಲಿಲ್ಲ. ಬೌಂಡರಿ ಬಾರಿಸಲು ಅನುಕೂಲವಾಗುವ ಬೌಲ್ ಗಳನ್ನೇ ಹೆಚ್ಚಾಗಿ ಎಸೆಯಲಾಯಿತು. ಆದರೆ, ಎದುರಾಳಿ ತಂಡ ಹೆಚ್ಚು ನಿಖರವಾಗಿ ಬೌಲಿಂಗ್‌ ಮಾಡಿ ನಮ್ಮ ಸ್ಟಂಪ್ಸ್ ಗಳ ಮೇಲೆಯೇ ಗುರಿ ಇಟ್ಟಿತ್ತು ಎಂದು ಹೇಳಿದ್ದಾರೆ.

ರಾಯಲ್‌ ಚಾಲೆಂಜರ್ಸ್‌ ತಂಡವು 14 ಅಂಕಗಳೊಂದಿಗೆ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ. ಮುಂಬಯಿ ಇಂಡಿಯನ್ಸ್ ಹಾಗೂ ದೆಹಲಿ ಕ್ಯಾಪಿಟಲ್ಸ್ ತಂಡಗಳೊಂದಿಗೆ ಸಮನಾದ ಅಂಕ ಸಾಧಿಸಿದೆ. ಹೀಗಾಗಿ ಮುಂದಿನ ಮೂರು ಪಂದ್ಯಗಳು ಆರ್ ಸಿಬಿಗೆ ನಿರ್ಣಾಯಕ ಅಂಕ ಗಳಿಗೆ 16ಕ್ಕೆ ಏರಿಕೆ ಕಂಡರೆ ಪ್ಲೇ ಆಫ್ ಸ್ಥಾನ ಖಾತ್ರಿಯಾಗಲಿದೆ.

Leave a Reply

Your email address will not be published. Required fields are marked *

You May Also Like

ಡ್ಯಾರೆನ್ ಜನಾಂಗೀಯ ನಿಂದನೆಗೆ ಒಳಗಾಗಿದ್ದು ಸತ್ಯವೇ?

ಹೈದರಾಬಾದ್:  ಇಂಡಿಯನ್ ಪ್ರೀಮಿಯರ್ ಲೀಗ್ ನಲ್ಲಿ ಭಾಗವಹಿಸಿದ್ದ ಸಂದರ್ಭದಲ್ಲಿ ಜನಾಂಗೀಯ ನಿಂದನೆಗೆ ಒಳಗಾಗಿದ್ದೆ ಎಂದು ವೆಸ್ಟ್…

ಕ್ರೀಡೆಗಳಿಂದ ಆರೋಗ್ಯಕರ ಭಾವನೆ

ಉತ್ತರಪ್ರಭ ಸುದ್ದಿನಿಡಗುಂದಿ: ಹಲ ಬಗೆಯ ಕ್ರೀಡೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವದರಿಂದ ನಮ್ಮ ಆರೋಗ್ಯ ರಕ್ಷಣೆ ಮಾಡಲು ಸಾಧ್ಯ…

ಧೋನಿಗಿಂದು ಜನ್ಮದಿನ: ವಯಸ್ಸು ನಲವತ್ತು, ಹಂಗೇ ಇದೆ ಗೆಲ್ಲುವ ತಾಕತ್ತು

ನವದೆಹಲಿ: ಮ್ಯಾಚ್ ವಿನ್ನರ್ ಮಹೇಂದ್ರ ಸಿಂಗ್ ಧೋನಿ ಇಂದು ತಮ್ಮ 40ನೇ ಹುಟ್ಟು ಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ.…

ಸೇಡು ತೀರಿಸಿಕೊಳ್ಳುವುದರ ಮೂಲಕ ಗೆಲುವಿನ ಲಯ ಕಂಡುಕೊಂಡ ಚೆನ್ನೈ!

ದುಬೈ : ಆರ್ ಸಿಬಿ ತಂಡದ ವಿರುದ್ಧ ನಡೆದ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಎಂಟು ವಿಕೆಟ್ ಗಳ ಭರ್ಜರಿ ಜಯ ಗಳಿಸಿದೆ. ಈ ಮೂಲಕ ತನ್ನ ಪ್ಲೇ ಆಫ್ ಕನಸನ್ನು ಜೀವಂತವಾಗಿರಿಸಿಕೊಂಡಿದೆ.